ವೀರಶೈವ-ಲಿಂಗಾಯತ ಗುರು-ವಿರಕ್ತ-ಭಕ್ತರ ಸಮಾವೇಶ ವೀರಶೈವ-ಲಿಂಗಾಯತ ಎರಡು ಒಂದೇ ಎನ್ನುವ ಸಂದೇಶ ರವಾನೆ… ಸಾಮರಸ್ಯೆ, ಸಮನ್ವಯತೆ ಸಾರಿದ ಸದ್ಭಾವನಾ ಸಮಾವೇಶ ಪ್ರಮುಖ ಹತ್ತು ನಿರ್ಣಯಗಳ ಮಂಡನೆ ವೀರಶೈವ ಲಿಂಗಾಯತ ಒಂದೇ .. ಬಸವಾದಿ ಪ್ರಥಮ ವಚನ ವೀರಶೈವ ಸಿದ್ದಾಂತ ಒಪ್ಪದರವು ಬೇರೆಡೆ ಹೋಗಲಿ

0
74

ಶಂಕರಲಿಂಗ ದೇಸಾಯಿ
ಶಿವಯೋಗ ಮಂದಿರ(ಬಾಗಲಕೋಟೆ):
ವೀರಶೈವ-ಲಿಂಗಾಯತ ಬೇರೆ ಬೇರೆ ಎನ್ನುವ ವಿವಾದ ತೀವ್ರಗೊಳ್ಳುತ್ತಿರುವಾಗಲೇ ಅವರೆಡು ಪ್ರತ್ಯೇಕ ಅಲ್ಲ, ಒಂದೇ ಎನ್ನುವ ಸಂದೇಶ ಸಾರುವುದು ಹಾಗೂ ಸಮಾಜದಲ್ಲಿ ಸಾಮರಸ್ಯೆ ಮತ್ತು ಸಮನ್ವಯತೆ ಉಂಟು ಮಾಡಲು ಗುರು-ವಿರಕ್ತರು ಮತ್ತು ಭಕ್ತರು ಸೇರಿ ಹಮ್ಮಿಕೊಂಡಿರುವ ಸದ್ಭಾವನಾ ಸಮಾವೇಶ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದಲ್ಲಿ ಅದ್ದೂರಿಯಾಗಿ ಜರುಗಿತು.
ಗುರು-ವಿರಕ್ತರೆಲ್ಲ ಸಮಾನ ವೇದಿಕೆಯಲ್ಲಿ ಕಾಣಿಸಿಕೊಂಡು ಭಕ್ತ ಸಮೂದಾಯಕ್ಕೆ ಏಕತೆಯ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಜನರು ಪಾಲ್ಗೊಂಡಿದ್ದರು. ಸದ್ಭಾವನಾ ಸಮಾವೇಶ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಬೆಳಗಾವಿಯಲ್ಲಿ ನಡೆದ ಸಮ್ಮೇಳನಕ್ಕೆ ಪ್ರತಿಯಾಗಿ ಸಮಾವೇಶ ಅಲ್ಲವೇ ಅಲ್ಲ. ಇದು ವೀರಶೈವ-ಲಿಂಗಾಯತ ಎರಡು ಒಂದೇ ಧರ್ಮ ಎಂದು ಸಂದೇಶ ಸಾರುವ ಹಾಗೂ ಗುರು-ವಿರಕ್ತರನ್ನು ಒಗ್ಗೂಡಿಸಿ ಸಮಾಜ ಸಂಘಟನೆಗೆ ಚಾಲನೆ ನೀಡುವ ಮಹತ್ವದ ಸಮಾರಂಭವಾಗಿ ಗುರುತಿಸಿಕೊಂಡಿತು.
