ಶಿವಶರಣರ ಸಂಸ್ಕೃತಿ ಬೆಳೆಸಿ, ವಿಶ್ವಕ್ಕೆ ಮಾದರಿಯಾದವರೂ ಸುತ್ತೂರ ಜಗದ್ಗುರು

0
7

ಶಿವಶರಣರ ಸಂಸ್ಕೃತಿ ಬೆಳೆಸಿ, ವಿಶ್ವಕ್ಕೆ ಮಾದರಿಯಾದವರೂ ಸುತ್ತೂರ ಜಗದ್ಗುರು

ಗೋಕಾಕ: ಬಸವಾದಿ ಶಿವಶರಣರ ಸಂಸ್ಕೃತಿಯನ್ನು ಉಳಿಸಿ ಬೆಳೆಯಿಸಿಕೊಂಡು ಬಂದಿರುವ ಸುತ್ತೂರ ಜಗದ್ಗುರು ಪರಂಪರೆ ಹತ್ತನೆಯ ಶತಮಾನದಿಂದ ಇಂದಿಗೂ ಸಕಾರಾತ್ಮಕವಾಗಿ ಸಮಾಜದ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಲಿದೆ. ರಾಜಕೀಯ ಮೊದಲು ಮಾಡಿಕೊಂಡು ಆಧ್ಯಾತ್ಮದ ಉತ್ತುಂಗ ಶಿಖರವನ್ನು ಸೇರಿದ ಶಿವರಾತ್ರೆÃಶ್ವರರ ಪರಂಪರೆಯು ಇಂದಿನ ಪೂಜ್ಯ ಜಗದ್ಗುರು ಶಿವರಾತ್ರ‍್ರಿÃಶ್ವರ ದೇಶಿಕೇಂದ್ರ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ಸವೇಶ್ವರ ಜಾನಪದ ಕಲಾ ಬಳಗ, ಗೋಕಾಕ ಅಖಿಲ ಕರ್ನಾಟಕ ಲೇಖಕಿಯರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ದಂಡಗಿ ಅವರ ನಿಸರ್ಗ ನಿಲಯದಲ್ಲಿ ಆಯೋಜಸಿದ ೨೭೨ನೇ ಸಾಹಿತ್ಯ ಚಿಂತನ ಕಮ್ಮಟದಲ್ಲಿ “ಸುತ್ತೂರು ಜಗದ್ಗುರು ಪರಂಪರೆ” ಕುರಿತಾಗಿ ಅರ್ಥಪೂರ್ಣವಾಗಿ ಮಾತನಾಡಿ ಪ್ರತಿವರುಷ ‘ಊಟಿ’ಯಲ್ಲಿ ಜರಗುವ ಜೀವನೋತ್ಸಾಹ ಶಿಬಿರಗಳಲ್ಲಿ ಭಾಗವಹಿಸಲು ಕರೆ ನೀಡಿದರು.
ಜಾನಪದ ರಂಗಭೂಮಿ ಕಲಾವಿದರಾದ ಈಶ್ವರಚಂದ್ರ ಬೆಟಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ೨೦೧೯ನೇ ಪ್ರಸಕ್ತ ಸಾಲಿನಲ್ಲಿಯ ಜೀವನೋತ್ಸಾಹ ಶಿಬಿರದ ಅನುಭವಗಳನ್ನು ವಿವರಿಸುತ್ತ ತಾವೇ ರಚಿಸಿದ ‘ಸದ್ಗುರು ಕೃಪೆಯ ಜೀವನೋತ್ಸಾಹ’ ಹಾಗೂ ‘ಶಿವನ ಧ್ಯಾನ ಮುದ್ರೆ’ ಕವನಗಳನ್ನು ವಾಚನ ಮಾಡಿ, ಸುತ್ತೂರು ಜಗದ್ಗುರು ಪರಂಪರೆಗೆ ಕೃತಜ್ಞತೆ ಸಮರ್ಪಿಸಿದರು.
ಗೋಕಾಕ ಜೆ.ಎಸ್.ಎಸ್. ಮಹಾವಿದ್ಯಾಲಯದ ವಿಶ್ರಾಂತ ಸಸ್ಯಶಾಸ್ತçದ ಪ್ರಾಧ್ಯಾಪಕರಾದ ಪ್ರೊ. ವ್ಹಿ.ಎಸ್.ಕೌಲಾಪೂರ ಅವರು ನಿಸರ್ಗ ರಮಣೀಯ ಊಟಿಯಲ್ಲಿ ಸುತ್ತೂರು ಜಗದ್ಗುರುಗಳ ಆಶ್ರಯದಲ್ಲಿ ನಿರಾಭಾರಿ ಜಗದ್ಗುರು ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರಿÃ ಸಿದ್ದೆÃಶ್ವರ ಮಹಾಸ್ವಾಮಿಜಿಯ ಅಮೃತವಾಣಿಯು ವಿಶ್ವಕ್ಕೆ ದಿವ್ಯ ಸಂದೇಶ ನೀಡುತ್ತಲಿದೆ. ಇಂಥ ಶಿಬಿರದಲ್ಲಿ ಭಾಗವಹಿಸುವದರಿಂದ ಸಿಗುವ ಆನಂದವನ್ನು ಶಬ್ದಗಳಿಂದ ವರ್ಣಿಸಲಾಗದೆಂದು ಅಭಿಮಾನದಿಂದ ನುಡಿದರು.
ಪ್ರೊ. ಶಕುಂತಲಾ ಈಶ್ವರಯ್ಯ ಹಿರೇಮಠ ಹಾಗೂ ಹಿರಿಯರಾದ ಬಸವಲಿಂಗಪ್ಪ ಚೌಬಾರಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಪ್ರಾಚಾರ್ಯ ಜಯಾನಂದ ಮಾದರ ಸ್ವಾಗತಿಸಿದರು. ಪ್ರೊ. ರಾಜಶೇಖರ ಗುಣಕಿ, ವೀರನಗೌಡ ಪಾಟೀಲ ಪರಿಚಯಿಸಿದರು. ಪ್ರಾಚಾರ್ಯೆ  ಶಕುಂತಲಾ ದಂಡಗಿ ಕಾರ್ಯಕ್ರಮ ನಿರೂಪಿಸಿದರು. ಮ್ಕಕಳ ಸಾಹಿತಿ ಲಕ್ಷö್ಮಣ ಎಸ್. ಚೌರಿ ವಂದಿಸಿದರು.

loading...