ವಿಶ್ವದ ಪ್ರಥಮ ಸಂಸತ್ತಿನ ನಿರ್ಮಾಪಕ ವಿಶ್ವಗುರು ಬಸವಣ್ಣ : ಗೋಲಗುಂಡ

0
60

ಹುನಗುಂದ-ಎಂಟು ನೂರ ವರ್ಷಗಳ ಹಿಂದೆ ಹಿಂದುಳಿದ,ದಲಿತ,ಶೋಷಿತ,ರೈತ,ಕಾರ್ಮಿಕ ಜಾತಿ ಭೇದವಿಲ್ಲದೇ ಜಾತಿ ವಿನಾಶಕ ಚಳುವಳಿಯನ್ನು ವಿಶ್ವದ ಪ್ರಥಮ ಸಂಸತ್ತು ಎಂಬ ಅನುಭವ ಮಂಟಪದಲ್ಲಿ ಹನ್ನೊಂದು ನೂರು ಅರಗಣಂಗಳು,300 ವಚನಕಾರರು,23 ವಚನಗಾರ್ತಿಯರು ಕಾಯಕ,ದಾಸೋಹದ ಮೂಲಕ ವೈಚಾರಿಕವಾಗಿ ಸಮಾನತೆಯ ಸಮಾಜವನ್ನು ಅಂದು ವಿಶ್ವಗುರು ಬಸವಣ್ಣನವರು ಕಟ್ಟಿದರು ಎಂದು ವಿ.ಮ.ಕಾಲೇಜನ ಪ್ರಾದ್ಯಾಪಕ ಶ್ರೀಶೈಲ ಗೋಲಗುಂಡ ಹೇಳಿದರು.
ಅವರು ತಾಲೂಕಿನ ಹಿರೇಬಾದವಾಡಗಿ ಗ್ರಾಮದ ಶ್ರೀ ವಿಜಯಮಹಾಂತೇಶ್ವರ ಮಠದಲ್ಲಿ ನಡೆದ 365ನೆಯ ಮಾಸಿಕ ಶಿವಾನುಭವ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿ ಶರಣರು ನುಡಿದಂತೆ ನಡೆದು ಬದುಕಿ ನಮಗೆಲ್ಲಾ ಮಾದರಿಯಾಗಿ ವೈಜ್ಞಾನಿಕ ಸಮಾಜ ನಿರ್ಮಾಣಕ್ಕಾಗಿ ಹಾಗೂ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ 20 ಸಾವಿರ ವಚನಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವೀರಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವಚನ ನೃತ್ಯ ಕಾರ್ಯಕ್ರಮ ನಡೆಯಿತು.ಶಿಕ್ಷಕಿ ಕಸ್ತೂರಿ ಕೊನೆಸಾಗರ ಸ್ವಾಗತಿಸಿದರು,ಶರಣು ರೇವಡಿ ನಿರೂಪಿಸಿದರು,ರಾಮನಗೌಡ ಬಸನಗೌಡ್ರ ವಂದಿಸಿದರು.

loading...