ಶಾಸಕನ ಪುತ್ರ ಸಿಬಿಐ ಬಲೆಗೆ

0
22

 ಬೆಂಗಳೂರು, ಅ.18- ಅಕ್ರಮ

ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ

ಒಳಪಡಿಸುವ ನಿರ್ಧಾರ ಕೈಗೊಂಡ ಮಾರನೇ

ದಿನ ಕಾಂಗ್ರೆಸ್ ಶಾಸಕರೊಬ್ಬರ ಪುತ್ರರೊಬ್ಬರನ್ನು

ಸಿಬಿಐ ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಲೇಕೆರಿ ಬಂದರಿನ ಅದಿರು

ನಾಪತ್ತೆ ಪ್ರರಕಣದಲ್ಲಿ ಉತ್ತರ ಕನ್ನಡ ಜಿಲ್ಲೆ

ಮುಂಡಗೋಡು ಯಲ್ಲಾಪುರ ಕ್ಷೇತ್ರದ ಶಾಸಕ

ಶಿವರಾಮ್ ಹೆಬ್ಬಾರ್ ಅವರ ಪುತ್ರ ವಿವೇಕ್

ಹೆಬ್ಬಾರ್ ಅವರನ್ನು ಸಿಬಿಐ ವಿಚಾರಣೆಗೆ

ಒಳಪಡಿಸಿದೆ. ಗಂಗಾನಗರದಲ್ಲಿರುವ ಸಿಬಿಐ

ಕಚೇರಿಯಲ್ಲಿ ಅಧಿಕಾರಿಗಳ ಮುಂದೆ

ಹಾಜರಾಗಿದ್ದಾರೆ. ವಿವೇಕ್ ಹೆಬ್ಬಾರ್ ಡ್ರೀಮ್

ಲಾಜಿಸ್ಟಿಕ್ ಕಂಪನಿಯ ಹಾಲಿ ವ್ಯವಸ್ಥಾಪಕ

ನಿರ್ದೇಶಕರಾಗಿದ್ದು, ಬೇಲೆಕೇರಿ ಬಂದರಿನಿಂದ

ಅದಿರನ್ನು ಅಕ್ರಮವಾಗಿ ಸಾಗಿಸಿದ ಆರೋಪ

ಕಂಪನಿಯ ಮೇಲಿದೆ. ಡ್ರಿಮ್ ಲಾಜಿಸ್ಟಿಕ್

ಕಂಪನಿಯನ್ನು ಇತ್ತೀಚೆಗಷ್ಟೇ ಶಾಸಕ ಶಿವರಾಮ್

ಹೆಬ್ಬಾರ್ ತಮ್ಮ ಪುತ್ರನಿಗೆ ವಹಿಸಿಕೊಟ್ಟಿದ್ದರು

ಎನ್ನಲಾಗಿದೆ. ಬೇಲೆಕೇರಿ ಬಂದರಿನಿಂದ

ಅದಿರು ವಹಿವಾಟು ಅಲ್ಲದೆ ಬಳ್ಳಾರಿ ಜಿಲ್ಲೆ

ಹೊಸಪೇಟೆಯಲ್ಲಿ ಅಕ್ರಮವಾಗಿ ಬಗೆದ

ಅದಿರನ್ನು ಖರೀದಿ ಮಾಡಿದ ಆರೋಪವೂ

ಕಂಪೆನಿಯ ಮೇಲಿದೆ ಎನ್ನಲಾಗಿದೆ.ಈಗಾಗಲೇ

ಸಿಬಿಐ ಬಂಧನದಲ್ಲಿರುವ ರೆಡ್ಡಿ ಆಪ್ತರಾದ

ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜು

ಸೇರಿದಂತೆ ಇತರರು ನೀಡಿದ ಮಾಹಿತಿಗಳನ್ನು

ಆಧರಿಸಿ ಸಿಬಿಐ ಅಧಿಕಾರಿಗಳು ವಿಚಾರಣೆಗೆ

ಹಾಜರಾಗುವಂತೆ ಶಾಸಕ ಹೆಬ್ಬಾರ್ ಅವರ

ಪುತ್ರ ವಿವೇಕ್ ಹೆಬ್ಬಾರ್ಗೆ ನೋಟಿಸ್ ಜಾರಿ

ಮಾಡಿದ್ದರ

loading...

LEAVE A REPLY

Please enter your comment!
Please enter your name here