ಪ್ರಮುಖ ಹತ್ತು ನಿರ್ಣಯ:
ಗುರು-ವಿರಕ್ತರ ಮಠಾಧೀಶರು ಹಾಗೂ ಭಕ್ತರ ಸದ್ಭಾವನಾ ಸಮಾವೇಶನದಲ್ಲಿ ಪ್ರಮುಖ ಹತ್ತು ನಿರ್ಣಯಗಳನ್ನು ಕೈಗೊಳ್ಳಲಾಯಿತು. 1: ವೀರಶೈವ ಲಿಂಗಾಯತ ಸನಾತನ ಧರ್ಮವಾಗಿದೆ. ಈ ಧರ್ಮವನ್ನು ಯಾವುದೇ ಕಾರಣಕ್ಕೂ ಛಿದ್ರವಾಗಿ ರಕ್ಷಿಸುವುದು, ಗುರು ವಿರಕ್ತ ಮಠಾಧೀಶರು ಹಾಗೂ ಸಮಾಜದ ಸಕಲ ಸಧ್ಬಕ್ತ ಆದ್ಯ ಕರ್ತವಾಗಿದೆ. 2: ವೀರಶೈವ ಲಿಂಗಾಯತ ಧರ್ಮಕ್ಕೆ ವೀರ, ನಂದಿ, ಭೃಂಗಿ, ವೃಷಭ ಮತ್ತು ಸ್ಕಂದ ಗೋತ್ರಗಳಿದ್ದು, ಪಡ್ವಿಡಿ, ವೃಷ್ಠಿ, ಲಂಬನ, ಮುಕ್ತಾಗುಚ್ಚ ಮತ್ತು ಪಂಚವರ್ಣ ಸೂತ್ರಗಳಿವೆ, ಈ ಐದರಲ್ಲಿ ಯಾವುದಾದರು ಗೋತ್ರ, ಸೂತ್ರಕ್ಕೆ ವೀರಶೈವ ಲಿಂಗಾಯತರು ಸಂಬಂಧಪಟ್ಟಿರುತ್ತಾರೆ. 3: ವೀರಶೈವ ಲಿಂಗಾಯತ ಧರ್ಮಕ್ಕೆ ಶಿವಾಗಮಗಳು, ಸಿದ್ದಾಂತ ಶಿಖಾಮಣಿ ಮತ್ತು ವಚನಗಳು ಈ ಧರ್ಮದ ಆಧ್ಯಾತ್ಮ ಸಂಪತ್ತು, ಪರಸ್ಪರ ಉಭಯತರ ಅಧ್ಯಯನ ಮಾಡಿ ಸಮನ್ವಯತೆಯಿಂದ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. 4: ಸಕಲ ವೀರಶೈವ ಲಿಂಗಾಯತರ ಪ್ರಾತಿನಿಧಿಕ ಮತ್ತು ಪ್ರತಿಷ್ಠಿತ ಸಂಸ್ಥೆಯಾದ ಅಖಿಲ ಭಾರತ ವೀರಶೈವ ಮಹಾಸಭೆಯು ನಿರ್ಣಯಿಸಿದ ವೀರಶೈವ ಲಿಂಗಾಯತರು ಒಂದೇ ಎಂಬ ಅಂಶವನ್ನು ಸಭೆ ಅನುಮೋ„ಸುತ್ತದೆ. 5: ವೀರಶೈವ ಲಿಂಗಾಯತ ಧರ್ಮದ ಯುವಕರದಲ್ಲಿ ಧಾರ್ಮಿಕ ನಿಷ್ಠೆಯನ್ನು ಬೆಳೆಸಬೇಕು, ಎಲ್ಲರು ಲಿಂಗಧಾರಣೆ ಮಾಡಿಕೊಳ್ಳುವ ಭಾವನೆಯನ್ನು ಬೆಳೆಸಬೇಕು. ಇದಕ್ಕಾಗಿ ಗುರುವಿರಕ್ತರು ಕಾರ್ಯಕ್ರಮಗಳಲ್ಲಿ ರೂಪಿಸಿಕೊಳ್ಳಬೇಕು.
