ಸಂಗೀತ ಆಲಿಕೆಯಿಂದ ಒತ್ತಡದ ಜೀವನ ದೂರ

0
8

ಕನ್ನಡಮ್ಮ ಸುದ್ದಿ-ಧಾರವಾಡ: ನಗರದ ಅಕ್ಕ ಪಕ್ಕದ ಮನೆಯವರೆಲ್ಲ ಪರಿಚಯವಿಲ್ಲದೆ ಬದುಕುತ್ತಿರುವ ಅದೆಷ್ಟೊÃ ಬಡಾವಣೆಯ ನಾಗರಿಕರು ನಮ್ಮ ನಾಗರಿಕತೆಗೆ ತಿಲಾಂಜಲಿ ಇಡುತ್ತಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಆನಂದ ಪಾಟೀಲ ಹೇಳಿದರು. ನಿಸರ್ಗ ನಗರದ ಸೌರಭ ನಿವಾಸದಲ್ಲಿ ಸೃಷ್ಟಿ ರಸಿಕರಂಗ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ರಸಸಂಜೆ ಕಾರ್ಯಕ್ರಮದ ಅಧ್ಯಕತೆವಹಿಸಿ ಮಾತನಾಡಿದರು. ಇಂದು ಮನುಷ್ಯನ ಜೀವನ ಒತ್ತಡದ ಬದುಕಿನಲ್ಲಿ ಅನೇಕ ರೋಗ ರುಜಿನಗಳಿಗೆ ತುತ್ತಾಗಿದೆ. ಅದಕ್ಕೆ ಸಂಗೀತವೆ ದಿವ್ಯೌಷಧ. ಸೌರಭದ ರಸಸಂಜೆ ನಿಜಕ್ಕೂ ಶ್ಲಾಘನೀಯ ಎಂದರು.
ಪಂ. ಸೋಮನಾಥ ಮರಡೂರ ಸನ್ಮಾನ ಸ್ವಿÃಕರಿಸಿ ಮಾತನಾಡಿ, ಪಾಶ್ಚಾತ್ಯ ಸಂಗೀತದಲ್ಲಿ ಬಹಳಷ್ಟು ಜನ ಮಿಂದೇಳುತ್ತಿರುವುದು ವಿಷಾದನೀಯ. ನಮ್ಮತನ ಉಳಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು. ಸೃಷ್ಟಿ ರಸಿಕರಂಗ ಪ್ರತಿಷ್ಠಾನದ ಅಧ್ಯಕ್ಷ ಸುರೇಶ ಗೋವಿಂದರೆಡ್ಡಿ ಸ್ವಾಗತಿಸಿದರು. ಶಿವಲಿಂಗಪ್ಪ ಸಜ್ಜನಶೆಟ್ಟರ ನಿರೂಪಿಸಿದರು. ಲೀಲಾ ಪಾಟೀಲ ವಂದಿಸಿದರು. ನಿಸರ್ಗ ನಗರದ ಮಕ್ಕಳಿಂದ “ತಮಾಷಾ” ಹಾಸ್ಯ ನಾಟಕ ನೆರೆದ ಕಲಾರಸಿಕರನ್ನು ರಂಜಿಸಿತು. ಅನಂತರ ಜರುಗಿದ ಪಂ. ಸೋಮನಾಥ ಮರಡೂರ ಅವರ ಗಾಯನ ಜನಮನ್ನಣೆಗೆ ಪಾತ್ರವಾಯಿತು.
ಗುರುಬಸವ ಮಹಾಮನೆ ಇವರ ವಯೋಲಿನ್ ವಾದನದಲ್ಲಿ ರಾಗ್- ದುರ್ಗಾ ಕೇಳಿಬಂದಿತು. ಇವರಿಗೆ ಮಲ್ಲೆÃಶ ದೇಸಾಯಿ ತಬಲಾ ಸಾಥ್ ಹಾಗೂ ಬಸವರಾಜ ಹೂಗಾರ ಹಾರ್ಮೋನಿಯಮ್ ಸಾಥ ನೀಡಿದರು.

loading...