ಶಾಸಕ ಅನಿಲ ಬೆನಕೆ ಬಳ್ಳಾರಿ ನಾಲಾ ಪರಿಶೀಲನೆ

0
12

ಬೆಳಗಾವಿ: ಬಸವಣಕುಡಚಿ ಹಾಗೂ ಕಣಬರ್ಗಿ ಮದ್ಯದಲ್ಲಿರುವ ಬಳ್ಳಾರಿ ನಾಲಾವನ್ನು ರವಿವಾರ ಶಾಸಕ ಅನಿಲ ಬೆನಕೆ ಪರಿಶೀಲನೆ ನಡೆಸಿದರು.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಮಾಳಗೆ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು , ಬಸವಣಕುಡಚಿ ಗ್ರಾಮದ ೫೦೦ ರಿಂದ ೧೦೦೦ ಎಕರೆ ಜಮೀನು ಮಳೆಗಾಲದಲ್ಲಿ ಬಳ್ಳಾರಿ ನಾಲಾ ತುಂಬುವುದರಿಂದ ಜಲಾವೃತಗೊಳ್ಳುತ್ತದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಬಳ್ಳಾರಿ ನಾಲಾದ ಮದ್ಯದಲ್ಲಿರುವ ಬ್ರಿಡ್ಜ್ನ ಹತ್ತಿರ ಕಸ ಶೇಖರಣೆಗೊಂಡಿದ್ದು ನಾಲಾದ ಸ್ಥಳವನ್ನು ಸ್ವಚ್ಚಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಮಾಳಗೆ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಸವಣಕುಡಚಿ ಗ್ರಾಮದ ಪ್ರಮೊದ ಪಾಟೀಲ, ವಿಜಯ ಕದಮ, ಶೀತಲ ಪಾಟೀಲ, ಬಸವರಾಜ ಹನ್ನಿಕರಿ, ಬರಮಾ ಹಲಗೇಕರ, ಗೋಪಾಲ ಪಾಟೀಲ, ರಾಜುಗೌಡ ಪಾಟೀಲ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಮಾಳಗೆ ಉಪಸ್ಥಿತರಿದ್ದರು.

loading...