ಶಾಂತಿ ಸೌರ್ಹಾದತೆಯಿಂದ ಗಣೇಶ ವಿಸರ್ಜನೆಯಾಗುವಂತೆ ಕಾರ್ಯನಿರ್ವಹಿಸಿ ಬಂದೋಬಸ್ತ ಸಭೆಯಲ್ಲಿ ಆಯುಕ್ತ ರಾಜಪ್ಪ ಸೂಚನೆ

0
17

ಶಾಂತಿ ಸೌರ್ಹಾದತೆಯಿಂದ ಗಣೇಶ ವಿಸರ್ಜನೆಯಾಗುವಂತೆ ಕಾರ್ಯನಿರ್ವಹಿಸಿ
ಬಂದೋಬಸ್ತ  ಸಭೆಯಲ್ಲಿ ಆಯುಕ್ತ ರಾಜಪ್ಪ ಸೂಚನೆ

ಕನ್ನಡಮ್ಮ ಸುದ್ದಿ-ಬೆಳಗಾವಿ:ಬೆಳಗಾವಿ ಗಣೇಶೋತ್ಸವದ ಕರ್ನಾಟಕಕ್ಕೆ ಮಾದರಿಯಾಗಿದೆ. ನಿಮಗೆ ವಹಿಸಿದ ಕರ್ತವ್ಯದ ಕುರಿತು ಪೊಲೀಸ್ ಆಯುಕ್ತರ ಕಚೇರಿಗೆ ಬಂದು ವರದಿ ಸಲ್ಲಿಸಬೇಕು.. ಯಾವುದೇ ರೀತಿ ಪೊಲೀಸ್ ಇಲಾಖೆಯ ಮೇಲೆ ಕಪ್ಪು ಚುಕ್ಕೆ ಬಾರದಂತೆ ಸಿಬ್ಬಂದಿಗಳು ನೋಡಿಕೊಂಡು ಶಾಂತಿ ಸೌರ್ಹಾದತೆಯಿಂದ ಗಣೇಶ ವಿಸರ್ಜನೆಯಾಗುವಂತೆ ಕಾರ್ಯನಿರ್ವಹಿಸಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಹೇಳಿದರು.
ಶನಿವಾರ ಜಿಲ್ಲಾ ಪೊಲೀಸ್ ಕ್ರಿಡಾಂಗಣದಲ್ಲಿ ಗಣೇಶ ವಿಸರ್ಜನೆಯ ಬಂದೋಬಸ್ತ ಪÇರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಅನ್ಯ ಕೋಮಿನ ಪ್ರಾರ್ಥನಾ ಮಂದಿರದ ರಸ್ತೆಯಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ತೆರಳುವುದರಿಂದ ಪೆÇಲೀಸ್ ಸಿಬ್ಬಂದಿಗಳು ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಆಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಬೇರೆ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳು ಗಣೇಶ ವಿಸರ್ಜನೆಗೆ ನಿಯುಕ್ತಿ ಮಾಡಲಾಗಿದೆ. ನೀವು ನಿಮ್ಮ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೆ ಇಲ್ಲಿಯೂ ಮಾಡಬೇಕು. ಯಾವುದೇ ಕಾರಣಕ್ಕೆ ಸಾರ್ವಜನಿಕರಿಗೆ ಕಿಡಿಗೇಡಿಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.

loading...