ವೀರ ಮಹಾದೇವಿ ಪಾತ್ರದಿಂದ ಸನ್ನಿ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

0
11

ಕನ್ನಡಮ್ಮ ಸುದ್ದಿ-ಕೊಪ್ಪಳ: ನ. 3 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮ ಹಾಗೂ ವೀರ ಮಹಾದೇವಿ ಚಲನಚಿತ್ರದಿಂದ ಖ್ಯಾತ ನೀಲಿ ಚಿತ್ರನಟಿಯನ್ನು ಸನ್ನಿ ಲಿಯೊನ್ ಅವರನ್ನು ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಸವೇಶ್ವರ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿತು. ದಕ್ಷಿಣ ಭಾರತ ಸಂಸ್ಕøತಿ ಹಾಗೂ ಹಿಂದೂ ಸಂಪ್ರಾದಾಯ ರಕ್ಷಣೆಯ ನಿಟ್ಟಿನಲ್ಲಿ ಕರ್ನಾಟಕ, ಆಂದ್ರ ಪ್ರದೇಶ ಹಾಗೂ ತಮಿಳುನಾಡು ಈ ತ್ರಿವಳಿ ರಾಜ್ಯಗಳು ಸನ್ನಿ ಲಿಯೋನ್ ಅವರ ರಾಜ್ಯ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿಬೇಕು ಎಂಬ ತಿರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅವರನ್ನು ರಾಜ್ಯ ಪ್ರವೇಶ ಮಾಡದಂತೆ ರಾಜ್ಯ ಮತ್ತು ಕೇಂದ್ರ ಸರಕಾರ ಗೃಹ ಮಂತ್ರಿಗಳಿಗೆ ಸಹ ಮನವಿ ಮಾಡಲಾಗುವದು ಎಂದು ಪ್ರತಿಭಟನಾಕಾರರು ತಿಳಿಸಿದರು. ಯಾವುದೇ ಕಾರಣಕ್ಕೂ ಖ್ಯಾತ ನೀಲಿ ಚಿತ್ರ ನಟಿ ಸನ್ನಿ ಲಿಯೋನ್ ಅವರನ್ನು ರಾಜ್ಯಕ್ಕೆ ಕರೆಸಿಕೊಳ್ಳಬಾರದು ಹಾಗೂ ವೀರಮಹಾದೇವಿ ಚಿತ್ರದಿಂದ ಅವರನ್ನು ಕೈಬಿಡಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರದ ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಹೇಳಿದರು. ಜಿಲ್ಲಾ ಮಹಿಳಾ ಘಟಕದ ಲತಾ ಭಜಂತ್ರಿ, ಜಿಲ್ಲಾ ವಿದ್ಯಾರ್ಥಿ ಗೌರವಾಧ್ಯಕ್ಷ ಬಾಳಪ್ಪ ತಳವಾರ, ಜಿಲ್ಲಾ ಸಂಚಾಲಕ ಭೀಮಣ್ಣ ಮೂಲಿ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಸರೋಜ ಆವಾರಿ, ಭಾಗ್ಯ ಕವಲೂರ, ಶಾರದ ಬಡಿಗೇರ, ಶಿವಕುಮಾರ ಡಿ.ಎನ್., ಕಳಕಪ್ಪ, ರಾಮನಗೌಡ, ಸುನೀತಾ, ಶರಣಪ್ಪ ಇದ್ದರು.

loading...