ಸಂತ ಮಹಂತರು ದೇಶಕ್ಕೆ ಆಧ್ಯಾತ್ಮದ ಬಲ ನೀಡಿದ್ದಾರೆ: ಶ್ರಿÃಗಳು

0
24

ಹುಕ್ಕೆÃರಿ : ಭಾರತ ವಿಶ್ವಗುರು. ಭಾರತದಲ್ಲಿರುವ ಸಂತ ಮಹಂತರು ಈ ದೇಶಕ್ಕೆ ಆಧ್ಯಾತ್ಮದ ಬಲವನ್ನು ನೀಡಿದ್ದಾರೆ. ವಿಶ್ವದ ಆತ್ಮವೇ ಭಾರತ ಎಂದರೆ ತಪ್ಪಾಗಲಾರದು ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಸೋಮವಾರ ಸ್ಥಳೀಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಶಿಷ್ಯರಿಂದ ೧೦೮ ಕುಂಭಗಳನ್ನು ಅಭಿಷೇಕ ಮಾಡಿಸಿಕೊಳ್ಳುವುದು ಹಾಗೂ ಪಾದಪೂಜೆಯನ್ನು ಮಾಡಿಸಿಕೊಂಡು ಮಾತನಾಡಿದರು. ಗುರುಪೌರ್ಣಮಿ ಯಲ್ಲಿ ಶಿಷ್ಯನಾದವನು ಗುರುವಿಗೆ ನಮಿಸಿ ಆಶೀರ್ವಾದ ಪಡೆಯುವುದು ನಮ್ಮ ದೇಶಿಯ ಪರಂಪರೆ. ಇದರೊಂದಿಗೆ ಗುರುವಿನ ಆರೈಕೆಯನ್ನು ಮಾಡುವುದು ಶಿಷ್ಯನ ಕರ್ತವ್ಯವಾಗಬೇಕು. ಗುರುವಾದವನು ಶಿಷ್ಯರಿಗೆ ಹಾರೈಕೆ ಮಾಡಬೇಕು.

ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ನಮ್ಮ ದೇಶದ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಮುಂದಾಗುವ ಅವಶ್ಯಕತೆ ತುಂಬಾ ಇದೆ. ಗುರುವಿನಕಿಂತ ಯಾರು ದೊಡ್ಡವರಿಲ್ಲ. ಅದಕ್ಕಾಗಿ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ, ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂದಿದ್ದಾರೆ. ಒಬ್ಬ ಗುರು ಬ್ರಹ್ಮನಾಗಬಹುದು. ವಿಷ್ಣು ವಾಗಬಹುದು. ಮಹೇಶ್ವರನಾಗ ಬಹುದು ಆದರೆ ಬ್ರಹ್ಮ ವಿಷ್ಣು ಮಹೇಶ್ವರರು ಗುರುಗಳಾಗಲಿಕ್ಕೆ ಸಾಧ್ಯವಿಲ್ಲ ಎಂದರು.
ಈ ವೇಳೆ ಹಿರಣ್ಯಕೇಶಿ ನದಿಯಿಂದ ತಂದಿರುವ ಗಂಗೆಯಲ್ಲಿ ೧೦೮ ಗಿಡ ಮೂಲಿಕೆಗಳನ್ನು ಹಾಕಿ ಶ್ರೀಗಳಿಗೆ ಅಭಿಷೇಕ ಮಾಡಲಾಯಿತು ಈ ಸಂದರ್ಭದಲ್ಲಿ ಬೆಳಗಾವಿಯ ವಿಜಯ ಶಾಸ್ತ್ರಿಗಳು ಹಾಗೂ ಬೆಳಗಾವಿ ಹುಕ್ಕೇರಿ ಹಿರೇಮಠದ ಮಹಿಳಾ ರುದ್ರ ಬಳಗ, ಹುಕ್ಕೇರಿಯ ತಾಯಿ ಅನ್ನಪೂರ್ಣೇಶ್ವರಿ ಬಳಗ, ಹುಕ್ಕೇರಿ ಹಿರೇಮಠದ ಗುರುಕುಲದ ವಿದ್ಯಾರ್ಥಿಗಳು ಭಾಗಿಯಾಗಿ ಶ್ರೀಗಳ ಆಶೀರ್ವಾದವನ್ನು ಪಡೆದರು. ಗುರುಕುಲದ ಮುಖ್ಯಸ್ಥ ಸಂಪತ್ ಕುಮಾರ ಶಾಸ್ತ್ರಿಗಳು ಕಾರ್ಯಕ್ರಮದ ವೈದಿಕತ್ವವನ್ನು ಮತ್ತು ನಿರೂಪಣೆಯನ್ನು ನೆರವೇರಿಸಿದರು. ಚಂದ್ರಶೇಖರಯ್ಯ ಸೌಡಿ ಸಾಲಿಮಠ ಅವರು, ಶ್ರೀಶೈಲಯ್ಯ ಹಿರೇಮಠ ಉಪಸ್ಥಿತರಿದ್ದರು.

loading...