ಶೀಘ್ರವೇ ಪೊಲೀಸ್ ಪೇದೆ‌‌ ನೇಮಕಾತಿ: ಬಸವರಾಜ್ ಬೊಮ್ಮಾಯಿ

0
11

ಕಲಬುರಗಿ- ಪೊಲೀಸ್ ಇಲಾಖೆಗೆ ಈಗಾಗಲೇ 6,000 ಪೇದೆಗಳ ನೇಮಕಾತಿ ಪ್ರಗತಿಯಲ್ಲಿದ್ದು, ಎರಡು ವರ್ಷದೊಳಗೆ 16,000 ಪೊಲೀಸ್ ಪೇದೆಗಳು ಹಾಗೂ 630 ಪಿಎಸ್ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿಂದು  ನಡೆದ ಪಿಎಸ್ಐ ಹಾಗೂ ಆರ್ಎಸ್ಐ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಮುನ್ನ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 6,000 ಪೇದೆಗಳ ಭರ್ತಿ  ಚಾಲನೆಯಲ್ಲಿದೆ,  ಹಣಕಾಸು ಇಲಾಖೆಯೂ ನೇಮಕಾತಿಗೆ ಒಪ್ಪಿಗೆ ಸೂಚಿಸಿದೆ ಎಂದು ಮಾಹಿತಿ  ನೀಡಿದರು.

ಪೊಲೀಸ್  ಇಲಾಖೆಯನ್ನು ಬಲಪಡಿಸುವ ಉದ್ದೇಶದಿಂದ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ  ಮೀಸಲಿಡಲಾಗುವುದು.  ಮುಖ್ಯವಾಗಿ ಸೈಬರ್ ಕ್ರೈಂ ವಿಭಾಗವನ್ನು ತಾಂತ್ರಿಕವಾಗಿ ಮತ್ತಷ್ಟು  ಸುಧಾರಿಸಲಾಗುವುದು ಎಂದರು.

ಅಲ್ಲದೇ, ಮುಂದಿನ ಎರಡ್ಮೂರು ವರ್ಷದೊಳಗೆ ಪೊಲೀಸರಿಗೆ ಶೇ 60 ರಷ್ಟು ಮನೆಗಳನ್ನು ನಿರ್ಮಾಣ ಮಾಡಿ‌ಕೊಡಲಾಗುವುದು ಎಂದು ತಿಳಿಸಿದರು.

loading...