ವೀರಶೈವ ವೈಜ್ಞಾನಿಕ ತಳಹದಿಯದ್ದು: ಶ್ರೀಗಳು

0
53

ಆಲಮೇಲ, 11- ವಿರಶೈವ ಧರ್ಮದಲ್ಲಿ ಹುಟ್ಟಿಕೊಂಡಿರುವವರು ನಮ್ಮ ಸಂಸ್ಕ್ತ್ರತಿಯು ವೈಜ್ಞಾನಿಕ ತಳಹದಿ ಮೇಲಿದೆ ಅದು ಬದುಕಿಗೆ ಬಹಳಷ್ಟು ಸಹಕಾರ ನೀಡುತ್ತದೆ ಎಂದು ಹಿರೇಮಠದ ಚಂದ್ರಶೇಖರ ಶಿವಾಚರ್ಯಾರು ಹೇಳಿದರು.

ಅವರು ಸೋಮವಾರ ಗುಂದಗಿ ಮನೆತನದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಕಲಬುರ್ಗಿ ಶರಣಬಸವೇಶ್ವರ ಹರಕೆಯ ಪುರಾಣ ಕಾರ್ಯಕ್ರಮದ ಮಹಾಮಂಗಲಗೊಂಡ ಬಳಿಕ ಧರ್ಮಸಭೆಯ ಸಾನಿದ್ಯ ವಹಿಸಿ ಮಾತನಾಡಿದರು.

ಪುರಾಣ ಕೇಳುವದರಿಂದ ಅದರಲ್ಲಿ ಅಷ್ಟಾವರ್ಣ, ಪಂಚಾಕ್ಷರ್ಯ, ಶೆಟಸ್ತಲಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಅದು ಪುರಾಣಗಳಲ್ಲಿ ಪಾಲ್ಗೊಳ್ಳಬೇಕು. ವೈಜ್ಞಾನಿಕದ ಮೇಲೆ ನಂಬಿಕೆ ಇರುವ ನಮಗೆ ನಾವು ಹಣೆಗೆ ವಿಭೂತಿ ಬಸ್ಮವನ್ನು ಹಚ್ಚುವದರಿಂದ ಅದರಿಂದ ರೋಗ ನೀರೋದಕ ಶಕ್ತಿ ಹೊಂದಿದೆ. ಹಾಗೂ ಪ್ರತಿನಿತ್ಯ ಲಿಂಗ ಪೂಜೆ ಮಾಡಿಕೊಳ್ಳುವಾಗ ಲಿಂಗಕ್ಕೆ ಬಿಲ್ಲ ಪತ್ರಿ ಏರಿಸಿ ಪೂಜಿಸುವದರಿಂದ ಮನಸು, ದೇಹ ಚೈತನ್ಯದಿಂದ ಇರುತ್ತದೆ ಇದು ನಮ್ಮ ರುಷಿಮುನಿಗಳಿಂದಲು ಮಾಡಿ ಕೊಂಡಿರುವ ಒಂದು ರೋಡಿ ಹಾಗೂ ಲಿಂಗ ಪೂಜೆ ಸಂದರ್ಭದಲ್ಲಿ ಬಿಲ್ಲ ಪತ್ರಿ ಏರಿಸುವದರಿಂದ ಅದರಿಂದ ವೈಜ್ಞಾನಿಕ ಆಮ್ಲಜನಕ ಶಕ್ತಿ ಇದೆ ಎಂದು ಹೇಳಿದರು.

ವಿರಕ್ತಮಠದ ಜಗದೇವ ಮಲ್ಲಿ ಭೂಮ್ಮಯ್ಯ ಸ್ವಾಮಿಜಿ ಮಾತನಾಡಿ ಗುಂದಗಿ ಮನೆತನವು ಪ್ರತಿ ಮೂರು ವರ್ಷಕ್ಕೊಮ್ಮೆ ಕಲಬುರ್ಗಿ ಶರಣಬಸವೇಶ್ವರ ಹರಕೆಯ ಪುರಾಣ ವನ್ನು ನಾಲ್ಕು ತಲೆಮಾರುಗಳಿಂದ ನಡೆಸಿಕೊಂಡು ಬರುತ್ತಿದ್ದು ಇದರಿಂದ ಇಲ್ಲಿನ ಜನರಿಗೆ ಜ್ಞಾನದ ದಾಸೋಹವನ್ನು ನೀಡುತ್ತಿರುವ ಶಿವಶರಣ ಗುಂದಗಿ ಮನೆತನವು ಇದೆರೀತಿ ಮುಂದೆ ಸಾಗಲಿ ಎಂದು ಹಾರೈಸಿದ್ದರು. ಪುರಾಣಿಕರಾದ ಬ್ಯಾಡಗಿಹಾಳದ ಸಿದ್ದರಾಮನಂದ ಸ್ವಾಮಿಜಿ, ಡಾ| ಸಂದೀಪ ಪಾಟೀಲ, ಶಿವುಕುಮಾರ ಗುಂದಗಿ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಸಂಗಿಹಾಳದ ಶಂಕರಾನಂದ ಮಹಾರಾಜರು, ನಿತ್ಯಾನಂದ ಆರೋಢ ಮಠದ ಶರಣಬಸವ ಶರಣರು, ಪುರವಂತ ಶ್ರೀಶೈಲ ಕುಂಬಾರ, ಜಿ.ಪಂ ಸದಸ್ಯ ಮಲ್ಲಪ್ಪ ತೋಡಕರ, ಬಸವರಾಜ ಧನಶ್ರೀ, ಅಯುಬ ದೇವರಮನಿ, ಶಿವಾನಂದ ಮಾರ್ಸನಳ್ಳಿ, ಮಲ್ಲು ಅಚಲೇರಿ, ಅಪಜಲಪೂರ ತಾಲೂಕಿನ ತಾ.ಪಂ ಸದಸ್ಯ ಪ್ರಭುಲಿಂಗ ಜಮಾದಾರ, ಅಶೋಕ ಕೊಳಾರಿ, ನಾನಾಗೌಡ ಪಾಟೀಲ ಮುಂತಾದವರು ಬಾಗವಹಿಸಿದ್ದರು.

ಕಲಾವಿದರಾದ ವೇತಾಳ ಜ್ಯೌಶಿ, ಬಸವರಾಜ ಬಾಗೇವಾಡಿ ಪ್ರಾರ್ಥನಾಗೀತೆ ಗೈದರು.

ರಮೇಶ ಬಂಟನೂರ ನಿರೂಪಿಸಿದರು. ಶಿವಶರಣ ಗುಂದಗಿ ಸ್ವಾಗತಿಸಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here