ಶಿಥಿಲಾವಸ್ಥೆ ಶಾಲೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ಥಾವನೆ ಸಲ್ಲಿಸುವಂತೆ ಮನವಿ

0
36

 

ಮುಂಡಗೋಡ: ತಾಲೂಕಿನಲ್ಲಿ ಶಿಥಿಲಾವಸ್ಥೆ ತಲುಪಿರುವ ಶಾಲೆಗಳನ್ನು ಗುರುತಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ತಕ್ಷಣ ಪ್ರಸ್ಥಾವನೆ ಸಲ್ಲಿಸುವಂತೆ ಶಾಸಕ ಶಿವರಾಮ ಹೆಬ್ಬಾರ ಕ್ಷೆÃತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಗುರುವಾರ ಇಲ್ಲಿಯ ತಾ.ಪಂ ಸಭಾಂಗಣದಲ್ಲಿ ತ್ರೆöÊಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿದರೆ ಮಾತ್ರ ಸರ್ವಾಂಗೀಣ ಅಭಿವೃದ್ದಿ ಸಾದ್ಯ. ಯಾವುದೇ ಶಾಲೆಯಲ್ಲಿ ಶೌಚಾಲಯದ ಕೊರತೆ ಇದ್ದರೆ ಗ್ರಾ.ಪಂ ಗೆ ಮನವಿ ಸಲ್ಲಿಸಿ ನಿರ್ಮಿಸಿಕೊಳ್ಳುವಂತೆ ಹೇಳಿದರು. ವiಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಜನಪ್ರತಿನಿಧಿಗಳಾದವರು ಕೂಡ ಸ್ಥಳಿಯ ಶಾಲೆಗಳ ಬಗ್ಗೆ ಕಾಳಜಿವಹಿಸಬೇಕೆಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು. ತಾಲೂಕಿನಲ್ಲಿ ೧೨೧ ಪ್ರಾಥಮಿಕ ಹಾಗೂ ೧೫ ಪ್ರೌಢ ಶಾಲಾ ಶಿಕ್ಷಕರ ಕೊರತೆ ಇದೆ ಎಂದು ಕ್ಷೆÃತ್ರ ಶಿಕ್ಷಣಾಧಿಕಾರಿ ಸಭೆಯಲ್ಲಿ ಶಾಸಕರಿಗೆ ತಿಳಿಸಿದರು. ಸಾಲಗಾಂವ, ಚಿಗಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಮಟ್ಟ ಬತ್ತಿರುವುದರಿಂದ ಜಿ.ಪಂ ನವರು ಬೇಕಾ ಬಿಟ್ಟಿ ಕೊಳವೆ ಬಾವಿ ಕೊರೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಜನರಿಗೆ ನೀರಿನ ಸಮಸ್ಯೆಯಾದರೆ ಪರಿಹರಿಸಿಕೊಳ್ಳಬಹುದು ಆದರೆ ಪ್ರಾಣಿಗಳು ಏನು ಮಾಡಲು ಸಾದ್ಯ. ಹಾಗಾಗಿ ಉದ್ಯೊÃಗ ಖಾತ್ರಿ ಯೋಜನೆಯಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಜಾನುವಾರು, ವನ್ಯ ಜೀವಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡುವಂತೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಅತಿಕ್ರಮಣ ಹೋರಾಟ ಡ್ರಾಮಾ: ಅರಣ್ಯ ಅತಿಕ್ರಮಣ ಹೋರಾಟ ಕೂಡ ಒಂದು ಡ್ರಾಮಾ ಆಗಿಬಿಟ್ಟಿದೆ. ಈ ವಿಷಯವನ್ನು ಜಿಲ್ಲಾ ಅತಿಕ್ರಮಣ ಹೋರಾಟ ಸಮಿತಿ ಹೆಸರಲ್ಲಿ ವಸೂಲಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದರು. ಬಿಜೆಪಿ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಕೂಡ ಅರಣ್ಯ ಅತಿಕ್ರಮಣ ವಿಷಯದಲ್ಲಿ ಸುಳ್ಳು ಹೇಳುವಲ್ಲಿ ಹಿಂದೆ ಬಿದ್ದಿಲ್ಲ. ಈ ವಿಷಯದಲ್ಲಿ ಸಮಸ್ಯೆ ಪರಿಹರಿಸುವಲ್ಲಿ ಎಲ್ಲ ಪಕ್ಷಗಳು ವಿಪಲವಾಗಿವೆ. ಈ ನಡುವೆಯೂ ನಮ್ಮ ಕಾಂಗ್ರೆಸ ಸರ್ಕಾರದಲ್ಲಿ ಸುಮಾರು ೨೭ ಸಾವಿರ ಜನರಿಗೆ ಜಿ.