ಸಂಗೀತಕ್ಕೆ ಮನುಷ್ಯನ ಮನೋರೋಗ ನಿವಾರಿಸುವ ಶಕ್ತಿ ಇದೆ: ಶ್ರೀಗಳು  

0
39

ಗುಳೇದಗುಡ್ಡ: ಸಂಗೀತಕ್ಕೆ ಮನುಷ್ಯನ ಮನೋರೋಗ ನಿವಾರಿಸುವ ಅದ್ಬುತ ಶಕ್ತಿಯಿದೆ. ಸಂಗೀತ ಆಲಿಸುವುದರಿಂದ ಮನಸ್ಸನ್ನು ಶಾಂತವಾಗಿ, ದುಗುಡದುಮ್ಮಾನ ದೂರವಾಗುತ್ತವೆ. ಪ್ರತಿಯೊಬ್ಬರೂ ಬಿಡುವು ಮಾಡಿಕೊಂಡು ದಿನಕ್ಕೆ ಒಮ್ಮೆಯಾದರೂ ಸಂಗೀತ ಕೇಳುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಮುರುಘಾಮಠದ ಶ್ರೀಕಾಶೀನಾಥ ಶ್ರೀಗಳು ಹೇಳಿದರು.  ಅವರು ಸ್ಥಳೀಯ ನಾದಯೋಗಿ ದತ್ತಾತ್ರೇಯ ರಾಮರಾವ್‌ ಪರ್ವತೀಕರ ಸಂಗೀತ ಹಾಗೂ ಸಾಂಸ್ಕೃತಿ ಸ್ಮಾರಕ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ನಾದಯೋಗಿ ಡಿ.ಆರ್‌.ಪರ್ವತೀಕರ ಅವರ 27ನೇ ಪುಣ್ಯಸ್ಮರಣೆ ಮತ್ತು ಸಂಗೀತ ಸ್ವರಾಂಜಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಜಿ.ಜಿ.ಹೂಗಾರ ಸಂಗೀತ ಸ್ವರಾಂಜಲಿ ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡ ಆಕಾಶವಾಣಿ ಕಲಾವಿದ ಷಫೀರಖಾನ್‌ ಸಿತಾರ, ರಾಷ್ಟ್ರೀಯ ಕಲಾವಿದ ಶಾಂತಲಿಂಗ ದೇಸಾಯಿ, ಡಾ.ಸುರೇಶ ಪರ್ವತೀಕರ, ಪ್ರೋ.ಮಹಾಪುರುಷ, ಡಾ.ಮೋಹನ ಕೊಪ್ಪ, ಎಚ್‌.ಎಸ್‌.ಹುಳಪಲ್ಲೆದ, ಶ್ರೀಧರ ಆಚಾರ್ಯ, ಜಿ.ಎಚ್‌.ಬಡಿಗೇರ, ಡಾ.ವಿ.ಎನ್‌.ಡಾಣಾಕಶಿರೂರ, ಕಿರಣ ಏರಪಲ್ಲ, ಎಸ್‌.ಎಸ್‌.ಮಡಿವಾಳರ, ಡಾ. ಕೃಷ್ಣವರ್ಧನ, ಶ್ಯಾಮರಾವ್‌ ಪದಕಿ, ರಮೇಶ ಷಿಲ್ಲಾಪುರ, ಸುರೇಶ ದೇಸಾಯಿ, ಶ್ರೀಧರ ನರೆಗಲ್ಲ, ಬಾಗಲಕೋಟದ ರಾಘವೇಂದ್ರ ಗುರುನಾಯಕ, ಪ್ರಸಾದ ಉಮರ್ಜಿ, ಕಲಾವಿದರಾದ ತಿಪ್ಪಣ್ಣ ಮಂಗಳೂರು, ಸೋಮಶೇಖರ ಗಡೆದಗೌಡರ, ಜಿ.ಎಸ್‌.ಕುಲಕರ್ಣಿ, ಹನಮಂತರಾವ ಕಾರಕೂನ, ಶಂಕರ ಲಮಾಣಿ, ಬಸವರಾಜ ಸಿಂದಗಿಮಠ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ಪಠಿಸಿದ ಸಮರ್ಥ ಅಂಬೇಕರ, ಶುಭಂ ಕೃಷ್ಣವರ್ಧನ್‌ ಹಾಗೂ ಷಫೀರಖಾನ್‌ ಸಿತಾರ, ರಾಷ್ಟ್ರೀಯ ಕಲಾವಿದ ಶಾಂತಲಿಂಗ ದೇಸಾಯಿ ಕಲಾವಿದರನ್ನು ಸನ್ಮಾನಿಸಲಾಯಿತು. ಧಾರವಾಡ ಆಕಾಶವಾಣಿಯ ರಮೇಶ ಪರ್ವತೀಕರ ಸ್ವಾಗತಿಸಿದರು. ಸತೀಶ ಪರ್ವತೀಕರ ಪರಿಚಯಿಸಿದರು. ಸುರೇಶ ಪರ್ವತೀಕರ ವಂದಿಸಿದರು.

loading...