ಶರಣರ ನುಡಿ, ಸಾಧಕರಿಗೆ ಧೈರ್ಯ,ಸ್ಪೂರ್ತಿ…..ಬಾಲ ಶಿವಯೋಗಿ

0
79

ಕನ್ನಡಮ್ಮ ಸುದ್ದಿ-ಅಥಣಿ ಸಾಧಕ ತಾನೇನಾದರು ಛಲ ಸಾಧಿಸಿಬೇಕಾದರೆ ಆತನಿಗೆ ಗುರಿ ಇರುತ್ತದೆ. ಗುರಿಯ ಹಿಂದೆ ಗುರು ಇರುತ್ತಾರೆ. ಮತ್ತು ಶರಣರ ನುಡಿ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಹಾಗೂ ಹೆಸರನ್ನು ತರುತ್ತದೆ. ಹಾಗೂ ಧೈರ್ಯ ಸ್ಪೂರ್ತಿ ಸದಾ ಬೆನ್ನೆಲಬಾಗಿ ನಿಲ್ಲುತ್ತಿರುತ್ತದೆ ಎಂದು ಅಡಹಳಟ್ಟಿ ಬಾಲ ಶಿವಯೋಗಿ ಆರ್ಶಿವಚನ ನೀಡಿದರು.
ಮುರುಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠದಲ್ಲಿ ನಡೆದ ಸತ್ಸಂಗದಲ್ಲಿ ಪೂಜ್ಯರು ಮಾತನಾಡುತ್ತಿದ್ದರು. ಈ ವಿಶ್ವಸ್ಥ ಪೀಠದ ಸಂಸ್ಥಾಪಕರಾದ ಎಂ.ಸಿ.ಗಂಗಾಧರವರು ಅಥಣಿಗೆ ಏನನ್ನು ಹೊತ್ತು ತಂದಿರಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಾಧನೆಯಿಂದ ಏನಾದರು ಮಹತ್ತರ ಸೇವೆ ಸಲ್ಲಿಸಬೇಕೆಂಬ ಛಲದಿಂದ ಈ ವಿದ್ಯಾಪೀಠ ಸ್ಥಾಪಿಸಿಕೊಂಡು ಬೃಹತ ಗಾತ್ರÀದ ಮಹಾವಿದ್ಯಾಲಯವನ್ನು ಕಟ್ಟಿಕೊಂಡು ಸ್ವಾವಲಂಬಿಯಾಗಲು ಎಲ್ಲ ತರಹದ ಶಿಕ್ಷಣ ತರಬೇತಿ ನೀಡುತ್ತಿರುವುದು ಇದು ಮಹಾ ಸಾಧನೇಯೆ ಸರಿ. ಇದೇ ಸಮಯದಲ್ಲಿ ಸೂಲಾರ್‌ ಯೋಜನೆಯನ್ನು 45 ಲಕ್ಷ ರೂ ವೆಚ್ಚದ 40 ಕೀಲೂ ವ್ಯಾಟ್‌ ವಿದ್ಯುತ್ತನ್ನು ನಿರ್ಮಿಸುವ ಯೋಜನೆಯ ಪೂಜಾ ಕಾರ್ಯಕ್ರಮ ನಡೆಯಿಸಿದರು. ಆ ನಿಮಿತ್ತ ಈ ಸತ್ಸಂಗ ನಡೆಯಿತು.
ಈ ಸತ್ಸಂಗದಲ್ಲಿ ಇಂಗಳಗಾಂವಿಯ ಮಲ್ಲಿಕಾರ್ಜುನ ಶಾಸ್ತ್ರಿಗಳು,ಗುರುಮೂರ್ತಿಯವರು, ಮತ್ತು ನಿವೃತ್ತ ಶಿಕ್ಷಕ ಶರಣ ಎಸ್‌.ಎ ಪಾಟೀಲರು ಶಿವಾನುಭವ ನಡೆಸಿದರು. ಶರಣಪ್ಪಾ ಗಂಗಾದರ,ಮಲ್ಲಿಕಾರ್ಜುನ ಕನಶೆಟ್ಟಿ,ಡಾ.ಎಸ್‌.ಆಯ್‌, ಇಚ್ಚಗೇರಿ, ಶಿವಪುತ್ರ ಯಾದವಾಡ, ಗಂಗಪ್ಪಾ ಗಂಗಾದರ, ಪಾಂಡೂರಂಗ ಐಹೂಳೆ, ಸಿದ್ಧಾರ್ಥ ಸಿಂಧೆ ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.ಎಂ.ಸಿ. ಗಂಗಾದರವರು ಸ್ವಾಗತಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here