ವಿಶ್ವದಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ

0
2

ಕೋಲ್ಕತಾ- ವಿಶ್ವದಲ್ಲಿ ಪ್ರತಿ ಹತ್ತು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಶೇಕಡಾ 79ರಷ್ಟು ಆತ್ಮಹತ್ಯೆ ಪ್ರಕರಣಗಳು ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯ ಪಡೆಯುವ ದೇಶಗಳಲ್ಲೇ ಸಂಭವಿಸುತ್ತಿದೆ ಎಂಬ ಮಾಹಿತಿಯೂ ಬೆಳಕಿದೆ ಬಂದಿದೆ.
ಹೆಚ್ಚು ಆದಾಯವಿರುವ ದೇಶಗಳಲ್ಲಿ ಮಹಿಳೆಯರಿಗಿಂತಲೂ ಸುಮಾರು ಮೂರು ಪಟ್ಟು ಹೆಚ್ಚು ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದೂ ವರದಿ ಹೇಳಿದೆ.
ಆತ್ಮಹತ್ಯೆ ಕುರಿತು ಡಬ್ಲ್ಯುಎಚ್‌ಒನ ಮೊದಲ ಜಾಗತಿಕ ವರದಿ ಪ್ರಕಟಿಸಿದ ಐದು ವರ್ಷಗಳಲ್ಲಿ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ತಂತ್ರ ಹೊಂದಿರುವ ದೇಶಗಳ ಸಂಖ್ಯೆ ಹೆಚ್ಚಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಪ್ರತಿ ವರ್ಷ ಸೆಪ್ಟೆಂಬರ್ 10 ಅನ್ನು ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನಾಗಿ ಆಚರಿಸುತ್ತಿದೆ
ಪ್ರಗತಿಯ ಹೊರತಾಗಿಯೂ, ಆತ್ಮಹತ್ಯೆಯಿಂದ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಇನ್ನೂ ಜೀವ ಕಳೆದುಕೊಳ್ಳುತ್ತಿದ್ದಾನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಪ್ರತಿ ಸಾವು, ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ದುರಂತವಾಗಿ ಕಾಡುತ್ತದೆ. ಇನ್ನೂ ಆತ್ಮಹತ್ಯೆಗಳನ್ನು ತಡೆಗಟ್ಟುವ ಕಾರ್ಯತಂತ್ರಗಳನ್ನು ರಾಷ್ಟ್ರೀಯ ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳಲ್ಲಿ ಸುಸ್ಥಿರ ರೀತಿಯಲ್ಲಿ ಸೇರಿಸಲು ಎಲ್ಲ ದೇಶಗಳಿಗೆ ಕರೆ ನೀಡಲಾಗಿದೆ ಎಂದು ಅವರು ಹೇಳಿದರು.
ಶೇಕಡಾ 79 ರಷ್ಟು ಆತ್ಮಹತ್ಯೆಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸಿದರೆ, ಹೆಚ್ಚು ಆದಾಯದ ಗಳಿಸುವ ದೇಶಗಳಲ್ಲಿ ಈ ಪ್ರಮಾಣ 100 000ಕ್ಕೆ 11.5 ರಷ್ಟಿದೆ.
ವಿಶ್ವಸಂಸ್ಥೆ ವರದಿ ಪ್ರಕಾರ, ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ವ್ಯತಿರಿಕ್ತವಾಗಿ, ಹೆಚ್ಚು  ಆದಾಯವಿರುವ ದೇಶಗಳಲ್ಲಿ ಮಹಿಳೆಯರಿಗಿಂತ ಸುಮಾರು ಮೂರು ಪಟ್ಟು ಹೆಚ್ಚು ಪುರುಷರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ
ಆತ್ಮಹತ್ಯೆಯ ಸಾಮಾನ್ಯ ವಿಧಾನಗಳೆಂದರೆ ನೇಣು ಹಾಕಿಕೊಳ್ಳುವುದು, ಕೀಟನಾಶಕ ಸೇವನೆ  ಸ್ವಯಂ ಗುಂಡು ಹಾರಿಸಿಕೊಳ್ಳುವುದು ಸೇರಿದೆ.
ಆತ್ಮಹತ್ಯೆಯ ಜವಾಬ್ದಾರಿಯುತ ವರದಿಯ ಬಗ್ಗೆ ಮಾಧ್ಯಮಗಳಿಗೆ ಶಿಕ್ಷಣ ನೀಡಿ, ಜೀವನ ಒತ್ತಡ ನಿಭಾಯಿಸಲು ಅನುವು ಮಾಡಿಕೊಟ್ಟು ಜೀವನ ಕೌಶಲ್ಯ ಬೆಳೆಸುವ ಕಾರ್ಯಕ್ರಮದ ಮೂಲಕ  ಆತ್ಮಹತ್ಯೆಯ ಮನಸ್ಥಿತಿಯ ಜನರನ್ನು ಮೊದಲೇ ಗುರುತಿಸಿ ಅವರಲ್ಲಿ ಹೊಸ ಭರವಸೆ ಮೂಡಿಸುವ ಮೂಲಕ ಇದನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದಾಗಿದೆ.

loading...