ಸಂಚಾರ ನಿಯಮಗಳನ್ನು ಪಾಲಿಸಲು ಅಧಿಕಾರಿಗಳ ಸೂಚನೆ

0
6

ಸಂಚಾರ ನಿಯಮಗಳನ್ನು ಪಾಲಿಸಲು ಅಧಿಕಾರಿಗಳ ಸೂಚನೆ
ಕನ್ನಡಮ್ಮ ಸುದ್ದಿ-ಸವದತ್ತಿ: ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ವಾಹನ ಸವಾರರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದೇ ಇರುವದರಿಂದ ಅಪಘಾತಗಳು ಅವಘಡಗಳು ಸಂಭವಿಸಿ ಜೀವ ಹಾನಿಯಾಗುತ್ತಿವೆ.
ನ್ಯಾಯಾಲಯದ ಆದೇಶದ ಪ್ರಕಾರ ಗೂಡ್ಸ್ ವಾಹನಗಳಲ್ಲಿ ಮತ್ತು ಸರಕು ವಾಹನಗಳಲ್ಲಿ ಜನರನ್ನು ಮತ್ತು ಕೂಲಿ ಕಾರ್ಮಿಕರನ್ನು ಕೂಡಿಸಿಕೊಂಡು ಹೋಗುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂದು ಸಿ.ಪಿ.ಆಯ್. ಎಮ್.ಪಿ. ಸರವಗೋಳ ವಾಹನ ಮಾಲೀಕರಿಗೆ ಮತ್ತು ಚಾಲಕರಿಗೆ ಎಚ್ಚರಿಕೆ ನೀಡಿದರು.
ಅವರು ಬುಧವಾರ ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಸಭಾ ಭವನದಲ್ಲಿ ಪೊಲೀಸ್ ಇಲಾಖೆ ಕಾರ್ಮಿಕ ಇಲಾಖೆ ಸಾರಿಗೆ ಇಲಾಖೆ ಶಿಕ್ಷಣ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಬಾಹಿರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಎ.ಪಿ.ಎಮ್.ಸಿ. ಅಧಿಕಾರಿಗಳಾದ ಕ್ಷತ್ರೆÃಶ ದಾಸರ ಮಾತನಾಡಿ, ಖಾರಕಾನೆಯವರು ಸುಪ್ರಿಂ ಕೋರ್ಟ ಆದೇಶದ ಪ್ರಕಾರ ಸರಕು ಸಾಗಣೆ ಮಾಡುವ ವಾಹನಗಳಲ್ಲಿ ಬೇರೆ ಯಾರನ್ನು ಹತ್ತಿಸಿಕೊಂಡು ಹೋಗಬಾರದು ಇದು ನ್ಯಾಯಾಲಯದ ಆದೇಶವಾಗಿದೆ. ಒಂದು ವೇಳೆ ಹಾಗೆ ಹೋದರೆ ಆ ವಾಹನ ಅಪಘಾತವಾದರೆ ಅದರಲ್ಲಿ ಇರುವರೆಗೆ ಪರಿಹಾರವಂತ ಸಿಗುವುದಿಲ್ಲ. ಸಾರ್ವಜನಿಕರು ಬಸ್ಸನಲ್ಲಿ ಸಂಚರಿಸಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೆÃತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ, ವೃತ್ತ ಕಾರ್ಮಿಕ ನಿರೀಕ್ಷಕರಾದ ರಮೇಶ ಬಿ ಸಿಂದಗಿ, ಪಿ.ಎಸ್.ಆಯ್. ಆನಂದ ಕ್ಯಾರಕಟ್ಟಿ ಅತಿಥಿಗಳಾಗಿ ಉಪಸ್ಥತಿರದ್ದರು.

loading...