ಶಿಸ್ತುಬದ್ಧ ಜೀವನ ಶೈಲಿಯಿಂದ ಉತ್ತಮ ಆರೋಗ್ಯ

0
5

ಕನ್ನಡಮ್ಮ ಸುದ್ದಿ-ಧಾರವಾಡ: ಪ್ರಾತಃಕಾಲದ ವಾಯುವಿಹಾರ, ಸರಳ ವ್ಯಾಯಮಗಳು, ಯೋಗ ಸಾಧನೆ, ಹಸಿವಿದ್ದಷ್ಟೆÃ ಊಟ ಮಾಡುವುದು, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಶಿಸ್ತುಬದ್ಧ ಜೀವನ ಶೈಲಿಯಿಂದ ಶ್ರೆÃಷ್ಠ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ನಿವೃತ್ತ ಸರ್ಜನ್ ಡಾ.ವ್ಹಿ.ಡಿ. ಕರ್ಪೂರಮಠ ಅಭಿಪ್ರಾಯಪಟ್ಟರು.
ತತ್ವಾನ್ವೆÃಷಣ ಮಂದಿರದಲ್ಲಿ ವೀರಶೈವ ಜಂಗಮ ಸಂಸ್ಥೆಯು ಹಮ್ಮಿಕೊಂಡಿದ್ದ ನಿರಂತರ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ‘ಆರೋಗ್ಯವೇ ಮಹಾಭಾಗ್ಯ’ ಎಂಬ ವಿಷಯವಾಗಿ ೧೬೬ನೇ ಉಪನ್ಯಾಸ ನೀಡಿ ಮಾತನಾಡಿದರು. ಸೇವಿಸುವ ಆಹಾರದಲ್ಲಿ ತರಕಾರಿ, ಹಾಲು, ಬೇಳೆಕಾಳುಗಳಂತಹ ಪೋಷ್ಟಿಕಾಂಶಗಳಿರಬೇಕು. ನಾರಿನಂಶವಿರುವ ಹಣ್ಣುಗಳನ್ನು ಸೇವಿಸಬೇಕು. ಖಿನ್ನತೆಯಿಂದ ಹೊರಬಂದು ದಿನಪೂರ್ತಿ ಕ್ರಿಯಾಶೀಲರಾಗಿರಬೇಕು. ಮನುಷ್ಯನ ಮನಸ್ಸಿಗೆ ಹಸಿರು ಸಂಭ್ರಮವನ್ನು ತುಂಬುವ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಗಮನ ನೀಡಬೇಕಾಗಿದೆ. ಗಿಡಮರಗಳು ನಮ್ಮ ಜೀವನದ ಸಂಗಾತಿಗಳಾಗಿದ್ದು, ಬದುಕಲು ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ಪಡೆಯಬೇಕೆಂಬ ಹಂಬಲದಿಂದಲಾದರೂ ಎಲ್ಲೆಡೆ ಅತಿ ಹೆಚ್ಚು ಗಿಡಗಳನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದರು.

ಇಂದು ಹಳ್ಳಿ-ಪಟ್ಟಣ ಸೇರಿದಂತೆಣೆಲ್ಲೆಡೆ ಹದಿಹರೆಯ ಯುವಕ-ಯುವತಿಯರ ಸಮಸ್ಯೆಗಳು ವ್ಯಾಪಕಗೊಂಡಿವೆ. ಹಾರ್ಮೊನುಗಳಲ್ಲಾಗುವ ಏರುಪೇರಿನಿಂದಾಗಿ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಆಗ ಯುವ ಸಮೂಹ ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಾರೆ. ಯಾವ ಸಮಸ್ಯೆಯನ್ನು ಗುಟ್ಟಾಗಿಡಬಾರದು. ಹಿರಿಯರಲ್ಲಿ ಹೇಳಿಕೊಳ್ಳಬೇಕು. ಈ ವಿಷಯದಲ್ಲಿ ತಂದೆ-ತಾಯಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು.
ನಿವೃತ್ತ ಸರ್ಜನ್ ಡಾ. ಆರ್. ಜಿ. ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು. ಅನಸೂಯಾ ಹಿರೇಮಠ, ನೀಲಲೋಚನಾ ಹಿರೇಮಠ, ಸೋಮಶೇಖರ ಮರಡಿಮಠ, ಪಂಪಾಪತಿ ಹಿರೇಮಠ, ಡಾ. ಮಹಾಂತಸ್ವಾಮಿ ಹಿರೇಮಠ, ಡಾ. ಬಿ. ಎಂ. ಸ್ವಾಮಿ, ಡಾ. ಬಸಯ್ಯ ಶಿರೋಳ, ವ್ಹಿ.ಎಸ್. ಗಂಗಾಧರಮಠ, ಸಿ. ಎಸ್. ಪಾಟೀಲಕುಲಕರ್ಣಿ, ಜಗದೀಶ ಸುಬ್ಬಾಪೂರಮಠ, ಜಿ. ಜಿ. ಹಿರೇಮಠ ಇದ್ದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇಕಡಾ ೯೦ಕ್ಕಿಂತ ಹೆಚ್ಚು ಅಂಕಗಳಿಸಿದ ಧಾರವಾಡ ನಗರದ ವೀರಶೈವ ಜಂಗಮ ವಿದ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರನ್ನು ಸನ್ಮಾನ ಮಾಡಲಾಯಿತು.

loading...