ಶ್ರೀ ಉತ್ತಂಗಿ ಚನ್ನಪ್ಪ, ಸರ್ವಜ್ಞನ ವಚನ ಸಂಶೋದಕರು: ಕಿತ್ತೂರ

0
56

ತಾಳಿಕೋಟೆ 30: 12 ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಕಟ್ಟಿ ಬೆಳೆಸಿದವರು ಬಸವಣ್ಣನವರಾಗಿದ್ದರೆ ಅವರೊಂದಿಗೆ ಕಾಲಗರ್ಭದಲ್ಲಿ ಮರೆಯಾಗಿ ಹೊಗಿದ್ದ ಅನುಭವ ಮಂಟಪವನ್ನು 20 ನೇ ಶತಮಾನದಲ್ಲಿ ಸಂಶೋದನೆಯಿಂದ ಅಗೆದು ತೆಗೆದು ತೊರಿಸಿದವರು ಸೇವಾ ಧರ್ಮದ ಶರಣ ಸಾಹಿತಿಯಾದ ಪೂಜ್ಯ ಶ್ರಿ ರೆವರೆಂಡ್ ಉತ್ತಂಗಿ ಚನ್ನಪ್ಪನವರೆಂದು ಮುದ್ದೇಬಿಹಾಳ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಾದ ರುದ್ರೇಶ ಕಿತ್ತೂರ ಅವರು ಹೇಳಿದರು.

ಸೋಮವಾರರಂದು ಸ್ಥಳೀಯ ಬಸವ ಸಮಿತಿಯ ವತಿಯಿಂದ ಸಮಿತಿಯ ಅನುಭವ ಮಂಟಪದಲ್ಲಿ ಏರ್ಪಡಿಸಲಾದ ಪೂಜ್ಯ ಶ್ರೀ ರೆವರೆಂಡ್ ಉತ್ತಂಗಿ ಚನ್ನಪ್ಪನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಸ್ಥಾನ ಅಲಂಕರಿಸಿ ಮಾತನಾಡುತ್ತಿದ್ದ ಅವರು ಉತ್ತಂಗಿ ಚನ್ನಪ್ಪನವರು ಸರ್ವಜ್ಞನ ವಚನಗಳು ಅಸ್ತವ್ಯಸ್ಥವಾಗಿದ್ದ ಸಮಯದಲ್ಲಿ ಇವರು ಬಹು ಶ್ರಮವಹಿಸಿ ಅವುಗಳನ್ನು ಸಂಗ್ರಹಿಸಿ ವಿವಿಧ ಆವೃತ್ತಿಗಳನ್ನು ಪ್ರಕಟಿಸಿದರಲ್ಲದೇ ಜನ ಸಮೂಹಕ್ಕೂ ವಚನಗಳನ್ನು ಕರಗತ ಮಾಡಿಕೊಳ್ಳಲು ಹಾಗೂ ಅವುಗಳಂತೆ ನಡೆದುಕೊಳ್ಳಲು ಅನುವುಮಾಡಿಕೊಟ್ಟಿದ್ದಾರೆಂದರು. ಉತ್ತಂಗಿ ಚನ್ನಪ್ಪನವರು ಕನ್ನಡ ಹಾಗೂ ಇಂಗ್ಲೀಷ ಭಾಷೆಯಲ್ಲಿ ಪಂಡಿತರಾಗಿದ್ದ ಅವರು ಒಟ್ಟು 15 ಕೃತಿಗಳನ್ನು ರಚಿಸಿ ಜನತೆಗೆ ಸನ್ಮಾರ್ಗದತ್ತ ಕೊಂಡೊಯಲು ಅನುವು ಮಾಡಿಕೊಟ್ಟಿದ್ದಾರೆಂದು ಹೇಳಿದ ಕಿತ್ತೂರ ಅವರು ಕ್ರೈಸ್ತ ಧರ್ಮದಲ್ಲಿ ಜನ್ಮ ತಾಳಿದ ಶರಣ ಉತ್ತಂಗಿ ಚನ್ನಪ್ಪನವರು ಉತ್ತರ ಕರ್ನಾಟಕದ ಧಾರವಾಡ ಭಾಗದಲ್ಲಿ ಧರ್ಮೋಪದೇಶಕರಾಗಿ ಬಸವ ಧರ್ಮದ ಉನ್ನತಿಗಾಗಿ ಶ್ರಮಿಸಿದವರಾಗಿದ್ದಾರೆ ಅಂತಹ ಸೇವಾ ಧರ್ಮದಲ್ಲಿ ಮುನ್ನಡೆದು ಬಂದ ಶರಣ ಸಾಹಿತಿಯಾದ ಪೂಜ್ಯ ಶ್ರೀ ರೆವರೆಂಡ್ ಉತ್ತಂಗಿ ಚನ್ನಪ್ಪನವರ ಸ್ಮರಣೋತ್ಸವವನ್ನು ಏರ್ಪಡಿಸಿದ ಬಸವ ಸಮಿತಿಯ ಕಾರ್ಯ ಅತೀವ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮೊದಲು ಶ್ರೀ ಬಸವೇಶ್ವರರ ಹಾಗೂ ಶ್ರೀ ರೆವರೆಂಡ್ ಉತ್ತಂಗಿ ಚನ್ನಪ್ಪನವರ ಭಾವ ಚಿತ್ರಕ್ಕೆ ಗಡಿಸೋಮನಾಳ ಹಿರೇಮಠದ ಶ್ರೀ ಇಂಧುದರ ಮಹಾ ಸ್ವಾಮಿಗಳು ಹಾಗೂ ಬಸರಕೊಡ ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ನಾಗರಾಳ ಅವರು ಪುಷ್ಪಹಾರ ಹಾಕಿ ಗೌರವಿಸಿದರು.