ಪಿ.ಎಸ್ ಮಾಡಿ ಕೊಟ್ಟಿದ್ದೆÃವೆ. ಅರಣ್ಯ ಅತಿಕ್ರಮಣದಾರರು ಬಯಪಡುವ ಅವಶ್ಯಕತೆ ಇಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪ್ರತಿಯೊಬ್ಬ ಪಲಾನುಭವಿಯನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮ್ಮುಖದಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ. ಗಿಡ ಬೆಳೆಸುವ ಜವಾಬ್ದಾರಿ ಕೇವಲ ಅರಣ್ಯ ಇಲಾಖೆಯದ್ದಲ್ಲ. ಅದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ಅರ್ಹ ಪಲಾನುಭವಿಗಳಿಗೆ ನ್ಯಾಯ ಸಿಗಲಿದೆ. ಹೊಸದಾಗಿ ಅತಿಕ್ರಮಣ ಮಾಡುವವರು ತಮಗೆ ದೂರವಾಣಿ ಕರೆ ಕೂಡ ಮಾಡಬೇಡಿ ಎಂದು ಶಾಸಕರು ಹೇಳಿದರು
———-ಬಾಕ್ಸ್ ಸುದ್ದಿ: ಪಟ್ಟಣದ ಹೊರ ವಲಯ ಬಂಕಾಪುರ ರಸ್ತೆಯಲಿರುವ ಧಾರವಾಡ ಕೃಷಿ ವಿಶ್ವ ವಿದ್ಯಾಲಂiÀiದ ಸೀಡ್ಸ್ ಪಾರ್ಮನಲ್ಲಿ ೧೫ ಎಕರೆ ಜಾಗ ಪಡೆಯಲಾಗಿದ್ದು, ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದೆಂದು ಅಶ್ವಾಸನೆ ನೀಡಿ ೫ ವರ್ಷವಾಗಿದ್ದು, ಜನರ ಮೂಗಿಗೆ ತುಪ್ಪ ಸವರುತ್ತ ಹೋಗುತ್ತಿದ್ದಿÃರಿ, ಈ ಸಂಬಂಧ ಪಟ್ಟಣ ಪಂಚಾಯತ್ ಸದಸ್ಯರು ಜನರ ಹತ್ತಿರ ಹಣ ಪಡೆದಿದ್ದಾರೆ ಎಂದು ಕರ್ನಾಟಕ ದಲಿತ ರಕ್ಷಣಾ ವೇಧಿಕೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ್ ಗಂಬೀರ ಆರೋಪ ಮಾಡಿದರು. ಇದಕ್ಕೆ ಆಕ್ರೊÃಶಗೊಂಡ ಶಾಸಕರು ಈ ವಿಚಾರ ಜಿಲ್ಲಾಧಿಕಾರಿ ಮಟ್ಟದಲ್ಲಿದೆ. ತಾಂತ್ರಿಕ ದೋಷದಿಂದ ವಿಳಂಭವಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಚಿದಾನಂದ ಹರಿಜನ ಹಾಗೂ ಶಾಸಕರು ಹಾಗೂ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಜಯಮ್ಮ ಕೃಷ್ಣ ಹಿರೇಹಳ್ಳಿ, ದ್ರಾಕ್ಷಾಯಿಣಿ ಸುರಗಿಮಠ, ಕೃಷ್ಣಮೂರ್ತಿ ನಾಡಿಗ, ಜರೀನಾನಿ ನಾಗರೊಳ್ಳಿ, ರಮೇಶ ರಾಯ್ಕರ, ಗಣಪತಿ ವಡ್ಡರ, ದುರೀಣ ಕೃಷ್ಣ ಹಿರೇಹಳ್ಳಿ, ಪ್ರವೀಣ ಕಟ್ಟಿಮನಿ, ತಹಸೀಲ್ದಾರ ಶಂಕರ ಗೌಡಿ ಮುಂತಾದವರಿದ್ದರು.

loading...