ವೇಮನ್‌ರು ಲೋಕಕಲ್ಯಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡ ದಾರ್ಶನಿಕ: ಗುಜಗೊಂಡ

0
8

ಬೆಳಗಾವಿ
‘ಮಹಾಯೋಗಿ ವೇಮನ್‌ರು ಲೋಕಕಲ್ಯಾಣಕ್ಕಾಗಿ ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡ ಮಹಾನ್ ದಾರ್ಶನಿಕರು’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಅವರು ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಮಹಾಯೋಗಿ ವೇಮನ್ ಅವರ ೬೦೮ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಮೂಡನಂಬಿಕೆ, ಅಸಮಾನತೆ, ಜಾತಿ ಪದ್ದತೆ ಮತ್ತು ಆಸೆಗಳಿಂದ ದೂರವಿರಬೇಕು ಎಂದು ದಿಟ್ಟವಾಗಿ ಪ್ರತಿಪಾದಿಸಿದ್ದರು ಎಂದರು.
ಸಮರದಲ್ಲಿ ಶತ್ರುತ್ವ ಸಾಯಬೇಕೆ ಹೊರತು ಶತ್ರು ಸಾಯಿಸಬಾರದು, ಮಾನವ ಕುಲವೆಲ್ಲ ಒಂದೇ ಎನ್ನುವ ಸೌಹಾರ್ದತೆಯ ಭಾವದಿಂದ ವಿಶ್ವಶಾಂತಿಯನ್ನು ಕಾಣಬೇಕು. ತಾಳ್ಮೆ, ವಿವೇಕಗಳು ಮನುಷ್ಯನಿಗೆ ನೆಮ್ಮದಿ ನೀಡುತ್ತವೆ. ಅದಕ್ಕಾಗಿ ಮನಸ್ಸಿನ ನಿಗ್ರಹ ಅವಶ್ಯ ಎಂದು ವೇಮನ್‌ರು ಸಾರಿದ್ದರು ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ನಿರ್ದೇಶಕ ಎಂ.ಎಚ್. ಸೋನವಾಲಕರ ಮಾತನಾಡಿ ವೇಮನ್ ಅವರ ಚೌಪದಿಗಳ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಆರ್.ಪಿ. ಸೋನವಾಲಕರ, ಬಿ.ಎಚ್. ಸೋನವಾಲಕರ, ಅಜ್ಜಪ್ಪ ಗಿರಡ್ಡಿ, ರವಿ ನಂದಗಾAವ, ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಪ್ರಕಾಶ ಬಾಗೇವಾಡಿ, ಮಲ್ಲು ಯಾದವಾಡ ಅತಿಥಿಯಾಗಿ ವೇದಿಕೆಯಲ್ಲಿದ್ದರು.
ಶಿಕ್ಷಕ ಆರ್.ಎಂ. ಕಾಂಬಳೆ ವೇಮನ್ ಅವರ ವಚನವನ್ನು ಸುಶ್ರಾವ್ಯವಾಗಿ ಹಾಡಿ ಗಮನಸೆಳೆದರು.
ವೆಂಕಟೇಶ ಸೋನವಾಲಕರ, ಸಂಜಯ ಮೋಕಾಶಿ, ಮಹಾಂತೇಶ ಹೊಸೂರ, ಉಪಪ್ರಾಚಾರ್ಯ ಎ.ಆರ್. ಶೇಗುಣಶಿ, ಬಿ.ಪಿ.ಇಡಿ ಪ್ರಾಚಾರ್ಯ ಎಂ.ಕೆ. ಕಂಕಣವಾಡಿ, ಮುಖ್ಯ ಶಿಕ್ಷಕ ಗಜಾನನ ಮಾನೆ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ಆರ್.ಎ. ಶಾಸ್ತಿçÃಮಠ ಸ್ವಾಗತಿಸಿದರು, ಬಿ.ಕೆ. ಕಾಡಪ್ಪಗೋಳ ನಿರೂಪಿಸಿದರು, ಪ್ರಾಚಾರ್ಯ ಪ್ರೊ. ಎಸ್.ಡಿ. ತಳವಾರ ವಂದಿಸಿದರು.

loading...