ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಣೆ

0
23

ಕನ್ನಡಮ್ಮ ಸುದ್ದಿ-ಬೆಳಗಾವಿ: ವರ್ಷಕೊಮ್ಮೆ ಬರುವ ಉಪವಾಸದ ಈ ತಿಂಗಳು ಕೊನೆಯ ಹಂತ ತಲುಪಿದ್ದು, ಬುಧವಾರ ೨೫ ದಿನಗಳ ಉಪವಾಸ ಕಳೆದಿವೆ.
ವರ್ಷಕೊಮ್ಮೆ ಬರುವ ಉಪವಾಸದ ಈ ತಿಂಗಳು ಮುಕ್ತಾಯದ ಹಂತದಲ್ಲಿ ರಂಜಾನ್ ಸಂಭ್ರಮವನ್ನು ಆಚರಿಸಲಾಯಿತು.
ಪ್ರತಿಯೊಬ್ಬನೂ ಶ್ರದ್ಧೆ ಮತ್ತು ನಿಷ್ಠೆಯಿಂದ ಕೈಗೊಳ್ಳುವ ಈ ತಿಂಗಳಲ್ಲಿ ನಮ್ಮಿಂದ ಆದ ತಪ್ಪುಗಳನ್ನು ತಿದ್ದಿ ಕೊಳ್ಳುವ ಅವಕಾಶವಿರುತ್ತದೆ. ಉಪವಾಸ ಅಥವಾ ರೋಜಾ ಎಂಬುದು ಇಸ್ಲಾಂ ಧರ್ಮದ ಕಡ್ಡಾಯ ನಿಯಮಗಳಲ್ಲಿ ಒಂದು.
ಸೂರ್ಯ ಉದಯಿಸುವ ಮೊದಲು ಸೂರ್ಯಾಸ್ತವಾಗುವ ನಂತರದವರೆಗೂ ಯಾವುದೇ ರೀತಿಯ ಆಹಾರವನ್ನಾಗಲಿ ಸೇವಿಸದೆ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳನ್ನು ಮಾಡದೆ ಇರುವುದು.
ಸೂರ್ಯೋದಯಕ್ಕೆ ಮುಂಚೆ ಸೇವಿಸುವ ಆಹಾರ ‘ಸೆಹರಿ’ ಸೂರ್ಯಾಸ್ತದ ನಂತರ ಸೇವಿಸುವ ಆಹಾರ ‘ಇಫಾರಿ’. ಕುರಾನ್‌ನ ಎರಡನೇ ಅಧ್ಯಾಯದಲ್ಲಿ ಉಲ್ಲೆÃಖಿಸಿರುವಂತೆ ಆಯತ್ ನಂ-೧೮೩ ಸಾರಾಂಶ ‘ನಿಮ್ಮ ಮೇಲೆ ಉಪವಾಸವನ್ನು ಕಡ್ಡಾಯ ಮಾಡಲಾಗಿದೆ, ಇದರಿಂದ ನೀವು ನರಕರಿಂದ ಮುಕ್ತಿಯನ್ನು ಪಡೆಯುತ್ತಾರೆ ಎನ್ನತ್ತಾರೆ ಮುಸ್ಲಿಮರು.
ಪ್ರೌಢಾವಸ್ಥೆಗೆ ಬಂದಂತಹ ಮಾನಸಿಕ ಹಾಗೂ ಆರೋಗ್ಯವಂತರಾದ ಸ್ತ್ರೀ-ಪುರುಷರಿಗೆ ಕಡ್ಡಾಯವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಅತಿ ದೂರದ ಪ್ರಯಾಣದಲ್ಲಿರುವವರು ರಂಜಾನ್ ಮಾಸದ ನಂತರದ ಉಪವಾಸವನ್ನು ಪೂರ್ಣಗೊಳಿಸಬಹುದು.
ಉಪವಾಸದ ಪುಣ್ಯ: ಪ್ರವಾದಿ ಮಹಮ್ಮದ್ ಪೈಗಂಬರ್ ನುಡಿದಂತೆ ‘ಸ್ವರ್ಗದ ಎಂಟು ಬಾಗಿಲುಗಳ ಪೈಕಿ ಬಾಬುರ್ ರೈಯ್ಯಾನ್ ಸಹ ಒಂದು. ಇದು ಉಪವಾಸದವರಿಗೆಂದೇ ಮೀಸಲು. ಪ್ರಳಯದ ನಂತರ ಅಲ್ಲಾಹನು ‘ ಓ ಉಪವಾಸಗಳೇ ಏಳಿರಿ ಈ ಬಾಗಿಲಿನಿಂದ ಸ್ವರ್ಗ ತೆರೆಯುತ್ತದೆ ಎನ್ನತ್ತಾರೆ ಮುಸ್ಲಿಂ ಭಾಂದವರು.
ರಂಜಾನ್ ಮಾಸದಲ್ಲಿ ಕೊನೆಯ ಐದು ರಾತ್ರಿಗಳಲ್ಲಿ ದಿನಬಿಟ್ಟು ದಿನದಂತೆ ಜಾಗರಣೆ ಮಾಡಲಾಗುತ್ತದೆ. ಆ ರಾತ್ರಿಯಲ್ಲಿ ಒಂದು ರಾತ್ರಿಯನ್ನು ‘ಷಬ್-ಎ-ಖದರ’ ಎನ್ನುತ್ತಾರೆ.
ಪ್ರತಿಯೊಂದು ಕ್ಷಣದಲ್ಲಿ ಅಲ್ಲಾ ನಾಮ ಸ್ಮರಿಸಿ ಕೊನೆಯದಿನ ಅತೀ ವಿಜೃಂಭಣೆಯಿಂದ ರಮಜಾನ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು ಇಪ್ಪತಾಬ ಖಾನ್ ಕನ್ನಡಮ್ಮ ಗೆ ಮಾಹಿತಿ ನೀಡಿದರು.

loading...