ಶಾಲಾ ವಾಹನಗಳ ಸುರಕ್ಷತೆಗೆ ಆದ್ಯತೆ

0
19

ವಿಜಯಪುರ : ಸುರಕ್ಷಿತ ಸಂಚಾರಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ಪೊಲೀಸ್ ಇಲಾಖೆ ಮೊನ್ನೆಯಷ್ಟೆÃ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್‌ಗಳನ್ನು ಹೊಂದಿರುವ ನೂರಾರು ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿತ್ತು. ಈಗ ಶಾಲಾ ವಾಹನಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಪೊಲೀಸ್ ಅಧಿಕಾರಿಗಳು ಶಾಲಾ ವಾಹನಗಳ ಸುರಕ್ಷತೆಗಾಗಿ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯ ಇಂಡಿ, ಬಸವನ ಬಾಗೇವಾಡಿ ಹಾಗೂ ವಿಜಯಪುರ ನಗರ ವಿಭಾಗಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲೆಯ ವಾಹನ ಹಾಗೂ ಖಾಸಗಿ ವಾಹನಗಳನ್ನು ತಪಾಸಣೆಗೊಳಪಡಿಸಿದರು. ಅದರಂತೆ ಈ ಎಲ್ಲ ವಾಹನಗಳ ವಿಡೀಯೋ ಚಿತ್ರಿÃಕರಣ ಸಹ ಮಾಡಲಾಯಿತು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಳಾ ಮುಖ್ಯಸ್ಥರ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದೆ.
ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ವಾಹನಗಳನ್ನು ಸಮಾವೇಶಗೊಳಿಸಲಾಗಿತ್ತು. ಶಾಲಾ ವಾಹನ ಚಲಾಯಿಸುವ ಚಾಲಕರಿಗೆ ಸಂಚಾರಿ ನಿಯಮ ಪಾಲಿಸುವಂತೆ, ಯಾವುದೇ ಕಾರಣಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕೂರಿಸಬಾರದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಸದಾ ಅನುಸರಿಸಬೇಕು, ಶಾಲಾ ವಾಹನದ ಸಾಂಕೇತಿಕ ಬಣ್ಣವನ್ನು ಹಚ್ಚುವುದು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಇರಿಸುವುದು ಸೇರಿದಂತೆ ವಿವಿಧ ಅಗತ್ಯ ನಿರ್ದೇಶನಗಳನ್ನು ನೀಡಿದರು, ಯಾವುದೇ ರೀತಿಯ ಸಂಚಾರಿ ನಿಯಮಾವಳಿ ಉಲ್ಲಂಘಿಸಬಾರದು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಶಾಲಾ ವಾಹನ ಚಾಲಕರಿಗೆ ಖಡಕ್ ವಾರ್ನಿಂಗ್ ನೀಡಿದರು.
ಚಿಂತನ ಹಾಲ್‌ನಲ್ಲಿ ಶಾಲಾ ಮುಖ್ಯಸ್ಥರ ಸಭೆ
ಈ ಎಲ್ಲ ಕ್ರಮಗಳ ನಂತರ ಜಿಲ್ಲೆಯ ಶಾಲಾ ಮುಖ್ಯಸ್ಥರ ಸಭೆ ನಡೆಸಿದ ಪೊಲೀಸ್ ಅಧಿಕಾರಿಗಳು ಅವರಿಗೂ ಸಹ ಅಗತ್ಯ ಸಲಹೆ, ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ಅಮೃತ ನಿಕ್ಕಂ ಮಾತನಾಡಿ, ವಿಜಯಪುರ ಶಹರವನ್ನೊಳಗೊಂಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಹಾಗೂ ಖಾಸಗಿ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಪ್ರಯಾಣಿಸುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಲಾ ಹಾಗೂ ಖಾಸಗಿ ವಾಹನಗಳನ್ನು ಪರಿಶೀಲಿಸಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಹಾಕಿಕೊಂಡು ಹೋಗುವ ವಾಹನಗಳ ವಿಡಿಯೋ ರಿಕಾರ್ಡಿಂಗ್ ಮತ್ತು ಛಾಯಾಚಿತ್ರ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಒಂದು ವೇಳೆ ಮಿತಿ ಮೀರಿ ವಿದ್ಯಾರ್ಥಿಗಳನ್ನು ವಾಹನಗಳಲ್ಲಿ ತುಂಬಿದ್ದು ಕಂಡು ಬಂದರೆ ಅಂಥವರ ಪರವಾನಗಿ ರದ್ದುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ ವಾಹನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಮಕ್ಕಳನ್ನು ವಾಹನಗಳಲ್ಲಿ ಹತ್ತಿಸಿಕೊಂಡು ಶಾಲೆಗೆ ಬಿಡಬೇಕು, ಸಾಮರ್ಥ್ಯಕ್ಕಿಂತ ಮಿತಿ ಮೀರಿ ಮಕ್ಕಳನ್ನು ಹಾಕಿದರೆ ಕಾನೂನು ಉಲ್ಲಂಘಿಸಿದಂತಾಗುತ್ತದೆ. ವಾಹನಗಳನ್ನು ಜೋರಾಗಿ ನಿಷ್ಕಾಳಜಿತನದಿಂದ ನಡೆಸಬಾರದು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸೂಕ್ತ ಸೂಚನೆಗಳನ್ನು ವಾಹನ ಚಾಲಕರಿಗೆ ನೀಡಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು ಮಕ್ಕಳಿಗೆ ಸಮರ್ಪಕ ವಾಹನಗಳ ವ್ಯವಸ್ಥೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ವ್ಯವಸ್ಥೆಗಳನ್ನು ಕಾರ್ಯಯೋಜಿತಗೊಳಿಸುವಂತೆ ನೋಡಿಕೊಳ್ಳಬೇಕು, ತದನಂತರ ಲೋಪಗಳೆನಾದರೂ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಬಿ.ಎಸ್. ನೇಮಿಗೌಡ ಮೊದಲಾದ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

loading...