ಷೇರು ಮಾರುಕಟ್ಟೆ ಇನ್ನೂ ದುಸ್ಥಿತಿಗಿಳಿಯಬಹುದು; ಶ್ವೇತಭವನ

0
0

ವಾಷಿಂಗ್ಟನ್- ಕೋವಿದ್ -19 ಸೊಂಕಿನ ಹರಡುವಿಕೆ ಭೀತಿಯಿಂದ ಷೇರು ಮಾರುಕಟ್ಟೆ ಹೀನಾಯ ಕುಸಿತ ಕಾಣುವ ಸಾಧ್ಯತೆಯಿದೆ ಎಂದು ಅಮೆರಿಕದ ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಆರ್ಥಿಕ ಷೇರು ಮಾರುಕಟ್ಟೆ ಬದಲಾಗಬಹುದು ಮತ್ತು ಇನ್ನಷ್ಟು ದುಸ್ತಿತಿಗಿಳಿಯಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ವಾರ ಕೋವಿದ್ ಸೋಂಕಿನ ಭೀತಿಯಿಂದ ಅಮೆರಿಕದ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿತ್ತು. ಡೌ ಜಾನ್ಸ್ ಕೈಗಾರಿಕಾ ಸಂಸ್ಥೆಯ ಷೇರು 1000 ಅಂಕಗಳು ಅಂದರೆ ಶೇ. 3.8ರಷ್ಟು ಕುಸಿತ ಕಂಡ ನಂತರ ಎಲ್ಲಾ ಷೇರುಗಳ ಮೌಲ್ಯ ಇಳಿಕೆಯಾಗಿತ್ತು.

loading...