ಶಾಸಕರಿಂದ ಸಮುದಾಯ ಭವನದ ಭೂಮಿ ಪೂಜೆ

0
39

ರಾಯಬಾಗ :16: ಪರಿಶಿಷ್ಟ ಜಾತಿ ಜನಾಂಗದ ಜನರಿಗೆ ವಿವಿಧ ಸಾಮಾಜಿಕ ಅಭಿವೃದ್ದಿ ಕೆಲಸ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನದ ಸದುಪಯೋಗ ಪಡೆಯಬೇಕು ಎಂದು ಶಾಸಕ ಧುರ್ಯೋಧನ ಎಂ. ಐಹೊಳೆ ಹೇಳಿದರು.

ಅವರು ತಾಲೂಕಿನ ನಿಪನಾಳ ಗ್ರಾಮದ ಸಮುದಾಯ ಭವನದ ಕಾಮಗಾರಿಯ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯ 10ಲಕ್ಷ ರೂ.ಗಳ ಅನುದಾನದಡಿಯಲ್ಲಿ ಸಮುದಾಯ ಭವನ ಕಾಮಗಾರಿಯನ್ನು ಕೈಕೊಳ್ಳಲಾಗಿದೆ ಎಂದು ಜಿ.ಪಂ. ಎ.ಇ.ಇ. ಎ.ಟಿ.ಅಸ್ಕಿ ಹೇಳಿದರು.

ಈ ಸಂದರ್ಭದಲ್ಲಿ ಸದಾಶಿವ ಘೋರ್ಪಡೆ, ಅಪ್ಪಾಸಾಹೇಬ ಬ್ಯಾಕೂಡೆ, ಜೆ.ಇ. ಸುಭಾಸ ಭಜಂತ್ರಿ, ಗ್ರಾ.ಪಂ. ಅಧ್ಯಕ್ಷ ಚಂದ್ರು ದೊ. ಪಡತರಿ, ಎಪಿಎಂಸಿ ಸದಸ್ಯ ರಾಮಣ್ಣಾ ನಂದಿ, ವಿ.ಎಸ್.ಪೋತದಾರ, ಸಿದ್ದಯ್ಯ ನಂದಿ, ಕೆಂಚಪ್ಪಾ ನಂದಿ, ಬಸಪ್ಪ ಕಂಠಿಕಾರ, ರಾಜು ಹಳಬರ, ಪರಸರಾಮ ಸನದಿ, ಸಿ.ಬಿ.ದೇಸಾಯಿ, ಶಂಕರ ಕುರಬೇಟ ಪಿಡಿಒ ಎಸ್.ಎಸ್. ಪೋತದಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here