ಶೇಡಬಾಳ ಪರಮೇಶ್ವರವಾಡಿ ಸಂಪರ್ಕ ರಸ್ತೆಯ ಕಾಮಗಾರಿಗೆ ಚಾಲನೆ

0
10

 

ಮೋಳೆ: ಕಾಗವಾಡ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಸುಮಾರು 14 ಕೋಟಿ ರೂ ಮಂಜೂರಾತಿ ನೀಡಿರುವುದಾಗಿ ಚಿಕ್ಕೋಡಿ ಲೋಕ ಸಭಾ ಸದಸ್ಯ ಪ್ರಕಾಶ ಹುಕ್ಕೇರಿಯವರು ಹೇಳಿದರು.

ಅವರು ಶೇಡಬಾಳ ಗ್ರಾಮದಲ್ಲಿ ನಬಾರ್ಡ ಯೋಜನೆಯಡಿಯಲ್ಲಿ ಮಂಜೂರಾದ 1 ಕೋಟಿ ರೂ ವೆಚ್ಚದ ಶೇಡಬಾಳ ಪರಮೇಶ್ವರವಾಡಿ ಸಂಪರ್ಕ ರಸ್ತೆಯ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಸಂಸದರಾಗಿ ಆಯ್ಕೆಯಾದ ನಂತರ ಕಾಗವಾಡ ಮತಕ್ಷೇತ್ರದಲ್ಲಿ ಕಾಗವಾಡ, ಮದಭಾಂವಿ, ಶೇಡಬಾಳ, ಐನಾಪೂರ, ಶಿರಗುಪ್ಪಿ, ಜುಗೂಳ ಗ್ರಾಮಗಳಲ್ಲಿನ ರಸ್ತೆ ಕಾಮಗಾರಿಗೆ ಹಾಗೂ ಉಗಾರ ಬುದ್ರುಕ-ಉಗಾರ ಖುರ್ದ ಗ್ರಾಮಗಳ ಸಂಪರ್ಕ ರಸ್ತೆಯ ಮೇಲೆ ಸೇತುವೆ ನಿರ್ಮಾಣಕ್ಕಾಗಿ 3 ಕೋಟಿ ರೂ. ಹಾಗೂ ಉಗಾರ ಖುರ್ದದಲ್ಲಿ ದ್ವೀಪಥ ರಸ್ತೆಗಾಗಿ ನಿರ್ಮಾಣಕ್ಕಾಗಿ 2.5 ಕೋಟಿ ರೂ. ಸೇರಿದಂತೆ ಒಟ್ಟು 14 ಕೋಟಿ ರೂ. ಮಂಜೂರಾತಿ ನೀಡಿರುವುದಾಗಿ ಹೇಳಿದರು.

ಈ ಸಮಯದಲ್ಲಿ ರಾಯಗೌಡ ಪಾಟೀಲ, ಮಹಾದೇವ ಕೋರೆ, ಎಂ.ಎ.ಗಣೆ, ಕುಮಾರ ಬರಗಾಲೆ ಗುತ್ತಿಗೆದಾರ ಬಿ.ಆಯ್.ಪಾಟೀಲ, ಕಿರಣ ಪಾಟೀಲ, ಚಂದ್ರಕಾಂತ ಇಮ್ಮಡಿ, ವಿಜಯ ಅಕಿವಾಟೆ, , ಅಜೀತ ಸವದತ್ತಿ, ರಾಜು ನಾಂದ್ರೆ, ಕುಮಾರ ಪಾಟೀಲ, ವಿನೋದ ಬರಗಾಲೆ, ಸುಭಾಷ ಢಾಲೆ, ನೇಮಗೌಡ ಘೇನಪ್ಪಗೋಳ, ಅಣ್ಣಾಸಾಬ ಹಂಡಗೆ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

loading...

LEAVE A REPLY

Please enter your comment!
Please enter your name here