ಶಾಸಕಿ ಲಕ್ಷ್ಮೀ ಹೆಬ್ಬಾಳಕರರಿಂದ ನೀತಿ ಸಂಹಿತೆ ಉಲ್ಲಂಘನೆ ?

0
56

ಕನ್ನಡಮ್ಮ ಸುದ್ದಿ -ಬೆಳಗಾವಿ: ರಾಜ್ಯದಲ್ಲಿ ಇಂದು ಎರಡನೇ ಹಂತದಮತದಾನ ನಡೆದಿದ್ದು, ಹದಿನಾಲ್ಕು ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದೆ.ಶಾಸಕಿ ಹೆಬ್ಬಾಳಕರ ನೀತಿ ಸಂಹಿತೆ ಉಲ್ಲಂಘಿಸಿ ದ ಆರೋಪ ಹೇಳಿ ಬಂದಿದೆ. ಬೆಳಗಾವಿಯ ಹಿಂಡಲಗಾದ ಮತಗಟ್ಟೆ ಸಂಖ್ಯೆ ೬೦ ರಲ್ಲಿ ಹಕ್ಕು ಚಲಾಯಿಸಿದ ಶಾಸಕಿ ಹೊರ ಬಂದು ಸರದಿ ಸಾಲಿನಲ್ಲಿ ನಿಂತ ಜನರಿಗೆ ಇದೊಂದು ಬಾರಿ ಮತ ನೀಡಿ ಎಂದು ಬೇಡಿಕೊಂಡಿದ್ದು, ಶಾಸಕಿ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಈಡಾಗಿದೆ. ಶಾಸಕಿಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುವ ಬದಲು ಚುನಾವಣಾ ಸಿಬ್ಬಂದಿ, ಎದ್ದು ನಿಂತು ಗೌರವ ಸಲ್ಲಿಸಿದರು ಎಂಬ ವಿಚಾರವೂ ಟೀಕೆಗೆ ಒಳಗಾಗಿದೆ.

loading...