ಶರಣರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ

0
3

ಸವಣೂರ: ಪ್ರತಿ ಒಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಶರಣರ ತತ್ವ ಹಾಗೂ ಜೀವನದ ಸಂದೇಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆ ಹೊಂದಲು ಸಾಧ್ಯವಾಗುತ್ತದೆ ಎಂದು ಕಲ್ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕಲ್ಮಠ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಜರುಗಿದ ವಿಶ್ವಗುರು ಬಸವೇಶ್ವರ ಜಯಂತಿ, ವಚನ ಸಂಗೀತ ಹಾಗೂ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರ ನೇತೃತ್ವದಲ್ಲಿ ೧೨ನೇ ಶತಮಾನದಲ್ಲಿಯೇ ಸಮಾನತೆಗಾಗಿ ಶರಣರು ಜಾಗೃತಿ ಕಾರ್ಯವನ್ನು ಕೈಗೊಂಡರು. ದೇಶ ವಿದೇಶದಲ್ಲಿ ಬಸವ ತತ್ವವನ್ನು ಅಳವಡಿಸಿಕೊಂಡ ಜನರು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ಆದ್ದರಿಂದ, ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಬಸವ ತತ್ವ ಸಹಕಾರಿಯಾಗಿದೆ ಎಂದರು.
ಹಾವೇರಿಯ ನಿವೃತ್ತ ಶಿಕ್ಷಕ ಸಿ.ಎಸ್. ಮರಳಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗಜ್ಯೊÃತಿ ಬಸವೇಶ್ವರರ ಜೀವನವನ್ನು ಒಂದು ಗಂಟೆಯಲ್ಲಿ ಹೇಳುವದು ಕುರುಡ ಆನೆಯ ವಿವರಣೆಯನ್ನು ನೀಡಿದಂತೆ.
ಧಾರ್ಮಿಕ ಪುರಷ, ಅನುಭಾವಿ, ಭಕ್ತಿ ಭಂಡಾರಿ, ಜ್ಞಾನಯೋಗಿ, ವಿಶ್ವಕುಟಂಬಿ, ಜಾತಿ, ಮೂಡ ನಂಬಿಕೆ ವಿರೋದಿ, ರಾಜಕೀಯ ಮುತ್ಸದ್ದಿ, ಪ್ರಧಾನ ಮಂತ್ರಿ, ಸ್ತಿçà ಸಂವೇಧನ ಹೊಂದಿದ ಶರಣ, ಲಿಂಗಾರ್ಚನೆ ಸಂಪೂರ್ಣ ಜ್ಞಾನವಂತ, ಶೋಷಿತರ ಮನವನ್ನು ಅರಿತ ಮಹಾನ ಮಾನವತಾವಾಧಿ ಸೇರಿದಂತೆ ಸಾವಿರಾರು ಬಿರುದುಗಳ ಬಗ್ಗೆ ಅರಿತಲ್ಲಿ ಮಾತ್ರ ಬಸವಣ್ಣನವರನ್ನು ಅರಿಯಲು ಸಾಧ್ಯವಾಗಲಿದೆ. ಕಾರಣ, ಈ ಎಲ್ಲ ಬಿರುದುಗಳು ಬವಣ್ಣನವರಿಗೆ ಸಲ್ಲಿದ್ದು ಎಂದರು.
ನಿವೃತ್ತ ಉಪನ್ಯಾಸಕ ಕೆ.ಎಸ್.ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರಮಠ ಮಹಿಳಾ ವಿದ್ಯಾನಿಲಯದ ಸಂಗೀತ ವಿಭಾಗದ ಪ್ರಾಧ್ಯಾಪಕಿ ಜ್ಯೊÃತಿ ಹಾಗೂ ವಿದ್ಯಾರ್ಥಿನಿಯರಿಂದ ವಚನ ಸಂಗೀತ ಕಾರ್ಯಕ್ರಮ, ಕುಮಾರಿ ಅನಘಾ ಮುರಡಿ ವಚನ ನೃತ್ಯ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಕುಮಾರ ಯರೇಶಿಮಿ, ಬಂಕಾಪುರದ ಅನಿಲ ಅಣ್ಣಾಸಾಹೇಬ, ಕೆ.ಎಸ್.ಕೌಜಲಗಿ, ಸಿ.ಎಸ್. ಮರಳಿಹಳ್ಳಿ ಹಾಗೂ ಕಲಾವಿದರಾದ ಅನಘಾ ಮುರಡಿ, ಜ್ಯೊÃತಿ ಅವರನ್ನು ಸನ್ಮಾನಿಸಲಾಯಿತು.
ದಸ್ತಗೀರಿ ಚಪ್ಪರಬಂದ ಹಾಗೂ ತಂಡದವರು ರಚಿಸಿದ ‘ತಾಲೂಕಿನ ಸಪ್ತ ಸಾಧಕರು’ ಕಿರು ಚಿತ್ರವನ್ನು ಲೋಕಾರ್ಪಣೆಗೊಳಿಸಲಾಯಿತು.
ಜಿ.ಪಂ ಮಾಜಿ ಸದಸ್ಯ ಮೋಹನ ಮೆಣಸಿನಕಾಯಿ, ಅಕ್ಕನ ಬಳಗದ ಅಧ್ಯಕ್ಷತೆ ಶೋಭಾ ಚರಂತಿಮಠ, ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು. ಶಿಕ್ಷಕರಾದ ಸಿ.ಎನ್.ಪಾಟೀಲ, ವಿ.ಬಿ.ದೋಂಗಡೆ ಹಾಗೂ ಡಿ.ಎಫ್.ಬಿಂದಲಗಿ ಕಾರ್ಯಕ್ರಮ ನಿರ್ವಹಿಸಿದರು.

loading...