ಸಂಕೇಶ್ವರದಲ್ಲಿ ರಾಣಿ ಚೆನ್ನಮ್ಮ ವೃತ್ತ ಉದ್ಘಾಟನೆ

0
87

ಸಂಕೇಶ್ವರದಲ್ಲಿ ರಾಣಿ ಚೆನ್ನಮ್ಮ ವೃತ್ತ ಉದ್ಘಾಟನೆ

ಕನ್ನಡಮ್ಮ ಸುದ್ದಿ

ಸಂಕೇಶ್ವರ ೨೫ :ಕ್ರಾಂತಿಯ ಕಿಡಿ,ಸ್ವಾತಂತ್ರ್ಯ ಹೋರಾಟಗಾತಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರಿನ ವೃತ್ತವನ್ನ ಇಂದು ಪಟ್ಟಣದ ಪೋಸ್ಟ ಸರ್ಕಲ್ ಗೆ ಅಧಿಕೃತವಾಗಿ ನಾಮಕರಣ ಮಾಡಿ ವೃತ್ತ ಉದ್ಘಾಟನೆಯಾಯಿತು.

ಶುಕ್ರವಾರ ದಿನಾಂಕ 26 ರಂದು ಗಣರಾಜ್ಯೋತ್ಸವದ ದಿನದಂದು ಮುಂಜಾನೆ 11 ಗಂಟೆಗೆ ರಾಣಿ ಚೆನ್ನಮ್ಮ ವೃತ್ತವನ್ನ ಹಿರಾ ಶುಗರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಅಪ್ಪಾಸಾಹೇಬ ಶಿರಕೊಳಿ ಅವರು ಉದ್ಘಾಟಿಸಿದರು,ಚನ್ನಮ್ಮಾ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷೆನಿ ಶ್ರೀಮತಿ ಧನಶ್ರಿ ಕೋಳೆಕರ ನೇರವೇರಿಸಿದರು .

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ,ಚನ್ನಮ್ಮಾ ಬಲಗೈ ಬಂಟ ಕ್ರಾಂತಿ ವೀರ ಸಂಗೋಳಿ ರಾಯಣ್ಣ,ಮಹಾತ್ಮಾ ಗಾಂಧಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.

ಈ ಕಾರ್ಯಕ್ರಮಕ್ಕೆ ಹುಕ್ಕೇರಿ ತಹಶೀಲ್ದಾರ ಎನ್.ಬಿ.ಪಾಟೀಲ,ಮುಖಂಡರಾದ ಶ್ರೀಕಾಂತ ಹತನೂರಿ,ಜಯಪ್ರಕಾಶ ನಲವಡೆ,ಗಜಾನನ ಕ್ವಳಿ,ನ್ಯಾಯವಾದಿ ವಿಕ್ರಮ ಕರನಿಂಗ ,ದಿಲೀಪ ಹೋಸಮನಿ,ಮಹೇಶ ಹಟ್ಟಿಹೊಳಿ,ಪ್ರಮೋದ ಹೊಸಮನಿ,ಪಿ.ಎಸ್.ಐ.ಹೆಚ್.ಡಿ.ಮುಲ್ಲಾ, ಪುರಸಭೆ ಸರ್ವ ಸದಸ್ಯರು ,ನ್ಯಾಯವಾದಿಗಳ ಸಂಘ ಸೇರಿದಂತೆ ವಿವಿಧ ಸಹಕಾರಿ ಸಂಘ ಸಂಸ್ಥೆಯವರು ,ವ್ಯಾಪಾರಿ ಸಂಘ,ಹೋಟೆಲ್ ಸಂಘದವರು,ಪತ್ರಕರ್ತರ ಸಂಘ,ಮುಸ್ಲಿಂ ಸಂಘಟನೆ, ದಲಿತ ಸಂಘಟನೆಗಳು, ಲಿಂಗಾಯತ ಯುವ ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತು, ಹಾಲುಮತ ಸಮಾಜ,ರಿಕ್ಷಾ ಸಂಘದವರು ನಾಗರಿಕರು ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾನ ಸಮೀತಿಯವರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು .

loading...