ಶಿವಸೇನಾ-ಎಮ್‍ಇಎಸ್ ಕೃತ್ಯ: ಕರವೇ ಖಂಡನೆ

0
110

ಮಹಾರಾಷ್ಟ್ರ ಬಸ್ ಮೇಲೆ ಜೈ ಕನ್ನಡ ಬರೆದ ಕನ್ನಡಗರು
ಕನ್ನಡಮ್ಮ ಸುದ್ದಿ-ವಿಜಯಪುರ : ಮಂಗಳವಾರ ಕೋಲಾಪುರದ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರ ಶಿವಸೇನಾ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್‍ಗಳನ್ನು ತಡೆದು ಬಸ್‍ಗಳ ಮೇಲೆ ಜೈ ಮಹರಾಷ್ಟ್ರವೆಂದು ಬರೆದು ಉದ್ದಟತನ ತೋರಿದಲ್ಲದೆ, ವಾಹನ ಚಾಲಕ ಮತ್ತು ನಿರ್ವಹಕನನ್ನು ಕೆಳಗಿಳಿಸಿ ಅವರ ಬಾಯಿಂದ ಜೈ ಮಹಾರಾಷ್ಟ್ರ ಎಂದು ಹೇಳಿಸಿ ಕನ್ನಡಿಗರ ಸ್ವಾಭಿಮಾನ ಕೆಣಕಿದ ಕೃತ್ಯವನ್ನು ಖಂಡಿಸಿ ಕರವೇ ಜಿಲ್ಲಾ ಸಂಘಟಿಕರು ಬುಧುವಾರ ತೀವೃ ಆಕ್ರೋಶಗೊಂಡು ಕೇಂದ್ರ ಬಸ್ ನಿಲ್ದಾಣದಲ್ಲಿ ಎಮ್‍ಇಎಸ್ ಕಾರ್ಯಕರ್ತರು ಮತ್ತು ಶಿವಸೇನಾ ಕಾರ್ಯಕರ್ತರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಕೇಂದ್ರ ಬಸ್‍ನಿಲ್ದಾಣಕ್ಕೆ ಆಗಮಿಸಿದ್ದ ಕೋಲಾಪೂರ, ಇಂಚಲಕರಂಜಿ, ಜತ್ ಇನ್ನೀತರ ಮಹಾರಾಷ್ಟ್ರದ ಬಸ್‍ಗಳನ್ನು ತಡೆದು ಬಣ್ಣಿನಿಂದ ಬಸ್ ಗ್ಲಾಸ್ ಹಾಗೂ ಬಸ್ಸಿನ ಸುತ್ತಲು ಜೈ ಕನ್ನಡ ಮತ್ತು ಜೈ ಕರವೇ ಮಹಾರಾಷ್ಟ್ರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಬರೆಯದು ವಾಹನ ಚಾಲಕ ನಿರ್ವಾಹಕರನ್ನು ಕೆಳಗಿಳಿಸಿ ಅವರ ಶೆರ್ಟ್‍ಮೇಲೆ ಜೈ ಕನ್ನಡ ಎಂದು ಬರೆದು ಅವರ ಬಾಯಿಂದಲೂ ಜೈ ಕರ್ನಾಟಕ ಮಾತೆ ಎಂಬ ಘೋಷಣೆಗಳನ್ನು ಕೂಗಿದ ಘಟನೆ ಜರುಗಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಕೋಲಾಪುರ ಬಸ್ ನಿಲ್ದಾಣದಲ್ಲಿ ಕರ್ನಾಟಕದ ಸಾರಿಗೆ ವಾಹನವನ್ನು ನಿಲ್ಲಿಸಿ ಅದರ ಚಾಲಕ ನಿರ್ವಾಹಕರಿಂದ ಜೈ ಮಹಾರಾಷ್ಟ್ರ ಎಂದು ಹೇಳಿಸಿದ ಅವರ ಗುಂಡಾ ವರ್ತನೆಯನ್ನು ಖಂಡಿಸಿದರಲ್ಲದೆ ಪದೆ ಪದೆ ಕೆಚ್ಚೆದೆಯ ಕನ್ನಡಿಗರನ್ನು ಕೆಣಕುವುದು ತರವಲ್ಲ. ಈ ಹೀನ ವರ್ತನೆಯನ್ನು ನಾವು ಸಹಿಸುವುದಿಲ್ಲ. ಇದೇ ವರ್ತನೆ ಪುನಾರಾವರ್ತಿಸಿದರೆ. ಇನ್ನು ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಕನ್ನಡ ನೆಲದಲ್ಲಿದ್ದುಕೊಂಡು ಕರ್ನಾಟಕದ ಅಧಿಕಾರ ಅನುಭವಿಸುತ್ತಾ, ಕನ್ನಡದ ನೆಲ, ಜಲ, ಬಳಸಿಕೊಂಡು ಇಲ್ಲಿಯ ಗಾಳಿಯಲ್ಲಿ ಉಸಿರಾಡುತ್ತಿರುವ ಹೇಡಿ ಎಮ್‍ಇಎಸ್ ಕಾರ್ಯಕರ್ತರು ತಾಯಗಂಡರು, ಉಂಡ ಮನೆಯ ಜಂತಿ ಎನಿಸುವಲ್ಲಿ ನಿಪುಣರು ಇವರ ಇಂತಹ ಚಿಲ್ಲರೆ ವರ್ತನೆಯನ್ನು ನಾವು ಸಹಿಸುವುದಿಲ್ಲ. ಕಾರಣ ಇಂತಹ ಪುಂಡಾಟಿಕೆ, ನಿಲ್ಲಬೇಕು ಇಲ್ಲದ ಪಕ್ಷ ಇಲ್ಲಿಂದ ಗಡಿಪಾರುಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ ಮಾತನಾಡಿ, ಇಂತಹ ಪ್ರಕರಣಗಳನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿ ಇಲ್ಲಿರುವ ಕನ್ನಡಿಗ ಮತ್ತು ಮರಾಠಿಗರ ಬಾಂಧವ್ಯಕ್ಕೆ ಬೆಂಕಿ ಹಚ್ಚುತ್ತಿರುವ ಎಂಇಎಸ್ ಕಾರ್ಯಕರ್ತರ ಪುಂಡತನಕ್ಕೆ ಕಡಿವಾಣ ಹಾಕಬೇಕು ಅಲ್ಲದೇ ಈ ಕೂಡಲೇ ಕರ್ನಾಟಕ ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಅವರನ್ನು ಇಲ್ಲಿಂದ ಗಡಿಪಾರು ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭರತ್ ಕೋಳಿ, ಫಯಾಜ್ ಕಲಾದಗಿ, ರಾಜೇಂದ್ರಸಿಂಗ ಹಜೇರಿ, ನಸ್ಸಿಂ ರೋಜನ್ದಾರ, ಈರಣ್ಣ ಅಳ್ಳಗಿ, ಪಿದಾ ಕಲಾದಗಿ, ಅನೀಸ ಮನಿಯಾರ, ಆಸೀಪ ಪೀರವಾಲೆ, ಮಲ್ಲು ಮಡಿವಾಳರ ಮುಂತಾದವರು ಹಾಜರಿದ್ದರು.

loading...