ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ: ಶೀಲವಂತ

0
18

ಗುಳೇದಗುಡ್ಡ: ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ಆನಂದ, ನೆಮ್ಮದೆ ದೊರೆಯುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಒತ್ತಡಿದಿಂದಾಗಿ ನಾವು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೆÃವೆ. ನಿತ್ಯ ಕ್ಷಣಹೊತ್ತು ಸಂಗೀತ ಆಲಿಸಿದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕಾಯಿಲೆಗಳು ದೂರವಾಗುತ್ತವೆ ಎಂದು ಮಾಜಿ ಶಾಸಕರ ರಾಜಶೇಖರ ಶೀಲವಂತ ಹೇಳಿದರು.
ಅವರು ಇಲ್ಲಿನ ಶ್ರಿÃಗುರು ಪಟ್ಟರಾಜ ಸಂಗೀತ ಪಾಠಶಾಲೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ, ಸಂಗೀತ ಸುಧೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ನಿರಂತರ ಕಠಿಣ ಅಭ್ಯಾಸ ಮಾಡಿದವರಿಗೆ ಮಾತ್ರ ಸಂಗೀತ ಒಲಿಯುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿ, ಶ್ರಿÃ ಪಂ. ಪುಟ್ಟರಾಜ ಗವಾಯಿಗಳು ಅಂಧರಿಗೆ ಸಂಗೀತ ಕಲಿಸಿ ಅವರ ಬಾಳಿಗೆ ಬೆಳಕು ನೀಡುವ ಮೂಲಕ ಅನೇಕ ಕಲಾವಿದರನ್ನು ನಾಡಿಗೆ ನೀಡಿದರು. ಗುಳೇದಗುಡ್ಡ ಭಾಗದಲ್ಲಿ ಸಾಕಷ್ಟು ಸಂಗೀತ ಕಲಾವಿದರು ಎಲೆ ಮರೆಯ ಕಾಯಿಯಂತೆ ಇದ್ದು, ಅವರನ್ನು ಪ್ರೊÃತ್ಸಾಹಿಸುವ ಕೆಲಸವಾಗಬೇಕು. ಶ್ರಿÃಗುರು ಪುಟ್ಟರಾಜ ಸಂಗೀತ ಪಾಠಶಾಲೆ ತೆರೆಯುವ ಮೂಲಕ ಸಿಂದಗಿಮಠ ಅವರು ಇಲ್ಲಿನ ಪ್ರತಿಭೆಗಳನ್ನು ಪ್ರೊÃತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಮರಡಿಮಠದ ಶ್ರಿÃ ಅಭಿನವ ಕಾಡಸಿದ್ದೆÃಶ್ವರ ಸ್ವಾಮಿಗಳು ಮಾತನಾಡಿ, ಈ ಭಾಗದ ಸಂಗೀತ ವಿದ್ಯಾರ್ಥಿಗಳಿಗೆ ಪ್ರೊÃತ್ಸಾಹ ನೀಡುವ ನಿಟ್ಟಿನಲ್ಲಿ ಸಿಂದಗಿಮಠ ಅವರ ಸಂಗೀತ ಪಾಠಶಾಲೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಸಂಗೀತ ಕ್ಷೆÃತ್ರದಲ್ಲಿ ಸಾಧನೆ ಮಾಡುವ ಮೂಲಕ ನಾಡಿಗೆ ಕೀರ್ತಿ ತರಬೇಕು ಎಂದರು.

ಇದೇ ಸಂದರ್ಭದಲ್ಲಿ ರಂಗಭೂಮಿ, ಸಂಗೀತ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೆÃತ್ರದಲ್ಲಿ ಸಾಧನೆ ಮಾಡಿದ ಡಾ. ಶಾಂತಾ ಕರಡಿಗುಡ್ಡ, ಮಂಜುನಾಥ ಹೊಸಕೇರಿ, ವಸಂತ ಕರಡಿಗುಡ್ಡ, ಬಂದೇನವಾಜ ನಾಯಕ್, ಮಹಾಂತೇಶ ನಾಯಕ, ಗೀತಾ ಚಿಮ್ಮಲ, ಅಂiÀÄ್ಯಪ್ಪಯ್ಯ ಹಿರೇಮಠ, ಪ್ರವೀಣ ಪತ್ರಿ, ಲಕ್ಷö್ನಣ ಗದ್ದನಕೇರಿ ಗಣ್ಯರನ್ನು ಸನ್ಮಾನಿಸಲಾಯಿತು.
ರಾಠಿ ಹಾಗೂ ಕಾವಡೆ ಆಂಗ್ಲಮಾಧ್ಯಮ ಶಾಲೆಯ ಚೇರಮನ್ ಅಶೋಕ ಹೆಗಡೆ ಮಾತನಾಡಿದರು. ಬಳಿಕ ಶಿವಮೊಗ್ಗದ ಹಿಂದೂಸ್ತಾನಿ ಗಾಯಕರಾದ ನೌಷದ್ ಹರ್ಲಾಪೂರ ಹಾಗೂ ನಿಷಾದ್ ಹರ್ಲಾಪೂರ ಅವರಿಂದ ಹಿಂದೂಸ್ತಾನಿ ಜುಗಲ್‌ಬಂದಿ ಸಂಗೀತ ನಡೆಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ವಂದನಾ ಭಟ್ಟಡ, ಪಾಠಶಾಲೆಯ ಗೌರವಾಧ್ಯಕ್ಷ ಚಿದಾನಂದಸಾ ಕಾಟವಾ, ಪಾಠಶಾಲೆಯ ಪ್ರಾಂಶುಪಾಲ ಬಸವರಾಜ ಸಿಂದಗಿಮಠ, ಡಾ. ಪ್ರಕಾಶ ನರಗುಂದ, ನೀಲಕಂಠಯ್ಯ ಸಿಂದಗಿಮಠ, ಸಂಗಯ್ಯ ಗಣಾಚಾರಿ, ಶಿವಯ್ಯ ಮಾಲಗಿತ್ತಿಮಠ, ಡಾ. ವಿ.ಎಸ್. ಬೆಕಿನಾಳ, ಅಶೋಕ ಬಾದವಾಡಗಿ, ಈಶ್ವರ ಕಂಠಿ, ಮೌನೇಶ ಬಡಿಗೇರ, ಬಸವರಾಜ ಗೊಬ್ಬಿ, ಶಂಕರ ಮುಂದಿನಮನಿ, ಭೀಮಸಿಂಗ್ ರಾಠೋಡ, ಹುಚ್ಚೆÃಶ ಯಂಡಿಗೇರಿ, ದ್ರಾಕ್ಷಾಯಣಿ ಸಿಂದಗಿಮಠ, ಶಕುಂತಲಾ ಸಿಂದಗಿಮಠ, ಗಿರಿಜಾ ಕಿರಸೂರಮಠ, ದೀಪಾ ಕಿರಸೂರಮಠ, ದೀಪಾ ಕಕ್ಕಯ್ಯನಮಠ, ಸವಿತಾ ಸಾಲಿಮಠ, ಸರ್ವಮಂಗಳ ಪುರಾಣಿಕಮಠ, ವಿಜಯಲಕ್ಷಿö್ಮÃ ಸಾವಳಗಿಮಠ, ಶಿವಲೀಲಾ ಮರಳಯ್ಯನಮಠ ಮತ್ತಿತರರು ಇದ್ದರು.

loading...