ಸಂಕಲ್ಪ ಉತ್ಸವ ನವೆಂಬರ 1 ರಿಂದ ಪ್ರಾರಂಭ

0
45

ಯಲ್ಲಾಪುರ : ಪ್ರಸಕ್ತ ವರ್ಷದ ಸಂಕಲ್ಪ ಉತ್ಸವವನ್ನು ವಿಶಿಷ್ಟ ರೀತಿಯಲ್ಲಿ ಸಂಕಲ್ಪದ ನಡೆ ಹಳ್ಳಿಯ ಕಡೆ ಎಂಬ ಪರಿಕಲ್ಪನೆ ಹಾಗೂ 30 ನೇ ವರ್ಷದ ಸಾಂಸ್ಕøತಿಕ ಪಯಣದ ದ್ಯೋತಕವಾಗಿ ನ,1,2 ರಂದು ಸೂರ್ಯೊದಯದಿಂದ ಸೂರ್ಯೋದಯದವರೆಗೆ ಕಾರ್ಯಕ್ರಮ ನಡೆಯಲಿದ್ದು ಪಟ್ಟಣದ ಗಾಂಧಿ ಕುಟೀರದಲ್ಲಿ ಚಾಲನೆಗೊಳ್ಳಲಿದೆ. ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ಸಂಕಲ್ಪದಲ್ಲಿ ಸುದ್ದಿಗೋಷ್ಟಿಯಲ್ಲಿ ಉತ್ಸವದ ಕುರಿತಾಗಿ ವಿವರಿಸುತ್ತಿದ್ದರು. ಈ ವರ್ಷ 30ನೇ ವರ್ಷದ ನೆನಪಿಗೆ ಚಂದಗುಳಿಯ ಘಂಟೆ ಗಣಪತಿ ಮಂದಿರದಲ್ಲಿ ಗಣಹವನದ ಕಾರ್ಯಕ್ರಮದಿಂದ ರಾಜ್ಯೋತ್ಸವ ಕಾರ್ಯಕ್ರಮವನ್ನು ಸೇರಿಸಿಕೊಂಡು ಆಯೋಜಿಸಲಾಗಿದೆ.
ಮಾತ್ರ ಮಂಡಳಿ ಸಹಕಾರದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿ ರಂಗವಲ್ಲಿ, ಬಟ್ಟಲು ಚಿತ್ರ, ಮೆಹಂದಿ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನ.1 ರಂದು ರಾತ್ರಿಯಿಂದ ಬೆಳಗಿನವರೆಗೆ ನಾಡಿನ ಪ್ರಸಿದ್ದ ಯಕ್ಷಗಾನ ಕಲಾವಿದರನ್ನು ಸೇರಿಸಿ 6 ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಗುತ್ತಿದೆ.
ನ.2 ರಿಂದ 7 ರವರೆಗೆ ತಟಗಾರ ಜೋಡಳ್ಳ, ವಜ್ರಳ್ಳಿ, ಬೀಸಗೋಡು, ಕಳಚೆ, ಮಲವಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲೂ ಕೂಡಾ ಸಂಗೀತ, ಹರಿಕಥೆ, ನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪೂಜ್ಯ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನ. 1 ರಂದು ಸಂಜೆ 6 ಘಂಟೆಗೆ ಉತ್ಸವದ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಅಂತೆಯೇ ಶಾಸಕ ಎಸ್.ಎಂ.ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಪ್ರಮುಖರಾದ ಬಸವರಾಜ್ ಹೊರಟ್ಟಿ, ಎಸ್.ಎಲ್, ಘೊಟ್ನೇಕರ್, ಎಸ್.ವಿ.ಸಂಕನೂರ, ಲೋಕ ಶಿಕ್ಷಣ ಟ್ರಸ್ಟ ಅಧ್ಯಕ್ಷ ಉಮೇಶ ಭಟ್ಟ, ಉದಯವಾಣಿ ಸಂಪಾದಕ ರವಿ ಹೆಗಡೆ ನಾಡಿನ ಖ್ಯಾತರಾದ ರಾಮಚಂದ್ರ ಹೆಗಡೆ ಚಿಟ್ಟಾಣಿ, ಮಂಜುನಾಥ ಭಗ್ವತ್ ಹೊಸತೋಟ, ಜಯಂತ ಕಾಯ್ಕಿಣಿ, ವಿಜಯನಳಿನಿ ರಮೇಶ, ಗಂಗಾಧರ ಹಿರೆಗುತ್ತಿ, ಶಂಕರ ದೇವನೂರು, ರಂಜಾನ್ ದರ್ಗಾ, ಡಾ||ಎ.ವಿ.ಪ್ರಸನ್ನ, ಧರೇಣೆಂದ್ರ ಕುರಕುರಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗಣ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಈ ಸಂದರ್ಭದಲ್ಲಿ ವಿವಿಧ ಲೇಖಕರ 6 ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು. ಎಂದು ಉತ್ಸವದ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು. ಸಂಕಲ್ಪ ತಂಡದ ಸದಸ್ಯರಾದ ರಾಮಣ್ಣ ಗೋಳಿಗದ್ದೆ, ಸಿ.ಜಿ.ಹೆಗಡೆ, ಡಿ.ಶಂಕರ ಭಟ್ಟ, ಡಿ,ಎನ್.ಗಾಂವ್ಕರ್, ಗ.ನಾ.ಕೋಮಾರ, ಎನ್.ಎನ್.ಹೆಬ್ಬಾರ, ಗೋಪಣ್ಣ ತಾರೀಮಕ್ಕಿ, ವಿನಾಯಕ ಭಟ್ಟ, ಪ್ರಸಾದ ಹೆಗಡೆ, ಡಾ||ರವಿ ಭಟ್ಟ, ಶಂಕರ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here