ವಿಶ್ವ ಹೋಮಿಯೋಪಥಿಕ್ ದಿನಾಚರಣೆ

0
8

ಕನ್ನಡಮ್ಮ ಸುದ್ದಿ, ಹುಬ್ಬಳ್ಳಿ : ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ನಿನ್ನೆ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಸ್ವಾತಿ ಹೊಟೆಲ್‌ನಲ್ಲಿ ಡಾ. ಸ್ಯಾಮುವೆಲ್ ಹನ್ನೆಮನ್ ಅವರ ೨೬೪ನೇ ಹುಟ್ಟುಹಬ್ಬದ ಅಂಗವಾಗಿ “ವಿಶ್ವ ಹೊಮಿಯೋಪಥಿಕ್ ದಿನ”ವನ್ನು ಆಚರಿಸಲಾಯಿತು. ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್‌ನ ಹುಬ್ಬಳ್ಳಿ-ಧಾರವಾಡದ ಶಾಖೆಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಲ್ಹಾದ ಜೋಶಿಯವರು ವೈದ್ಯಕೀಯ ರಂಗದಲ್ಲಿ ಹೊಮಿಯೋಪಥಿ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಹೋಮಿಯೋಪಥಿ ಚಿಕಿತ್ಸೆಯಿಂದ ಹಲವಾರು ರೋಗಗಳನ್ನು ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಮಾತನಾಡಿ ಹುಬ್ಬಳ್ಳಿ-ಧಾರವಾಡದ ಜನರಿಗೆ ಅರಿವು ಮೂಡಿಸಲು ಕರ್ನಾಟಕ ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಶನ್ ಹೋಮಿಯೋಪಥಿಕ್ ಚಿಕಿತ್ಸಾ ಪದ್ಧತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಸೂಚಿಸಿದರು.

loading...