ಶಿವನಾಮ ಸ್ಮರಣೆಯಿಂದ ಜೀವನ ಪಾವನ: ಬಸವಲಿಂಗ ಶ್ರೀ

0
11

ಶಿವನಾಮ ಸ್ಮರಣೆಯಿಂದ ಜೀವನ ಪಾವನ: ಬಸವಲಿಂಗ ಶ್ರೀ

ಬೈಲಹೊಂಗಲ : ನಮಗೆಲ್ಲ ದೊಡ್ಡ ಹಬ್ಬವಾಗಿದೆ ಶಿವರಾತ್ರಿಯಲ್ಲಿ ಶಿವನಾಮ ಸ್ಮರಣೆ ಮಾಡಿ ಉಪವಾಸ ವೃತ ಮಾಡುವದರಿಂದ ಜೀವನ ಪಾವನ ವಾಗುತ್ತೆ ಎಂದು ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ರುದ್ರಾಕ್ಷಿಮಠದಲ್ಲಿ ಶಿವರಾತ್ರಿಯಂದು ಜರುಗಿದ ಸತ್ಸಂಗ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಮಾತನಾಡಿದ ಅವರು ಲಿಂಗಾಯತ ಧರ್ಮದಲ್ಲಿ ಶಿವರಾತ್ರಿ ಬಹಳ ಮಹತ್ವದ ಹಬ್ಬವಾಗಿದೆ ಪರಿಶುದ್ದ ಭಕ್ತಿಯಿಂದ ಶಿವನಾಮ ಸ್ಮರಣೆ ಮಾಡಿದರೆ ಶಿವನ ಒಲುಮೆ ಆಗುತ್ತದೆ ಅಲ್ಲದೆ ದೈಹಿಕವಾಗಿ ಉಪವಾಸ ಮಾಡುವದರಿಂದ ದೇಹಕ್ಕೆ ಒಳ್ಳಯದಾಗುತ್ತದೆ ಎಂದು ನುಡಿದರು.
ಕೆಎಲ್ ಇ ಸಂಸ್ಥೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ತಟವಾಟಿ ಹಾಗೂ ಮರ್ಚಟ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಶ್ರೀಶೈಲ ಶರಣಪ್ಪನವರ ಅವರನ್ನು ಈ ಸಂದರ್ಭದಲ್ಲಿ ಶ್ರೀಗಳು ಸತ್ಕರಿಸಿದರು ಸನ್ಮಾನ ಸ್ವೀಕರಿಸಿದ ಬಸವರಾಜ ತಟವಾಟಿ ಮಾತನಾಡಿ ಶ್ರೀಮಠದ ಸೇವೆ ಮಾಡಿದವರಿಗೆಲ್ಲರಿಗೂ ಒಳ್ಳಯದೆ ಆಗಿದೆ ಎಲ್ಲರೂ ಸೇವಾ ಭಾವನೆ ಹೊಂದಿ ಉತ್ತಮ ಸೇವೆ ಮಾಡಬೇಕೆಂದರು
ಗಣರಾದ ವಿಲಾಸ ವಾಲಿ ಅಧ್ಯಕ್ಷತೆ ವಹಿಸಿದ್ದರು ಶರಣ ಮಾಡ್ಡಪ್ಪ ಕುರಿ ಸ್ವಾಗತಿಸಿದರು ಶಿಕ್ಷಕ ಎಸ್ ಎಂ ಪಾಟೀಲ ನಿರೂಪಿಸಿ ವಂದಿಸಿದರು ಮಹೇಶ ಕೋಟಗಿ ಅಜ್ಜಪ್ಪ ಬೆಟಗೇರಿ ಶಿವಲಿಂಗಪ್ಪ ವಿಭೂತಿಮಠ ಹವಾಲ್ದಾರ ತಿಗಡಿ ಮಲ್ಲೇಶ ಪಾವಡಶೆಟ್ಟಿ ಪ್ರಭು ಇಂಗಳಗಿ ಈರಪ್ಪ ಉಪ್ಪಿನ ಮುಂತಾದವರು ಇದ್ದರು.

೦೧

loading...