ಶಿಶಾಲೆಗಾಗಿ ನಾವು-ನೀವುಳಿ ಯಶಸ್ವಿ

0
39

ಜಮಖಂಡಿ, 6- ಸ್ಥಳೀಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.3 ರಲ್ಲಿ ಸರಕಾರ ಘೋಷಿಸಿದ “ಶಾಲೆಗಾಗಿ ನಾವು-ನೀವು’ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ನ್ಯಾಯವಾದಿ ಎಸ್. ಜಿ. ಬಾಡಗಿ, ನಗರಸಭೆ ಸದಸ್ಯರುಗಳು ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷ ಆಯ್.ಎಚ್. ಅಪರಾಜ, ಮುಖ್ಯ ಗುರುಮಾತೆ ಶ್ರೀಮತಿ ಎನ್. ಆರ್. ಮುಜಾವರ ಇವರ ನೇತೃತ್ವದಲ್ಲಿ ಶಾಲಾ ಮಕ್ಕಳು ಭಾರಪೇಟ ಗಲ್ಲಿಯಲ್ಲಿ ಜಾಥಾ ನಡೆಸಿದರು. ಶಾಲಾ ಆಡಳಿತ, ದೈನಂದಿನ ಚಟುವಟಿಕೆ, ಶಾಲಾ ಸಮಗ್ರ ವಿವರಗಳ ಪರೀಶೀಲನಾ ಕಾರ್ಯಕ್ರಮಗಳು ಜರುಗಿದವು. ಸೈಪುದ್ದೀನ ಜಮಾದಾರ, ವಾಜೀದ ಅಖ್ತರ ಮಹಾವತ, ಶ್ರೀಮತಿ ಶಕೀಲಾ ಗದಗ ಮತ್ತು ಪೋಷಕರು ಹಾಗೂ ಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

loading...

LEAVE A REPLY

Please enter your comment!
Please enter your name here