ಇದೇ ಸಮಯದಲ್ಲಿ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಡಿ.ಎಡ್ ವಿದ್ಯಾರ್ಥಿನಿಯಾದ ಕುಮಾರಿ ಭವ್ಯಶ್ರೀ ಈರಗಂಟೆಪ್ಪ ಹಳಿಮನಿ ಇವರಿಗೆ ಬಸವ ಸಮಿತಿಯ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷ ಪ್ರಕಾಶ ಕಶೆಟ್ಟಿ, ಗಣ್ಯರಾದ ಎಸ್.ಪಿ.ಸರಶೆಟ್ಟಿ, ವ್ಹಿ.ಎಂ.ಮಠ, ಜೆ.ಎಸ್.ಜಮ್ಮಲದಿನ್ನಿ, ವಿಶ್ವನಾಥ ಬಿದರಕುಂದಿ, ಎ.ಆರ್.ಚೌದ್ರಿ, ಚಿನಗುಡಿ ನಾಗಪ್ಪ, ಪ್ರಭಾಕರ ಲೋಕರೆ, ಆರ್.ಬಿ.ಧಾನಿ, ಎಂ.ಪಿ.ಹಿಪ್ಪರಗಿ, ಮಹಾಂತೇಶ ಮುರಾಳ, ಸಿ.ಎಂ.ಹಿರೇಮಠ, ಎ.ಬಿ.ಇರಾಜ, ಬಸವರಾಜ ಹಡಪದ, ದೇವೇಂದ್ರ ಕಟ್ಟಿಮನಿ, ಅಮರೇಶ ಕೋರಿ, ಶಶಿಕಾಂತ ಮೂಕೀಹಾಳ, ಮುತ್ತು ಪಾಟೀಲ, ಬಿ.ಜಿ.ಪಾಟೀಲ, ಎಸ್.ಪಿ.ಪಾಟೀಲ, ಪವಾಡೆಪ್ಪ ಯಾಳವಾರ, ರಮೇಶ ಪೂಜಾರಿ, ಶ್ರೀಮತಿ ರೇಣುಕಾ ಕಲ್ಬುರ್ಗಿ, ಚನ್ನಮ್ಮ ಸಜ್ಜನ, ಮಲ್ಲಮ್ಮ ಮದರಕಲ್ಲ, ಶಾಂತಾ ಪೂಜಾರಿ, ಶೋಭಾ ಹಂದಿಗನೂರ, ಬಸ್ಸಮ್ಮಾ ಯಾಳವಾರ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಎಸ್.ಜಿ.ಜಾಲವಾದಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here