ಶಾಂತಿಯುತ ಪ್ರತಿಭಟನೆಗೆ ಮುಂದಾದ ಚಿಕ್ಕೋಡಿಗರು

0
42

ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 15: ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಮೂಲಕ ಸರಕಾರವನ್ನು ಎಚ್ಚರಿಸಿವೆ.

ಕಳೆದ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಚಿಕ್ಕೋಡಿ ಜಿಲ್ಲಾ ರಚನೆ ಕೂಗು ಆಗಾಗ ಮೊಳಗುತ್ತಲೇ ಇರುತ್ತದೆ. ಆದರೆ ಹೊಸದಾಗಿ ಬರುವ ಸರಕಾರಗಳು ಚುನಾವಣೆ ಪೂರ್ವದಲ್ಲಿ ಆಶ್ವಾಸನೆ ಮೂಲಕ ಮತದಾರರ ಮನಗೆಲ್ಲಲು ಇದೊಂದು ತಂತ್ರವೆಂಬಂತಾಗಿಬಿಟ್ಟಿದೆ ಎನ್ನುವುದು ಪ್ರಜ್ಞಾವಂತರ ವಾದವಾಗಿದೆ.
ಕಳೆದ ತಿಂಗಳು ಸರಕಾರ ಕಾರ್ಯಕ್ರಮವೊಂದರಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ರಚನೆ ಕುರಿತಾಗಿ ತುರ್ತು ನಿರ್ಣಯ ಕೈಕೊಳ್ಳಬೇಕಾಗಿದೆ.

ಕಾರ್ಯಕಲಾಪ ಬಹಿಷ್ಕಾರ:
ಚಿಕ್ಕೋಡಿ ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ನೇತೃತ್ವದಲ್ಲಿ ಶುಕ್ರವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ನ್ಯಾಯಾಲಯದಿಂದ ಬಸವಸರ್ಕಲ್‍ವರೆಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ ಆಗಮಿಸಿ ಸರ್ಕಲ್‍ದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತ ಪಡಿಸಿದರು.

 

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟಕ್ಕೆ ಜೀವ ನೀಡಿದ್ದೇ ನಾನು, ಅದಕ್ಕೂ ಮುಂಚೆ ಈ ಕುರಿತು ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಿ ಈ ಭಾಗದ ಸಮಗ್ರ ಅಭಿವೃದ್ದಿಗೆ ನಾಂದಿ ಹಾಡಬೇಕು.
ಬಾಳಾಸಾಹೇಬ ವಡ್ಡರ

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಸಂಸದ ಪ್ರಕಾಶ ಹುಕ್ಕೇರಿ, ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳು,ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಚಿಕ್ಕೋಡಿ ಜಿಲ್ಲೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಂಘ,ಸಂಸ್ಥೆಗಳ ಪದಾಕಾರಿಗಳು ಪಾಲ್ಗೊಂಡಿದ್ದರು.

ಹಿರಿಯ ವಕೀಲರಾದ ಎಸ್.ಪಿ.ಉತ್ತುರೆ,ಎಚ್.ಎಸ್.ನಸಲಾಪುರೆ,ಮಾಣಿಕಮ್ಮಾ ಕಬಾಡಗಿ, ಸತೀಶ ಅಪ್ಪಾಜಿಗೋಳ, ಎಸ್.ಟಿ.ಮುನ್ನೋಳಿ, ಎಂ.ಐ.ಬೆಂಡವಾಡೆ, ಎಂ.ಕೆ.ಪೂಜೇರಿ, ಸಿ.ಐ.ಕಪಲಿ, ಬಿ.ಎನ್.ಪಾಟೀಲ, ಐ.ಡಿ.ನಾಯಿಕವಾಡಿ ಸೇರಿದಂತೆ ವಕೀಲರ ಸಂಘದ ಎಲ್ಲ ಪದಾಕಾರಿಗಳು ಉಪಸ್ಥಿತರಿದ್ದರು.

loading...