ವೀರರ ಇತಿಹಾಸ ಮರೆ ಮಾಚುತ್ತಿರುವುದು ದುರ್ದೈವದ ಸಂಗತಿ: ಕೇಂದ್ರ ಸಚಿವ ಅಂಗಡಿ

0
28

ಬೆಳಗಾವಿ

ರಾಯಣ್ಣ ಮತ್ತು ಚನ್ನಮ್ಮ ಇತಿಹಾಸವನ್ನು ಅರಿಯಲು ಅವರ ಇತಿಹಾಸದ ಪುಸ್ತಕಗಳನ್ನು ಇಡೀ ಭಾರತದಾದ್ಯಂತ ಬಿಡುಗಡೆ ಮಾಡಬೇಕು. ಇಂತಹ ವೀರರ ಇತಿಹಾಸವನ್ನು ನಾವು ಮೆರೆಮಾಚುತ್ತಿದ್ದೇವೆ ಎಂದು ರೇಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಹೇಳಿದರು.

ಜಿಲ್ಲಾಡಳಿತ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ೨೦೨೦ನೇ ಸಾಲಿನ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಕಾಶ ಕಡಗುಲ ಕಾರ್ಗಿಲ್ ಯುದ್ದದಲ್ಲಿ ತಮ್ಮ ಬಲಗೈಯನ್ನು ಕಳೆದುಕೊಂಡ ಕಾರಣ ಅವರ ಕೈಯಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಿಸಲಾಗಿದೆ. ಇಂತಹ ಉತ್ಸವ ಮಾಡಲು ಮುಖ್ಯ ಕಾರಣ ಇತಿಹಾಸವನ್ನು ತಿಳಿದುಕೊಳ್ಳುವುದಾಗಿದೆ ಎಂದು ಹೇಳಿದರು

ನಮ್ಮ ಯುವಕರು ರಾಯಣ್ಣ, ಚನ್ನಮ್ಮ ಇತಿಹಾಸ ಅರಿಯಬೇಕು, ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ವೀರ ಭೂಮಿ ಬೈಲಹೊಂಗಲ, ರಾಯಣ್ಣ ಮತ್ತು ಚನ್ನಮ್ಮ ಇತಿಹಾಸವನ್ನು ಅರಿಯಲು ಅವರ ಇತಿಹಾಸದ ಪುಸ್ತಕಗಳನ್ನು ಇಡೀ ಭಾರತದಲ್ಲಿ ಬಿಡುಗಡೆ ಮಾಡಬೇಕಿದೆ.

ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಜನರಿಗೆ ಸಹೋದರ ಸಹೋದರಿಯರೇ ಎಂದು ಕರೆದ ಭಾರತ ನಮ್ಮದು.‌ ಬರುವ ದಿನಗಳಲ್ಲಿ ನಮ್ಮ ಜನರಿಗೆ ರಾಯಣ್ಣ, ಚನ್ನಮ್ಮ ಗುಣಗಳನ್ನು ಬೆಳೆಸಬೇಕು. ಜನರೆ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಮಕ್ಕಳಲ್ಲಿ ಅವರ ಗುಣಗಳನ್ನು ಅಳವಡಿಕೆ ಮಾಡಬೇಕು ಎಂದರು.

*ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ವಿತರಣೆ*

ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ನಿವೃತ್ತ ಸುಬೇದಾರ ವೀರ ಪ್ರಕಾಶ ಕಲಗೌಡ ಅವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ವಿತರಿಸಲಾಯಿತು

ವಿಧಾನ ಪರಿಷತ್ ಮುಖ್ಯ ಸಚೇತಕ ಮಾಹಾಂತೇಶ ಕವಟಗಿಮಠ ಮಾತನಾಡಿ, ಸ್ವಾತಂತ್ರ್ಯ ಕಹಳೆ ಮೊಳಗಿಸಿ ಭಾರತ ಇತಿಹಾಸದಲ್ಲಿ ಅಮರರಾದ ಸಂಗೊಳ್ಳಿ ರಾಯಣ್ಣ ಉತ್ಸವ ನಮಗೆ ಆದರ್ಶ ಎಂದರು.

ಅವರು ನಮಗೆ ನೀಡಿದ ಕಾಣಿಗೆ ಅಷ್ಟಿಷ್ಟಲ್ಲ; ಈ ಉತ್ಸವಗಳು ಕಾರ್ಯಕ್ರಮಕ್ಕೆ ಸೀಮಿತವಾಗದೆ, ಅವರ ಇತಿಹಾಸವನ್ನು ಯುವ ಜನಾಂಗಕ್ಕೆ ತಿಳಿಸಬೇಕು, ಸಂಗೊಳ್ಳಿ ರಾಯಣ್ಣ ಹೇಸರಿನಲ್ಲಿ ಇಲ್ಲಿ ಸ್ಥಾಪನೆ ಮಾಡುತ್ತಿದೇವೆ. ಆ ಶಾಲೆಯ ಮೂಲಕ ಮಕ್ಕಳನ್ನು ಮಾದರಿ ಶಿಕ್ಷಣ ನೀಡಬೇಕು ಎಂದರು.

ಕಿತ್ತೂರ ಶಾಸಕ ಮಾಹಾಂತೇಶ ದೊಡ್ಡಗೌಡ ಮಾತನಾಡಿ, ರಾಯಣ್ಣನಿಗೆ ತನ್ನ ತಾಯಿ ಮತ್ತು ಚನ್ನಮ್ಮನ ಮೇಲೆ ವಿಷೇಶವಾದ ಪ್ರೀತಿ ಇತ್ತು. ಈ ಉತ್ಸವ ಮಾಡುವ ಉದ್ದೇಶ ಅಂದು ರಾಯಣ್ಣ ಪ್ರತಿ ಮನೆಯಲ್ಲಿ ರಾಯಣ್ಣ ಹುಟ್ಟಿ ಬರುತ್ತಾನೆ ಎಂದು ಬ್ರಿಟಿಷರಿಗೆ ಹೇಳಿದ ಮಾತು ನಾವು ನಿಜ ಮಾಡಬೇಕು, ನಮ್ಮ ಪ್ರತಿಯೋಬ್ಬ ಮಕ್ಕಳು ರಾಯಣ್ಣರಾಗಬೇಕು ಎಂದು ಹೇಳಿದರು.

ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಸ್ವಾತಂತ್ರ್ಯಕ್ಕಾಗಿ ಜೀವನ ಪೂರ್ತಿ ಹೋರಾಡಿದ ವೀರ ರಾಯಣ್ಣನ ಉತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಇಲ್ಲಿ ಇರುವ ಎಲ್ಲರ ಮನದಲ್ಲೂ ರಾಯಣ್ಣ ಇದ್ದಾನೆ. ನಾವು ಕಾರ್ಯಕ್ರಮಕ್ಕೆ ಸಿಮೀತವಾಗದೆ, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಹೇಳಿದರು.

ಸಿದ್ದಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಮಠಮಠದ ಮಡಿವಾಳ ರಾಜಯೋಗೆಂದ್ರ ಮಹಾಸ್ವಾಮಿಗಳು, ಮಾಜಿ ಶಾಸಕ ಜಗದೀಶ್ ಮೆಟಗುಟ್ , ಡಾ. ವಿ.ಐ. ಪಾಟೀಲ, ತಾ.ಪಂ,ಗ್ರಾಪಂ ಅಧ್ಯಕ್ಷರು, ಜಿಲ್ಲಾಧಿಕಾರಿ ಡಾ. ಎಸ್ ಬಿ ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

loading...