6: ವೀರಶೈವ ಲಿಂಗಾಯತ ಮಠಾಧಿಪತಿಗಳು ತಮ್ಮ ತಮ್ಮ ವಿದ್ಯಾಸಂಸ್ಥೆಗಳಲ್ಲಿ ಪ್ರತಿಭಾ ಸಂಪನ್ನ ವೀರಶೈವ ಲಿಂಗಾತ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನ ಮಾಡಲು ಅವಕಾಶ ಒದಗಿಸಿಕೊಡಬೇಕು.7: ಉಪಾಚಾರ್ಯರು ಹಾಗೂ ವಿರಕ್ತ ಮಠಾಧೀಶರು ಸಾಮರಸ್ಯ ಭಾವಣೆಯಿಂದ ತಮ್ಮ ತಮ್ಮ ಗ್ರಾಮ, ನಗರಗಳಲ್ಲಿ ಸಮನ್ವಯ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಸಮಸ್ತ ಸದ್ಬಕ್ತರಲ್ಲಿ ಸಾಮರಸ್ಯ ಭಾವನೆ ಬೆಳೆಸಬೇಕು. 8: ಗುರುಪೀಠಗಳ ಮತ್ತ ವಿರಕ್ತ ಮಠಾಧಿಶರ ಕರ್ತವ್ಯ, ಸಂಪ್ರದಾಯ, ಆಚರಣೆ ಬೇರೆ ಬೇರೆಯಾಗಿದ್ದರು ತಾತ್ವಿಕ ದೃಷ್ಠಿಯಿಂದ ಸಮಾನದರು. ಒಬ್ಬರು ಇನ್ನೂಬ್ಬರ ಧರ್ಮ ಕ್ಷೇತ್ರದಲ್ಲಿ ಹಸ್ತ ಕ್ಷೇಪ ಮಾಡದೆ ನಂಬಿಕೆ ವಿಶ್ವಾಸದಿಂದ ಸಾಮರಸ್ಯ ಕಾಪಾಡಿಕೊಂಡು ಹೋಗಬೇಕು. 9: ಗುರುವಿರಕ್ತ ಪ್ರಮುಖ ಮಠಾಧಿಪತಿಗಳು ಮೂರು ತಿಂಗಳಿಗೊಮ್ಮೆ ಸಮಾಜ ಹಾಗು ಹೋಗುಗಳ ಬಗ್ಗೆ ವಿಚಾರ ವಿನಿಮಯ ಮಾಡಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. 10: ವೀರಶೈವ ಲಿಂಗಾಯಿತರಲ್ಲಿ ವೃತ್ತಿ ಮೂಲದಿಂದ ಹಲವಾರು ಉಪಪಂಗಡಗಳಿವೆ ಅವರೆಲ್ಲರಿಗೂ ಈಗೀರುವ 3ಬಿ ಪ್ರತಿಶತ 5 ರ ಬದಲಾಗಿ 2 ಎ ಅಥವಾ ಬೇರೆ ವರ್ಗ ಸೃಷ್ಠಿಸಿ ವೀರಶೈವ ಲಿಂಗಾಯತ ಸಂಖ್ಯಾಬಲಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಪ್ರತಿಶಃತ 12 ರಿಂದ 15 ಕ್ಕೆ ಮಾಡಬೇಕು ಎಂಬ 10 ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.
ಪಂಚಪೀಠಗಳಲ್ಲಿ ಪ್ರಥಮ ರೇಣುಕಾ ಡಾ.ವೀರಸೋಮವೇಶ್ವರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿಯ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಉಜ್ಜಯನಿಯ ಸಿದ್ದಲಿಂಗಶಿವಾಚಾರ್ಯ ಭಗವತ್ಪಾದರು, ವಿರಕ್ತ ಮಠಾ„ೀಶರಾದ ಮುಂಡರಗಿಯ ಅನ್ನಾದಾನೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠ ಗುರುಸಿದ್ದರಾಜ ಯೋಗಿಂದ್ರ ಸ್ವಾಮೀಜಿ. ಸಮಾವೇಶದ ಸಾರಥ್ಯ ವಹಿಸಿದ್ದ ಶಿವಯೋಗ ಮಂದಿರದ ಅಧ್ಯP್ಷÀರಾದ ಡಾ.ಸಂಗನಬಸವ ಸ್ವಾಮೀಜಿ, ಬಾಳೆಹೂಸರಿನ ದಿಂಗಾಲೇಶ್ವರ ಸ್ವಾಮೀಜಿ, ಬೆಂಗಳೂರಿನ ವಿಭೂತಿಮಠದ ಮಹಾಂತಲಿಂಗ ಸ್ವಾಮೀಜಿ, ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು.

loading...