ವಿಶ್ವ ದಾದಿಯರ ದಿನಾಚರಣೆ

0
36

ದಾಂಡೇಲಿ : ನಗರದ ಕೆ.ಎಲ್.ಇ ಸಂಸ್ಥೆಯ ಶುಶ್ರೂಷ್ರಾ ಮಹಾವಿದ್ಯಾಲಯದ ಆಶ್ರಯದಲ್ಲಿ “ವಿಶ್ವ ದಾದಿಯರ ದಿನಾಚರಣೆ” ಯನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಶ್ವ ದಾದಿಯರ ದಿನಾಚರಣೆಯ ನಿಮಿತ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳಿಗೆ ಮಾನಸಿಕ ದೃಢÀತೆಯ ಕುರಿತು ಪ್ರೊÃತ್ಸಾಹ ನೀಡಲಾಯಿತು ಹಾಗು ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಂಚಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಕೆ.ಎಲ್.ಇ ನರ್ಸಿಂಗ್ ವಿದ್ಯಾಲಯದ ಪ್ರಾಚಾರ್ಯ ವಿನಾಯಕ ಪಾಟೀಲ ಅವರು ಅತ್ಯಂತ ಪವಿತ್ರವಾದ ಕೆಲಸಗಳಲ್ಲಿ ನರ್ಸಿಂಗ್ ಬಹುಮೂಲ್ಯ ಪಾತ್ರವಹಿಸುತ್ತಿದೆ. ವೈದ್ಯರಿಗೆ ಮತ್ತು ರೋಗಿಗೆ ಸಂಪರ್ಕದ ಸೇತುವೆಯಾಗಿ ಸುಶೂಷ್ರಾಕಿಯರು ಕೆಲಸ ನಿರ್ವಹಿಸುತ್ತಾರೆ. ತಾಳ್ಮೆ ಹಾಗೂ ಪ್ರಿÃತಿಇಂದ ಸೇವೆ ಸಲ್ಲಿಸುವ ಗುಣ ವಿಶೇಷತೆಗಳನ್ನು ಸುಶೂಷ್ರಕಿಯರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವ್ಯೆದ್ಯಾಧಿಕಾರಿ ಡಾ: ರಾಜೇಶ ಪ್ರಸಾದ ಅವರು ಬಹುಬೇಡಿಕೆಯ ವೃತ್ತಿಗಳಲ್ಲಿ ನರ್ಸಿಂಗ್ ಅಗ್ರ ಸ್ಥಾನದಲ್ಲಿದೆ. ನರ್ಸಿಂಗ್ ಕೆಲಸವೆಂದರೆ ಅದು ಶೃದ್ದೆಯ ಸೇವೆ ಎಂದೆ ಹೇಳಬಹುದು. ಎಲ್ಲ ಸೇವೆಗಿಂತ ಆರೋಗ್ಯ ಸೇವೆ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ವಿಶ್ವ ದಾದಿಯರ ದಿನಾಚರಣೆಯ ಶುಭಾಶಯ ಕೋರಿದರು. ಶುಶ್ರೂಷ್ರಾ ಸೂಪರಿಂಟೆಂಡೆಂಟ್ ಚನ್ನಮ್ಮ ತಲವಾರ, ಕೆ.ಎಲ್.ಇ ನರ್ಸಿಂಗ್ ವಿದ್ಯಾಲಯದ ¥ ಲೆಕ್ಕಾಧಿಕಾರಿ ಅಣ್ಣಪ್ಪ ಸುಂಕದ, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...