ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ

0
13

ಮುಂಡಗೋಡ: ಜನಸಾಮಾನ್ಯರಿಗೆ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಮುಂಡಗೋಡ ತಾಲೂಕಿನಾದ್ಯಂತ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇತ್ತಿಚಿನ ದಿನಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ತಂಬಾಕು ಸೇವನೆಯಲ್ಲಿ ಮುಳುಗಿರುತ್ತಾರೆ. ಇಂತಹ ಯುವಕರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುವುದಿಲ್ಲ ಎಂದು ಮುಂಡಗೋಡ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಈರನಗೌಡ ಕೆ ಕಬ್ಬೂರ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿ£ ಚವಡಳ್ಳಿ ಗ್ರಾಮ ಪಂಚಾಯತ ಸಮೂದಾಯ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ ಮುಂಡಗೋಡ, ವಕೀಲರ ಸಂಘ ಮುಂಡಗೋಡ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ದsರ್ಮಸ್ಥಳ ಗ್ರಾಮೀಣಾ¨Àsವೃದ್ಧಿ ಸಂಘ ಮುಂಡಗೋಡ ಹಾಗೂ ವಿವಿದs ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶಕ್ಕೆ ಆರೋಗ್ಯವಂತ ನಾಗರಿಕರನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗೂ ತಂಬಾಕು ಮಾರಾಟ ಮಾಡುವುದು ಕಾನೂನಿನಡಿಯಲ್ಲಿ ಶಿಕ್ಷಾರರ್ಹ ಅಪರಾದವಾಗುತ್ತದೆ. ತಂಬಾಕು ಸೇವನೆಯಿಂದ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಗಂಟಲು ಬೆನೆ, ಹೃದಯ ಸಮಸ್ಶೆ ಕ್ಯಾನ್ಸರ್‌, ಹೀಗೆ ಹಲವಾರು ಕಾಯಿಲೆಗಳು ಬಂದು ಒಂದು ದಿನ ಮರಣ ಹೊಂದಬೇಕಾಗುತ್ತದೆ. ಕುಟುಂಬ ಸದಸ್ಯರು ಮನೆಯ ಯಜಮಾನನ್ನು ಕಳೆದುಕೊಡು ಪೂರ್ತಿ ಕುಟುಂಬ ಬಿದಿಗೆ ಬರಬೇಕಾಗುತ್ತದೆ. ಆದ್ದರಿಂದ ಮಹಿಳೆಯರು ನಿಮ್ಮ ನಿಮ್ಮ ಮನೆಯಲ್ಲಿ ಗಂಡ-ಮಕ್ಕಳು ಯಾರಾದರೂ ತಂಬಾಕು ಸೇವನೆ ಮಾಡುತ್ತಿದ್ದರೆ ಅಂತಹ ದುಷ್ಚಟಗಳಿಂದ ಅವರನ್ನು ಮುಕ್ತಗೊಳಿಸಲು ತಿಳುವಳಿಕೆ ನೀಡಬೇಕು. ಇಲ್ಲವಾದರೆ ಕುಟುಂಬವು ಈ ದುಷ್ಚಟದಿಂದ ಸರ್ವನಾಶವಾಗುತ್ತದೆ. ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಉಪಯೋಗ ಪಡೆದುಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದು ಎಂದು ಮಾನ್ಯ ನ್ಯಾಯಾಧೀಶರು ಕರೆ ನೀಡಿದರು. ಉಪನ್ಯಾಸಕರಾಗಿ ಆಗಮಿಸಿದ ಎಸ್‌. ಎಸ್‌. ಪಟ್ಟಣಶೇಟ್ಟಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮುಂಡಗೋಡ ಇವರು ಮಾತನಾಡುತ್ತ ತಂಬಾಕು ಸೇವನೆ ಮಾಡುವುದರಿಂದ ಬರುವಂತಹ ಮಾರಣಾಂತಿಕ ಖಾಯಿಲೆಗಳು, ನಂತರದ ದಿನಗಳಲ್ಲಿ ಕುಟುಂಬವು ಅನು¨Àsವಿಸುವ ಕಷ್ಟಗಳ ಕುರಿತು ಸವಿಸ್ತಾರವಾಗಿ ಮಹಿಳೆಯರಿಗೆ ತಿಳಿಸಿಕೊಟ್ಟರು. ಹಾಗೂ ತಂಬಾಕು ಮಿಶ್ರಣಗಳನ್ನು ಮಾರಾಟಗಾರರ ಮೇಲೆ ಕಾನೂನು ಅಡಿಯಲ್ಲಿ ದಂಡ ಹಾಗೂ ಶಿಕ್ಷೆಗೆ ಗುರಿ ಪಡಿಸುವಂತಹ ಕಾನೂನುಗಳನ್ನು 2003 ರಲ್ಲಿ ಜಾರಿಗೆ ತರಲಾಗಿದೆ. ಹಾಗಾಗಿ ತಂಬಾಕು ಸೇವನೆ ಕುರಿತು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ ತಂಬಾಕುವಿನಿಂದ ದೂರವಿರಿ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅದs್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅದs್ಯಕ್ಷರಾದ ಜಿ. ಎಸ್‌. ಕಾತೂರ ಇವರು ಮಾತನಾಡುತ್ತ, ಸಾರ್ವಜನೀಕರು ಇಂತಹ ವ್ಯಸನಗಳಿಂದ ದೂರವಿರಬೇಕು. ದುಷ್ಚಟಗಳು ಕೂಡಾ ಸಮಾಜದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿ ಸಮಾಜದ ಏಳಿಗೆಗೆ ದಕ್ಕೆಯುಂಟಾಗುತ್ತದೆ.
ಎಲ್ಲರೂ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಾಃ ಪದ್ಮಪ್ರೀಯಾ,ಆರ್‌. ಬಿ. ಹುಬ್ಳಿ, ಗೂಡುಸಾಬ ಬಮ್ಮಿಗಟ್ಟಿ, ಹಾಗೂ ರಾಕೇಶ, ಮುಂತಾದವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ದsರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಮುಂಡಗೋಡ ವಿಭಾಗದ ಸಂಯೋಜಕರಾದ ವಿಜಯಾ ಹೇಗಡೆ ಕಾರ್ಯಕ್ರಮದ ಸ್ವಾಗತ, ನಿರೂಪಣೆ, ಹಾಗೂ ವಂದನಾರ್ಪಣೆಯನ್ನು ಮಾಡಿ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.

loading...