ವೀರಭದ್ರ ದೇವರ ನೂತನ ಶಿಲಾಮಯ ಕಟ್ಟಡ ರಚನೆ ಆರಂಭ

0
6

 

ಯಲ್ಲಾಪುರ: ತಾಲೂಕಿನಲ್ಲಿಯ ಐತಿಹಾಸಿಕ ಪ್ರಸಿದ್ದವಾದ ಹೊನಗದ್ದೆಯ ವೀರಭದ್ರ ದೇವರ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ಕೆಲಸವು ಆರಂಭವಾಗಿದ್ದು, ಶಿಲ್ಪ ಕೆತ್ತನೆಯ ಕೆಲಸ ಕೈಗೊಳ್ಳಲಾಗಿದೆ.
ಮುರುಡೇಶ್ವರದ ಐವರು ನುರಿತ ಶಿಲ್ಪಿಗಳು ಈ ಶಿಲಾ ಮಂದಿರದ ದೇಗುಲಕ್ಕೆ ಬೇಕಾದ ಶಿಲೆಗಳನ್ನು ಕೆತ್ತುತ್ತಿದ್ದು, ಅಂದಾಜು ೭೫ ಲಕ್ಷ ರೂಗಳ ವೆಚ್ಚದಲ್ಲಿ ನೂತನ ಶಿಲಾಮಯ ಕಟ್ಟಡ ರಚನೆಗೊಳ್ಳಲಿದೆ. ಈ ಹಿಂದಿನ ಕಟ್ಟಡ ಸಂಪೂರ್ಣ ಜೀರ್ಣಾವಸ್ಥೆ ತಲುಪಿದ್ದು ದಾನಿಗಳ ನೆರವಿನಿಂದ ಕಟ್ಟಡದ ಕೆಲಸ ನಡೆಸಲು ಸಂಕಲ್ಪಿಸಲಾಗಿದೆ. ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಿ ಜಿ ಭಟ್ಟ ಪತ್ರಿಕಾ ಪ್ರಕಟಣೆ ನೀಡಿ ಶಿಲಾ ದೇಗುಲದ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್ .೯೪೪೯೧೦೦೪೬೩ ಮೂಲಕ ಸಂಪರ್ಕಿಸಬಹುದು. ಎಂದು ತಿಳಿಸಿದ್ದಾರೆ. ಆಡಳಿತ ಮಂಡಳಿಯ ಸತೀಶ ಭಟ್ಟ, ಸುಬ್ರಹ್ಮಣ್ಯ ಭಟ್ಟ ಉಪಸ್ಥಿತರಿದ್ದರು.

loading...