ಶಿಕ್ಷಣ ಇಲಾಖೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಪೂರ್ವಭಾವಿ ಸಭೆ

0
50

ಕನ್ನಡಮ್ಮ ಸುದ್ದಿ-ಮುದ್ದೇಬಿಹಾಳ: ಪಟ್ಟಣದ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ದಿ. 20 ರಂದು 2017-18ನೇ ಸಾಲಿನ ಎಸ್.ಎಸ್‍ಎಲ್.ಸಿ ಪರೀಕ್ಷೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಡಿ. ಗಾಂಜಿ ಮಾತನಾಡಿ ಮುದ್ದೇಬಿಹಾಳ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾವಹಿಸಿ, ಎಲ್ಲ ಕೇಂದ್ರದವರು ಹಾಗೂ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಸರಕಾರಿ ನಿಯಮವನ್ನು ಪಾಲಿಸಬೇಕು ಪಾಲಿಸದೆ ಇದಲ್ಲಿ ಅವರ ವಿರುದ್ದ ಕಾನೂನು ಕ್ರಮವನ್ನು ಜರಿಗಸಲಾಗುವುದು ಎಂದರು.
ಮುದ್ದೇಬಿಹಾಳ ತಹಶೀಲ್ದಾರ ಎಂ.ಎ.ಎಸ್ ಬಾಗವಾನ ಮಾತನಾಡಿ ಪ್ರತಿ ವರ್ಷದಿಂದ ಈ ವರ್ಷ ಮುದ್ದೇಬಿಹಾಳ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ನಕೂಲ ಮೂಕ್ತ ಪರೀಕ್ಷಾ ಕೇಂದ್ರವನ್ನಾಗಿಸಿ ಮುದ್ದೇಬಿಹಾಳ ತಾಲೂಕಿನ ಶಿಕ್ಷಣ ಇಲಾಖೆಯ ಕಳಂಕವನ್ನು ತರುವ ಬದುಲು ಒಳ್ಳೆಯ ಹೆಸರು ತನ್ನಿ, ಪರೀಕ್ಷಾ ಕೇಂದ್ರದಲ್ಲಿ ಎಲ್ಲ ಶಿಕ್ಷಣ ಇಲಾಖೆಯವರು ಅತ್ಯಂತ ಶಿಸ್ತಿನಿಂದ ಪರೀಕ್ಷೆ ನಡೆಸುವಂತೆ ಸೂಚಿಸಿದರು. ಯಾರಾದರೂ ಕಾನೂನು ಬಾಹಿರ ಕೆಲಸವನ್ನು ಮಾಡಿದ್ದೆ ಆದರೇ ಅಂತವರ ವಿರುದ್ದ ಶಿಸ್ತಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಸ್ ಬಿ. ಚಲವಾದಿ, ಆರ್ ಜಿ ಕಿತ್ತೂರ, ಆಯಾ ಶಾಲೆಯ ಮುಖ್ಯಗುರುಗಳು ಶಿಕ್ಷಣ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...