ಶಿವಕುಮಾರ ಸ್ವಾಮೀಜಿ ಪುಣ್ಯತಿಥಿ: ಮುಖ್ಯಮಂತ್ರಿ ಗೌರವ ಸಲ್ಲಿಕೆ

0
3

ಬೆಂಗಳೂರು:-ದಿ.ಶಿವಕುಮಾರ ಸ್ವಾಮೀಜಿಯವರ ಮೊದಲ ವರ್ಷದ ಪುಣ್ಯ ತಿಥಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಿದ್ದಾರೆ.
ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಲು ದಾವೋಸ್‌ಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲಿಂದಲೇ ಟ್ವೀಟ್ ಮಾಡಿದ್ದು, ಮೊದಲ ವರ್ಷದ ಪುಣ್ಯತಿಥಿಯ ಕಾರ್ಯಕ್ರಮ ಸಂದರ್ಭದಲ್ಲಿ ಶ್ರಿಗಳ ಅನನ್ಯ ಸೇವೆಯನ್ನು ಗೌರವಪೂರ್ವಕವಾಗಿ ಸ್ಮರಿಸೋಣ ಎಂದು ತಿಳಿಸಿದ್ದಾರೆ.
ಅನ್ನ, ಅಕ್ಷರ ಮತ್ತು ಆಧ್ಯಾತ್ಮಗಳ ತ್ರಿವಿಧ ದಾಸೋಹದ ಅಮೂಲ್ಯ ಸೇವೆಯಿಂದ  ನಾಡಿನ ಸಮಸ್ತ ಜನರ ನಡೆದಾಡುವ ದೇವರೇ ಆಗಿದ್ದ ಕಾಯಕ ಯೋಗಿ ಶಿವಕುಮಾರ ಮಹಾಸ್ವಾಮಿಗಳ ಮೊದಲ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಶ್ರೀಗಳ ಅನನ್ಯ ಸಮಾಜ ಸೇವೆಯನ್ನು  ಗೌರಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ಗೌರವ ಸಲ್ಲಿಸಿದ್ದಾರೆ.
ಪುಣ್ಯ ತಿಥಿಯ ಅಂಗವಾಗಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಇಂದು ಸಿದ್ದಲಿಂಗಶ್ರೀ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶ್ರೀಗಳ 50 ಕೆ.ಜಿ.ಪುತ್ಥಳಿಯನ್ನು ಪ್ರತಿಷ್ಠಾಪಿಸಲಿದ್ದಾರೆ.

loading...