ಸಂತ್ರಸ್ತ ನೇಕಾರ ಕುಟುಂಬಕ್ಕೆ ನೆರವು

0
17

ಗುಳೇದಗುಡ್ಡ: ನೆರೆಯ ಹಾವಳಿಯಿಂದ ನಿರಾಶ್ರಿತ ಕಮತಗಿ ಗ್ರಾಮದ ಅನೇಕ ನೇಕಾರರ ಮನೆಗಳಿಗೆ ಶ್ರಿÃ ಜ. ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಹಾಗೂ ರವೀಂದ್ರ ಕಲಬುರ್ಗಿ ಅವರು ಹತ್ತು ಕೆ.ಜಿ.ಅಕ್ಕಿ ಪಾಕೀಟ್‌ಗಳನ್ನು ವಿತರಿಸಿದರು.
ಅವರು ಕಮತಗಿ ಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವರ ಮನವಿ ಮೇರೆಗೆ ಬೆಂಗಳೂರಿನ ಉದ್ಯಮಿಗಳು ನೀಡಿದ ಸಹಾಯಾರ್ಥದ ಹತ್ತು ಕೆ.ಜಿ.ಅಕ್ಕಿ ಪಾಕೇಟ್‌ಗಳನ್ನು ಇತ್ತಿಚೇಗೆ ವಿತರಿಸಲಾಯಿತು.
ಪ್ರವಾಹದಿಂದ ಮನೆಗಳಲ್ಲಿ ನೀರು ಬಂದು ಮನೆಯಲ್ಲಿದ್ದ ನೇಕಾರಿಕೆಯ ಅಪಾರ ಸಾಮಗ್ರಿಗಳು ನೀರಿನಲ್ಲಿ ಮುಳುಗಿ ಸಾಕಷ್ಟು ಹಾನಿಗೊಳಗಾರುವುದನ್ನು ಶ್ರಿÃಗಳು ಹಾಗೂ ನೇಕಾರ ಮುಖಂಡ ರವೀಂದ್ರ ಕಲಬುರ್ಗಿ ವಿಕ್ಷಿÃಸಿದರು.
ಈ ಸಂದರ್ಭದಲ್ಲಿ ಗುಳೇದಗುಡ್ಡz ಗುರುಸಿದ್ದೆÃಶ್ವರ ಬೃಹನ್ಮಠದ ಶ್ರಿÃಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ, ರವಿಂದ್ರ ಕಲಬುರ್ಗಿ, ಪತ್ರಕರ್ತ ವಿಜಯಕುಮಾರ ಬಾಪ್ರಿ, ಮುಖಂಡರಾದ ಬಸವರಾಜ ಕುಂಬಳಾವತಿ, ರಮೇಶ ಜಮಖಂಡಿ ಮತ್ತಿತರರು ಇದ್ದರು.

loading...