ಶಾಸಕರ ಖರೀದಿಯಲ್ಲಿ ಬಿಎಸ್ ವೈ: ಸಿದ್ದು ಗುದ್ದು

0
6

ಹುಬ್ಬಳ್ಳಿ:- ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕಾಗಿ ಶಾಸಕರ ಖರೀದಿಗಿಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ಪಕ್ಷ ಬಿಡುವುದಿಲ್ಲ. ಮತ್ತೆ ಎಲ್ಲಿಂದ ಅವರು ಡಿಸಿಎಂ ಆಗುತ್ತಾರೆ ಎಂದು ವರದಿಗಾರರಿಗೆ ಅವರು ಮರು ಪ್ರಶ್ನೆ ಹಾಕಿದರು.
ಈಶ್ವರಪ್ಪ ಬಗ್ಗೆ ಪ್ರಶ್ನೆ ಕೇಳಬೇಡಿ. ಈಶ್ವರಪ್ಪಗೆ ಬ್ರೈನ್ ಗೂ ನಾಲಿಗೆಗೂ ಲಿಂಕ್ ತಪ್ಪಿದೆ. ಆದ್ದರಿಂದ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಇದಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ ಸಾಕು ಎಂದರು.

ಸಮ್ಮಿಶ್ರ ಸರ್ಕಾರ ಪತನದ ಬಗ್ಗೆ ಬಿಜೆಪಿ ನಾಯಕರು ಒಂದು ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ. ಜನರು ಬಿಜೆಪಿ ನಾಯಕರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ನಾಯಕರೇ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಕ್ಷ ತೊರೆದ ಉಮೇಶ ಜಾಧವ್ ಪ್ಯಾಕೇಜ್ ಡೀಲ್ ಗೆ ಒಳಗಾಗಿದ್ದಾರೆ. ಪಕ್ಷಾಂತರ ನಿಷೇಧ ಕಾಯಿದೆ ಇನ್ನೂ ಬಲಗೊಳ್ಳಬೇಕು. ಸ್ವಾರ್ಥ, ಹಣದ ಆಮಿಷಕ್ಕೆ ಅನೇಕರು ಬಲಿಯಾಗಿದ್ದಾರೆ. ರಾಜಕೀಯ ವ್ಯವಸ್ಥೆ ಹಾಳಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

loading...