ಶಸ್ತ್ರಗಳನ್ನು ತೊರೆದು ಮುಖ್ಯವಾಹಿನಿಗೆ ಬನ್ನಿ: ಸ್ಥಳೀಯ ಉಗ್ರರಿಗೆ ಸೇನೆ ಸಲಹೆ

0
3

ಶ್ರೀನಗರ:- ಪುಲ್ವಾಮಾ ಆತ್ಮಾಹುತಿ ದಾಳಿಯ ರೂವಾರಿಯನ್ನು ಕೇವಲ 100 ಗಂಟೆಗಳಲ್ಲಿ ಹೊಡೆದುರುಳಿಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದ್ದು, ಜಮ್ಮು, ಕಾಶ್ಮೀರದಲ್ಲಿ ಆಯುಧ ಎತ್ತಿ ಹಿಡಿಯುವವರ ನಾಶ ಖಚಿತ ಎಂದು ಎಚ್ಚರಿಸಿದೆ.
ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಸಿಆರ್‍ ಪಿಎಫ್ ಯೋಧರ ಬಲಿದಾನದ ಬಳಿಕ ಜೈಷೆ ಮೊಹಮದ್ ಸಂಘಟನೆಯ ಮುಖಂಡನಿಗಾಗಿ ಸೇನೆ ನಡೆಸಿದ ಹುಡುಕಾಟ ಯಶಸ್ವಿಯಾಗಿದೆ. ದೇಶದ ಜನತೆಗೆ ಈ ಮಾಹಿತಿ ನೀಡಲು ಸಂತೋಷವಾಗುತ್ತಿದೆ ಎಂದು 15 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್ ಧಿಲ್ಲಾನ್ ತಿಳಿಸಿದ್ದಾರೆ.
ಇದೇ ವೇಳೆ ಸ್ಥಳೀಯ ಭಯೋತ್ಪಾದಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿ, “ಕಾಶ್ಮೀರದಲ್ಲಿ ಬಂದೂಕು ಎತ್ತಿ ಹಿಡಿಯುವವರು ಶರಣಾದರೆ ಸರಿ. ಇಲ್ಲವಾದರೆ ನಾಶ ಖಚಿತ. ಕಣಿವೆಯನ್ನು ಪ್ರವೇಶಿಸುವ ಯಾವುದೇ ಉಗ್ರ ಜೀವಂತ ಹಿಂದಿರುಗುವುದಿಲ್ಲ” ಎಂದು ಹೇಳಿದ್ದಾರೆ.
ಉಗ್ರ ಸಂಘಟನೆಗಳ ಕದ ತಟ್ಟುವ ಯುವಕರನ್ನು ಎಚ್ಚರಿಸುವಂತೆ ತಾಯಂದಿರಿಗೆ ಕರೆ ನೀಡಿರುವ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್ ಧಿಲ್ಲಾನ್, “ಹಾದಿತಪ್ಪಿರುವ ಯುವಜನತೆ ಮುಖ್ಯವಾಹಿನಿಗೆ ಬರುವಂತೆ ತಾಯಂದಿರು ಬುದ್ಧಿಮಾತು ಹೇಳಬೇಕು” ಎಂದು ಮನವಿ ಮಾಡಿದ್ದಾರೆ.

loading...