ಶ್ರೇಷ್ಠ ಪಶು ಪಾಲಕ ಪ್ರಶಸ್ತಿ ಪಡೆದ ಎಂಬಿಎ ಪದವಿದರ ಯುವಕ

0
19

ಶ್ರೇಷ್ಠ ಪಶು ಪಾಲಕ ಪ್ರಶಸ್ತಿ ಪಡೆದ ಎಂಬಿಎ ಪದವಿದರ ಯುವಕ

ಚಿಕ್ಕೋಡಿ : ನಾನು ಪದವಿದರ ನಾನೇಕೆ ಕುರಿ,ಕೋಲೀ ಸಾಕಾಣಿಕೆ ಮಾಡಲಿ ಎನ್ನುವ ಯುವಕರ ಮಧ್ಯ ಎಂಬಿಎ ಪದವಿ ಪಡೆದು ಎರಡು ವರ್ಷ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡಿದ ಯುವಕ ಇಂದು ಪಶು ಸಾಕಾಣಿಯಲ್ಲಿ ಶ್ರೇಷ್ಠ ಪಶು ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾನೆ ‌.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ಮಾರುತಿಗೆ ಬೀದರನಲ್ಲಿ ನಡೆದ ರಾಜ್ಯ ಮಟ್ಟದ ಪಶು ಮೇಳೆದಲ್ಲಿ ಮಾರುತಿ ಸಾಧನೆ ಗುರುತಿಸಿ ಶ್ರೇಷ್ಠ ಪಶು ಪಾಲಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ನೀಡಿ ಸತ್ಕರಿಸಿದ್ದಾರೆ .
ಮಾರುತಿ ಮರಡಿ ಎಂಬಿಎ ಪದವಿಯ ಮುಗಿಸಿ ನೌಕರಿ ಮಾಡಿ ಕೃಷಿಯಲ್ಲಿ ಏನ್ನನಾದರೂ ಸಾಧಿಸಬೇಕೆಂದು ಕುರಿ ಸಾಕಾಣಿಕೆಗೆ ಮುಂದಾಗಿ ಯಶಸ್ಸು ಕಂಡಿದ್ದಾನೆ . ಮಾರುತಿಯ ಸಾಧನೆಗೆ ಹಲವಾರು ಪ್ರಶಸ್ತಿಗಳು ಹುಡುಕಿ ಬರುತ್ತಿದ್ದು , ಕೃಷಿ ಮೇಳೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುರಿ,ಆಡು ಸಾಕಾಣಿಕೆ ಕುರಿತು ಉಪನ್ಯಾಸವನ್ನು ಕೂಡ ಮಾಡುತ್ತಿದ್ದಾರೆ .

ಒಟ್ಟಿನಲ್ಲಿ ಪದವಿ ಪಡೆದು ನೌಕರಿ ಸಿಗುತ್ತಿಲ್ಲ ಎಂದು ಗೋಣಗುವ ಯುವಕರಿಗೆ ಮಾರುತಿ ಮರಡಿ ಸಾಧನೆಗೆ ಹಲವು ಕ್ಷೇತ್ರಗಳಿವೆ ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ .

loading...