ಶ್ರೀಮಾತಾ ಕೋ-ಆಪ್ ಕ್ರೆಡಿಟ್ ಸೊಸೈಟಿ 27  ಪೂರ್ಣ,ವರ್ಷದಲ್ಲಿ   ಕೋಟಿಗೂ ಹೆಚ್ಚು ಲಾಭ:   ದೇಸಾಯಿ 

0
11

ಬೆಳಗಾವಿ : ಶ್ರೀಮಾತಾ ಕೋ-ಆಪ್ ಕ್ರೆಡಿಟ್ ಸೊಸೈಟಿ 27 ವರ್ಷಕ್ಕೆ ಕಾಲಿಡುತ್ತಿದ್ದು, ಜಾಗತಿಕ ಆರ್ಥಿಕ ಹಿಂಜರಿತ, ಎಲ್ಲ ಹಂತದ ಆರ್ಥಿಕ ಮುಗ್ಗಟ್ಟು ಇದ್ದರೂ ಸಹ ಸಂಸ್ಥೆ ವರ್ಷದಲ್ಲಿ ಒಂದು ಕೋಟಿ ಐವತ್ತಾರೂ ಲಕ್ಷ ಕ್ಕೂ ಹೆಚ್ಚು ಲಾಭಗಳಿಸಿದೆ ಎಂದು ಸಂಸ್ಥಾಪಕ ಮನೋಹರ ದೇಸಾಯಿ ಹೇಳಿದರು.  ಅವರು ಇಲ್ಲಿನ ನ್ಯೂ ಗುಡ್ಸ್ ಶೆಡ್ ರಸ್ತೆಯಲ್ಲಿ ಸಂಸ್ಥೆಯ ಪ್ರದಾನ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.  ಮಾರ್ಚ್ 31 ವ2019ಕ್ಕೆ ಮುಗಿದ ಆರ್ಥಿಕ ವರ್ಣದಲ್ಕಿ ಉತ್ತಮ ಲಾಭಾಂಶವನ್ನು ಹೊಂದಿದೆ.ಇದರಿಂದ ಸದಸ್ಯರಿಗೆ ಶೇ.10ರಷ್ಟು ಲಾಭಾಂಶದಲ್ಲಿ ಕೊಡಲು ಶಿಪಾರಸ್ಸು ವಾರ್ಷಿಕ ಸಭೆಗೆ ಮಾಡಲಾಗಿದೆ. ಮಂಜೂರಿಯ ನಂತರ ಸದಸ್ಯರಿಗೆ ಸಾಲ ಖಾತೆಗೆ ಇಲ್ಲವೆ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಹೇಳಿದರು. ಸಂಸ್ಥೆ ಒಟ್ಟು 10681 ಸದಸ್ಯರನ್ನು ಒಳಗೊಂಡಿದೆ. ಸೇರುದಾರ ಹಣ  2 ,70, 55 , 525 ರಷ್ಟು ಹೊಂದಿದೆ ಎಂದರು. ಇನ್ನೂ ಕರ್ನಾಟಕ, ಗೋವಾ ಮಹಾರಾಷ್ಟ್ರ ಸೇರಿಂದತೆ ಒಟ್ಟು ನಾಲ್ವತ್ತು ಶಾಖೆಗಳನ್ನು ಒಳಗೊಳಡಿದೆ ಎಂದು ಮಾಹಿತಿ‌ ನೀಡಿದರು. ಈ ಸಂದರ್ಭದಲ್ಲಿ ಡೈರೆಕ್ಟರ್ ಚಂದ್ರಕಾಂತ್ ಪಾಟೀಲ, ವೈಸ್ ಚೇರಮನ್ ಶಿವಶಂಕರ ಬಾಳೆಕುಂದ್ರಿ ಜನರಲ್ ಮ್ಯಾನೇಜರ್ ಮಹೇಶ ವಸ್ತ್ರದ ಸೇರಿದಂತೆ ಸಂಸ್ಥೆ ಯ ಸದ್ಯರು ಹಾಜರಿದ್ದರು.

loading...