ಶಿಕ್ಷಣಕ್ಕೆ ಮಹತ್ವ ನೀಡಿ ಮೂಢನಂಬಿಕೆಗಳನ್ನು ನಿರಾಕರಿಸುವ ಗುಣ ಬೆಳೆಸಿಕೊಳ್ಳಬೇಕು

0
65

ಕನ್ನಡಮ್ಮ ಸುದ್ದಿ-ಧಾರವಾಡ : ಎಲ್ಲ ಸಮುದಾಯಗಳಿಗೂ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಸರಕಾರದ ಸೌಲಭ್ಯಗಳು ದೊರೆಯುತ್ತವೆ ಈ ನಿಟ್ಟಿನಲ್ಲಿ ಆಶಾವಾದಿಯಾಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅಭಿಪ್ರಾಯಪಟ್ಟರು.
ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಭಗೀರಥ ಜಯಂತ್ಯುತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. ಆರ್ಥಿಕ,ಸಾಮಾಜಿಕ ಮತ್ತು ರಾಜಕೀಯ ಅಧಿಕಾರಗಳು ಎಲ್ಲರಿಗೂ ಸಿಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಸಮಾಜಗಳ ಸಂಘಟನೆ ಮತ್ತು ಅಭಿವೃದ್ಧಿಗೆ ಮಹಾತ್ಮರ ಜಯಂತಿಗಳು ಪೂರಕವಾಗಿವೆ. ಸರಕಾರ ನಡೆಸಿರುವ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಪ್ರಕಟವಾದರೆ ಅಭಿವೃದ್ಧಿಯ ಸ್ಪಷ್ಟ ಚಿತ್ರಣ ದೊರೆಯುತ್ತದೆ ಎಂದರು.
ಪತ್ರಕರ್ತ ಡಾ.ವೆಂಕನಗೌಡ ಪಾಟೀಲ ಮಾತನಾಡಿ, ಶಿವನೊಂದಿಗೆ ಹೋರಾಡಿ ಗಂಗೆಯನ್ನು ತಂದ ಹಾಗೂ ಸಮುದ್ರದೊಡನೆ ಸೆಣಸಾಡಿ ಉಪ್ಪನ್ನು ತಂದ ಉಪ್ಪಾರ ಸಮುದಾಯದಲ್ಲಿ ಛಲ,ಸಾಹಸ,ತ್ಯಾಗ,ಪ್ರಾಮಾಣಿಕತೆಯ ಮನೋಧರ್ಮವಿದೆ.ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬ್ರಿಟಿಷರು ಉಪ್ಪು ತಯಾರಿಕೆ ನಿಷೇಧಿಸಿದ ಪರಿಣಾಮವಾಗಿ ,ಕಟ್ಟಡ ನಿರ್ಮಾಣ,ಕಬ್ಬಿಣ ವಸ್ತುಗಳ ಕೆಲಸಗಳಲ್ಲಿ ಈ ಸಮುದಾಯ ತನ್ನನ್ನು ತೊಡಗಿಸಿಕೊಂಡಿತು.ದೇಶದ ವಿವಿಧ ರಾಜ್ಯಗಳಲ್ಲಿ ಉಪ್ಪಾರ ಸಮುದಾಯ ಹರಡಿಕೊಂಡಿದೆ.ಸಮಾಜದ ಐತಿಹಾಸಿಕ,ಸಾಂಸ್ಕøತಿಕ ಚರಿತ್ರೆಯನ್ನು ಕಟ್ಟುವ,ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ,ಮೂಢನಂಬಿಕೆಗಳನ್ನು ನಿರಾಕರಿಸುವ ಗುಣ ಬೆಳೆಸಿಕೊಳ್ಳಬೇಕು.ಎಲ್.ಜಿ.ಹಾವನೂರ,ಚಿನ್ನಪ್ಪರೆಡ್ಡಿ ಹಿಂದುಳಿದ ವರ್ಗಗಳ ಆಯೋಗಗಳು ನೀಡಿದ ಅಧ್ಯಯನ ವರದಿಗಳನುಸಾರ ಉಪ್ಪಾರರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು ಎಂದರು.
ಪಾಲಿಕೆ ಸದಸ್ಯ ಬಲರಾಮ್ ಕುಸುಗಲ್ ಮಾತನಾಡಿ,ನಿವೃತ್ತ ಐಎಎಸ್ ಅಧಿಕಾರಿ ವಿಜಯಕುಮಾರ್ ತೊರಗಲ್,ಅಕ್ಷತಾ ಪ್ರಕಾಶ ಉಪ್ಪಾರ, ಅನ್ನಪೂರ್ಣ ಸಿ.ತೊರಗಲ್,ವಿ.ಆರ್.ಪಾಟೀಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ,ಗೌರವಿಸಲಾಯಿತು. ಕ್ಲಾಸಿಕ್ ಐಎಎಸ್,ಕೆಎಎಸ್ ಸ್ಟಡಿ ಸರ್ಕಲ್ ನಿರ್ದೇಶಕ ಲಕ್ಷ್ಮಣ ಉಪ್ಪಾರ, ಎನ್.ಎಂ.ದಾಟನಾಳ,ಎನ್.ಹೆಚ್.ಉಪ್ಪಾರ,ಮಂಜುನಾಥ ಹಗೇದ ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಸತೀಶ ಮುರಗೋಡ ವೇದಿಕೆಯಲ್ಲಿದ್ದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ.ರಂಗಣ್ಣವರ್ ಸ್ವಾಗತಿಸಿದರು, ಆರತಿ ದೇವಶಿಖಾಮಣಿ ನಿರೂಪಿಸಿದರು,ಪ್ರೊ.ವಸಂತ ಮುಂಡರಗಿ ವಂದಿಸಿದರು.

loading...