ಸಂಕೇಶ್ವರದಲ್ಲಿ ಗಾಳಿ ಪಟ ಉತ್ಸವ ಬಾನಿನೆತ್ತರಕ್ಕೆ ಹಾರಿದವು ಬಣ್ಣ ಬಣ್ಣದ ಪತಂಗ

0
86

ಸಂಕೇಶ್ವರದಲ್ಲಿ ಗಾಳಿ ಪಟ ಉತ್ಸವ
ಬಾನಿನೆತ್ತರಕ್ಕೆ ಹಾರಿದವು ಬಣ್ಣ ಬಣ್ಣದ ಪತಂಗ
ಕನ್ನಡಮ್ಮ ಸುದ್ದಿ -ಸಂಕೇಶ್ವರ : ಸ್ಥಳಿಯ ಕಣಗಲಿ ಲೇಔಟದಲ್ಲಿ ಉದ್ಯಮ ಪವನ ಕಣಗಲಿ ಆಯೋಜಿಸಿದ್ದ ಗಾಳಿ ಪಟ ಉತ್ಸವ ಅತಿ ಸಂಭ್ರಮದಿಂದ ಜರುಗಿತು .ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ ಮಕ್ಕಳು ಅತಿ ಸಡಗರದಿಂದ ಪಾಲ್ಗೊಂಡಿದ್ದರು .

ಪಟ್ಟಣದಲ್ಲಿ ಇದೆ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಗಾಳಿ ಪಟ ಉತ್ಸವಕ್ಕೆ ಭರ್ಜರಿಯಾಗಿ ಪ್ರತಿಕ್ರಿಯೆ ವ್ಯಕ್ತವಾಯಿತು .ಗಾಳಿ ಪಟ ಉತ್ಸವದಲ್ಲಿ ಗಾಳಿ ಪಟ ತಯಾರಿಸುವ ಮತ್ತು ಹಾರಿಸುವ ಸ್ಪರ್ದೆಯಲ್ಲಿ ಸುಮಾರು ಎರಡು ನೂರು ಮಕ್ಕಳು ಭಾಗವಹಿಸಿದ್ದರು .

ಈ ಸಂಧರ್ಭದಲ್ಲಿ ಮಾತನಾಡಿದ ಲಿಟಲ್ ಕಿಂಗ್ ಡಂ ಶಾಲೆಯ ಮುಖ್ಯೋಪಾದ್ಯಯಕಿ ಜ್ಯೋತಿ ಶೆಟ್ಟಿ ಮಕ್ಕಳಲ್ಲಿ ಕ್ರಿಯಾತ್ಮಕ ಸೃಜನಾತ್ಮಕ ಚಟುವಟಿಕೆ ಬೆಳೆಸುವ ಉದ್ದೇಶದಿಂದ ಈ ಗಾಳಿ ಪಟ ಉತ್ಸವ ಆಯೋಜನೆ ಮಾಡಲಾಗಿದ್ದು ,ಮೊಬೈಲ್ ಹೊರತು ಪಡಿಸಿ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಯಬೇಕು ,
ಪ್ರಶಸ್ತಿಗಾಗಿ ಸ್ಪರ್ದೆ ಮಾಡದೆ ಭಾಗವಹಿಸುವಿಕೆ ಬಹಳ ಮುಖ್ಯ, ಮಕ್ಕಳಿಗಾಗಿ ಈ ಗಾಳಿ ಪಟ ಉತ್ಸವ ಏರ್ಪಡಿಸಿರು ಪವನ ಕಣಗಲಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು .
ಬಿಆರ್ ಸಿ ಶಿಕ್ಷಕ ಎಸ್ .ಡಿ ನಾಯಕ ಮಾತನಾಡಿ ಸೂರ್ಯ ತನ್ನ ಪತವನ್ನು ಬದಲಿಸುವ ಸಮಯವೇ ಸಂಕ್ರಾಂತಿ ಹಬ್ಬ , ವಸಂತ ಕಾಲ ಸುಗ್ಗಿಯ ಕಾಲ, ವಿಶೇಷವಾಗಿ ಮಕ್ಕಳಿಗೆ ಬಿಸಲಿನಲ್ಲಿ ಆಟವಾಡಬೇಕು ಎಂದು ಉದ್ದೇಶದಿಂದ ಈ ಗಾಳಿ ಪಟ ಉತ್ಸವ ಆಯೋಜನೆ ಮಾಡಿದ್ದು ನಿಜಕ್ಕೂ ಬಹಳಷ್ಟು ಮಕ್ಕಳಿಗೆ ಸಹಕಾರಿ ಎಂದು ನಾಯಿಕ ಹೇಳಿದರು .

ಆಯೋಜಕ ಪವನ ಕಣಗಲಿ ಸೇರಿದಂತೆ ಇತರರು ಇದ್ದರು .

loading...