ಶ್ರಿÃನಿವಾಸ ಕಲ್ಯಾಣೋತ್ಸವಕ್ಕೆ ಚಾಲನೆ

0
4

ಲೋಕಾಪುರ : ಮನೆಗಳಲ್ಲಿ ಮಾಡುವ ವಿವಾಹಾದಿಗಳು ಎರಡೂ ಕುಟುಂಬಗಳ ಅಭಿವೃದ್ಧಿಗಾಗಿ ಮಾಡಲಾಗುತ್ತದೆ, ಆದರೆ ದೇವತಾ ಕಲ್ಯಾಣೋತ್ಸವಗಳು ಲೋಕ ಕಲ್ಯಾಣಾರ್ಥವಾಗಿ ಮಾಡುವ ಪುಣ್ಯಕಾರ್ಯವಾಗಿರುತ್ತದೆ ಎಂದು ಪಂ.ನರಸಿಂಹಚರ‍್ಯ ಗೋಠೆ ಹೇಳಿದರು.
ಸ್ಥಳೀಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶ್ರಿÃನಿವಾಸ ಕಲ್ಯಾಣ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಆಚರಣೆ ಕೇವಲ ಹಬ್ಬ ಪ್ರಾರ್ಥನೆ ಅಥವಾ ಸಂಪ್ರದಾಯದ ಕಾರ್ಯಕ್ರಮವಲ್ಲ ಬದಲಿಗೆ ರಾಮಾನುಜರು ಹಾಕಿಕೊಟ್ಟ ನಿರ್ವಹಣೆ ಸಾಮರ್ಥ್ಯ, ಮೌಲ್ಯಾಧಾರಿತ ನೀತಿಗಳು, ಪರಿಣಾಮಕಾರಿಯಾದ ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಹೇಳಿಕೊಡುವ ಮೂಲಕ ಎಲ್ಲಾ ಭಾರತೀಯರ ಸಾಮಾಜಿಕ, ಆರ್ಥಿಕ ಕಾರ್ಯ ಚಟುವಟಿಕೆಗಳನ್ನು ವೃದ್ಧಿಸುವುದಾಗಿದೆ ಎಂದು ಪ್ರವಚನ ಮುಖಾಂತರ ವೆಂಕಟೇಶ್ವರ ಕಲ್ಯಾಣೋತ್ಸವದ ಪ್ರಾಮುಖ್ಯತೆ ಯನ್ನು ವಿವರಿಸಿದರು.
ಅಧ್ಯಕ್ಷತೆ ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಗುರುರಾಜ ಜೋಶಿ ಮಾತನಾಡಿ ವಿವಾಹ ಕಾಲದಲ್ಲಿ ಹೇಳಲಾಗುವ ವೇದ ಮಂತ್ರಗಳಿಗೆ ಅದರದೇ ಆದ ಮಹತ್ವ ಶಕ್ತಿ ಇದೆ. ಅದನ್ನು ಗ್ರಹಿಸುವಿಕೆಯಿಂದ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ಸರ್ವೇಜನಾ: ಸುಖಿಣೋಭವಂತು ಎಂಬ ಉದಾತ್ತ ಭಾವನೆಯಿಂದ ನಡೆಸಲ್ಪಡುವ ಧಾರ್ಮಿಕ ಕಾರ್ಯಕ್ರಮಗಳಿಗೆ ಜನತೆ ಸರ್ವ ರೀತಿಯ ಸಹಕಾರವನ್ನು ನೀಡುವ ಮೂಲಕ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕು. ದೇವಾಲಯಗಳನ್ನು ಕಟ್ಟುವುದು ಎಷ್ಟು ಮುಖ್ಯವೋ ಆ ದೇವಾಲಯಗಳಲ್ಲಿ ಪ್ರತಿನಿತ್ಯ ಶಾಸ್ತೊçÃಕ್ರವಾಗಿ ಪೂಜೆ ನಡೆಯಲು ವ್ಯವಸ್ಥೆ ಮಾಡುವುದು ಅಷ್ಟೆà ಮುಖ್ಯ ಎಂದರು. ಮುಖ್ಯ ಅತಿಥಿಗಳಾಗಿ ಬಿ.ಡಿ.ಚಿನಗುಂಡಿ, ಬಿ.ಎಲ್.ಬಬಲಾದಿ, ಟಿ.ವ್ಹಿ.ದೇಶಪಾಂಡೆ, ರಮೇಶ ಕುಲಕರ್ಣಿ ಮಾತನಾಡಿದರು. ಗಣ್ಯರು ಭಾಗವಧ್ವಜವನ್ನು ಅನಾವರಣಗೊಳಿಸಿದರು. ನಂತರ ಪಂ. ನರಸಿಂಹ ಆಚರ‍್ಯ ಗೋಠೆ ಇವರಿಂದ ಪ್ರವಚನ ನಡೆಯಿತು. ನಂತರ ಅಲ್ಪೊÃಪಹಾರ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಗುರುಸಾರ್ವಭೌಮ ಯುವಕ ಮಂಡಳದ ಅಧ್ಯಕ್ಷ ಸಂತೋಷ ದೇಶಪಾಂಡೆ, ರಾಘವೇಂದ್ರ ಸೇವಾ ಸಮಿತಿ ಕಾರ್ಯದರ್ಶಿ ಲಕ್ಷಿö್ಮÃಕಾಂತ ದೇಶಪಾಂಡೆ, ಶೈಲೇಷ ಆಚಾರ್ಯ ಗೋಠೆ, ಭೀಮಾಚಾರ್ಯ ಜೋಶಿ, ಎಂ.ಜಿ.ಕುಲಕರ್ಣಿ, ವಸಂತರಾವ ಕುಲಕರ್ಣಿ, ಗೋವಿಂದರಾವ ಕುಲಕರ್ಣಿ, ವಿಜಯಕುಮಾರ ದೇಶಪಾಂಡೆ, ಪವನ ಸೋಮಾಪುರ, ಆನಂದಚಾರ್ಯ ಜಂಬಗಿ, ಸಂತೋಷ ಕುಲಕರ್ಣಿ, ರಾಘವೇಂದ್ರ ಮುರಗೋಡ, ಕೃಷ್ಣಾ ದೇಶಪಾಂಡೆ, ಕಲ್ಯಾಣರಾವ ದೇಶಪಾಂಡೆ, ರಾಘವೇಂದ್ರ ಸೇವಾ ಸಮಿತಿ, ಗುರುಸಾರ್ವಭೌಮ ಯುವಕ ಮಂಡಳಿ ಹಾಗೂ ಗಾಯತ್ರಿ ಭಜನಾ ಮಂಡಳಿ ಸರ್ವ ಸದಸ್ಯರು ಇದ್ದರು. ರಾಘವೇಂದ್ರ ಗೋಠೆ ಸ್ವಾಗತಿಸಿದರು. ನಮಿತಾ ಕುಲಕರ್ಣಿ ವಂದಿಸಿದರು.

loading...