ಸಂಘಟನೆಗಳಿಂದ ಸಮುದಾಯಗಳ ಅಭಿವೃದ್ಧಿ ಸಾಧ್ಯ: ಶಾಸಕ ಉದಾಸಿ

0
29

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಶ್ರೇಣಿಕೃತ ಸಮಾಜದಲ್ಲಿ ಸಮುದಾಯಗಳು ಅಭಿವೃದ್ದಿ ಹೊಂದಬೇಕಾದರೆ ಸಂಘಟನೆ ಅವಶ್ಯ. ಈ ಹಿನ್ನೆಲೆಯಲ್ಲಿ ಬಣಜಿಗ ಸಮುದಾಯ ರಾಜ್ಯದ ತುಂಬೆಲ್ಲ ಅಭಿವೃದ್ಧಿ ಹೊಂದಲು ಶ್ರಮಿಸಬೇಕಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು
ಸ್ಥಳೀಯ ಮೈಸೂರ ಮಠದಲ್ಲಿ ಆಯೋಜಿಸಲಾಗಿದ್ದ ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಸಮುದಾಯ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಸಂಘಟನೆ ಅನಿವಾರ್ಯ. ಸಮುದಾಯದ ಹಿತ ದೃಷ್ಟಿಯಿಂದ ಒಳ್ಳೆಯದು. ಸಂಘವನ್ನು ಉತ್ತಮ ರೀತಿಯಲ್ಲಿ ಸಂಘಟಿಸುವ ಮೂಲಕ ಸಮುದಾಯದ ಅಭಿವೃದ್ದಿಗೆ ಸ್ಪಂದಿಸಬೇಕು ಎಂದರು.
ಸ್ಥಳೀಯ ಸಮಾಜದ ಗೌರವಾಧ್ಯಕ್ಷ ಮಂಜುನಾಥ ಅಂಗಡಿ, ಎಸ್.ಎಸ್.ವಾಲಿ, ಸಂತೋಷ ಸಂಕನೂರ, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಮುತ್ತಣ್ಣ ಚೆಟ್ಟರ, ಮಹಾಂತೇಶ ಮಳಗಿ, ವೀರಭದ್ರಪ್ಪ ಪಟ್ಟಣಶೆಟ್ಟಿ, ಮಹಾಂತೇಶ ಅರಳಿ, ಜಗದೀಶ ಸಕ್ರಿ, ಮಹಾಂತೇಶ ಪಟ್ಟಣಶೆಟ್ಟಿ, ಬಸವರಾಜ ರಂಜಣಗಿ, ಮುತ್ತಪ್ಪ ಯಲಬುಣಚಿ, ಚನ್ನವೀರಪ್ಪ ಚೋಳಿನ, ಶರಣಪ್ಪ ಪಟ್ಟೇದ ಕಳಕಪ್ಪ ಪಟ್ಟಣಶೆಟ್ಟಿ, ಬಿ.ಎಂ.ಸಜ್ಜನ ಇತರರು ಇದ್ದರು.

loading...