ಶಿಕ್ಷರ ವೇತನದಲ್ಲಿ ಸಮವಸ್ತç ವಿತರಣೆ: ಶ್ಲಾಘನೆ

0
49

ಗುಳೇದಗುಡ್ಡ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ್ತç ನೀಡುತ್ತದೆ. ಆದರೆ ಖಾಸಗಿ ನೋಂದಾಯಿತ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತç, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಶೂ ನೀಡಿದ್ದು ಅತ್ಯಂತ ಶ್ಲಾಘನೀಯ. ಶಿಕ್ಷರ ಈ ಸೇವೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಅಭ್ಯಾಸ ಮಾಡಬೇಕು ಎಂದು ಕ್ಷೆÃತ್ರಶಿಕ್ಷಣಾಧಿಕಾರಿ ಎ.ಎಸ್. ಹತ್ತಳ್ಳಿ ಹೇಳಿದರು. ಅವರು ಇಲ್ಲಿನ ಶ್ರಿÃ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ನೀಡಿರುವ ಸೌಲಭ್ಯಗಳನ್ನು ಪಡೆದುಕೊಂಡು ಶಿಕ್ಷಣವಂತರಾಗಬೇಕು. ಶಿಕ್ಷಕರು ಮಕ್ಕಳನ್ನು ಒಳ್ಳೆÃಯ ನಾಗರಿಕರನ್ನಾಗಿ ಬೆಳಸಲು ಶ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗರುಗಳಾದ ಐ.ಎಸ್. ಸರಗಣಾಚಾರಿ, ಸಿಆರ್‌ಸಿ ಎಂ.ಎಸ್. ಉಂಕಿ, ಎಸ್.ಡಿ. ಎಂ.ಸಿ ಅಧ್ಯಕ್ಷ ಮಹಾಂತೇಶ ಚಿಕ್ಕಾಡಿ, ಉಪಾಧ್ಯಕ್ಷೆ ಸುಶೀಲಾಬಾಯಿ ಭಜಂತ್ರಿ, ವೈ.ವಿ. ಹಂಚಿ. ಬಿ.ಎನ್. ಗೌಡಪ್ಪನವರ, ಜಗದೀಶ ಬಡಿಗೇರ, ಪರಶುರಾಮ ಕೆಳಗಿನಓಣಿ, ಎಂ.ಸಿ. ಪೂಜಾರ, ಕವಿತಾ ಮುಂಡಾಸ, ಹುಚ್ಚಮ್ಮ ಗಾಜಿ ಮತ್ತಿತರರು ಇದ್ದರು.

loading...